InternationalLatestMain Post

ಇಮ್ರಾನ್‌ ಖಾನ್‌ ಸರ್ಕಾರ ಮಾನ ಹರಾಜು ಹಾಕಿದ ಪಾಕ್‌ ರಾಯಭಾರ ಕಚೇರಿ

ಇಸ್ಲಾಮಾಬಾದ್: ‌ಸರ್ಕಾರ ಸಂಬಳ ಪಾವತಿಸಿಲ್ಲ ಎಂದು ಆರೋಪಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಟೀಕಿಸಿದ ವೀಡಿಯೋ ಹಾಗೂ ಪೋಸ್ಟ್‌ಗಳು ಸರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್‌ ಖಾತೆಯಿಂದಲೇ ಶೇರ್‌ ಆಗಿದೆ. ಇದು ಪ್ರಧಾನಿ ಇಮ್ರಾನ್‌ ಅವರನ್ನು ಮುಜುಗರಕ್ಕೀಡು ಮಾಡಿದೆ.

ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿರುವ ಕಾರಣ, ಸರ್ಕಾರಿ ಅಧಿಕಾರಿಗಳಾಗಿ ನಾವು ನಿಮಗಾಗಿ 3 ತಿಂಗಳಿಂದ ಸಂಬಳವಿಲ್ಲದೇ ಕೆಲಸ ಮಾಡಿದ್ದೇವೆ. ಶಾಲೆ ಶುಲ್ಕ ಕಟ್ಟಿಲ್ಲ ಎಂದು ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗಿದೆ. ಇದು ಹೊಸ ಪಾಕಿಸ್ತಾನವೇ ಎಂದು ರಾಯಭಾರಿ ಕಚೇರಿಯಿಂದ ಟ್ವೀಟ್‌ ಮಾಡಲಾಗಿದೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಸರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆಗಳು ಹ್ಯಾಕ್‌ ಆಗಿವೆ. ಪೋಸ್ಟ್‌ಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿದೆ.

ಅಧಿಕೃತ ಖಾತೆಗಳು ಹ್ಯಾಕ್‌ ಆಗಿರುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪಿಎಂ ಇಮ್ರಾನ್‌ ಖಾನ್‌ ಅವರ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತಿರುವ ಡಾ. ಖಲೀದ್‌ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

ಪಾಕಿಸ್ತಾನದಲ್ಲಿ ಉಂಟಾಗಿರುವ ಹಣದುಬ್ಬರವು ಕಳೆದ 70 ವರ್ಷಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ ಎಂದು ಅಕ್ಟೋಬರ್‌ನಲ್ಲಿ ವರದಿಯಾಗಿತ್ತು. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಆಹಾರ ಪದಾರ್ಥಗಳ ಬೆಲೆ ದ್ವಿಗುಣಗೊಂಡಿದೆ ಎಂದು ಟೀಕಿಸಿದ್ದವು. ‌

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳಾಗುತ್ತಿವೆ. ಇದರಿಂದ ಪಾಕ್‌ ಸರ್ಕಾರ ಹಾಗೂ ಪ್ರಧಾನಿ ಮುಜುಗರಕ್ಕೀಡಾಗುವಂತಾಗಿದೆ.

Leave a Reply

Your email address will not be published.

Back to top button