LatestMain PostNational

ಮೋದಿ, ಮನಮೋಹನ್ ಸಿಂಗ್ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ: ಜ್ಯೋತಿರಾದಿತ್ಯಾ ಸಿಂಧಿಯಾ

ನವದೆಹಲಿ: ಪ್ರಧಾನಿ ಮೋದಿ ಮತ್ತು ಮನಮೋಹನ್ ಸಿಂಗ್ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯಾ ಸಿಂಧಿಯಾ ಉತ್ತರಿಸಿದ್ದಾರೆ.

ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಮತ್ತು ಮನಮೋಹನ್ ಸಿಂಗ್ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರದ್ದು ಫಲಿತಾಂಶ ಆಧಾರಿತ ಕ್ರಿಯಾತ್ಮಕ ನಾಯಕ ಎಂದು ಬಣ್ಣಿಸಿದ್ದಾರೆ.

ಪ್ರಧಾನಿಯಾಗಿ ಮೋದಿ ಮತ್ತು ಮನಮೋಹನ್ ರವರ ನಡುವಿನ ವ್ಯತ್ಯಾಸವನ್ನು ಜ್ಯೋತಿರಾದಿತ್ಯಾಗೆ ಕೇಳಿದಾಗ, ಅವರಿಬ್ಬರ ನಡುವೆ ಹೋಲಿಕೆ ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಇವರಿಬ್ಬರ ನಡುವೆ ಜಮೀನ್ ಆಸ್ಮಾನ್ ಕಾ ಫರಕ್ ಹೈ(ಆಕಾಶ ಮತ್ತು ಭೂಮಿ ನಡುವಿನ ಅಂತರ) ಎಂದು ಹೇಳಿದರು. ಇದನ್ನೂ ಓದಿ: ಜವಾದ್ ಚಂಡಮಾರುತದ ಅಬ್ಬರ – 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಈ ಸಂದರ್ಭದಲ್ಲಿ ತಮ್ಮ 4 ತಿಂಗಳ ರಾಜಕೀಯ ಅನುಭವವನ್ನು ಹಂಚಿಕೊಂಡ ಅವರು, ಇದೊಂದು ಜನರು ನನಗೆ ದೊರಕಿಸಿ ಕೊಟ್ಟ ಸುವರ್ಣಾವಕಾಶವಾಗಿದ್ದು, ನಾನು ರಾಜಕೀಯಕ್ಕೆ ಬರುವ ಮೊದಲು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ ಎಂದರು.

ಪೂರ್ವದಲ್ಲಿ ಜನತಾ ಪಕ್ಷದಲ್ಲಿರದ ಸಿಂಧಿಯಾ ಅವರು ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಇಮ್ರಾನ್‌ ಖಾನ್‌ ಸರ್ಕಾರ ಮಾನ ಹರಾಜು ಹಾಕಿದ ಪಾಕ್‌ ರಾಯಭಾರ ಕಚೇರಿ

2020 ರಲ್ಲಿ ಜ್ಯೋತಿರಾದಿತ್ಯಾ ಸಿಂದಿಯಾ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ, ಈ ವರ್ಷ ಜುಲೈನಿಂದ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಸಿಂದಿಯಾ  ಜೊತೆ 25 ಮಂದಿ ಬೆಂಬಲಿಗರು ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಪತನಗೊಂಡಿತ್ತು.

Leave a Reply

Your email address will not be published.

Back to top button