ಮುಂಬೈ: ಸತತ 6 ಪಂದ್ಯಗಳನ್ನೂ ಗೆದ್ದಿರುವ ಟೀಂ ಇಂಡಿಯಾ (Team India) ಒಟ್ಟಾರೆ 12 ಅಂಕ ಕಲೆಹಾಕುವುದರೊಂದಿಗೆ ICC ಏಕದಿನ ವಿಶ್ವಕಪ್ (World Cup 2023) 13ನೇ ಆವೃತ್ತಿಯಲ್ಲಿ ಸೆಮಿಫೈನಲ್ಸ್ (World Cup Semi Final) ಸನಿಹಗೊಂಡಿದೆ. ನಾಕೌಟ್ ಹಂತಕ್ಕೆ ನೇರ ಪ್ರವೇಶ ಪಡೆಯಲು ಭಾರತ ಇನ್ನೊಂದೇ ಒಂದು ಪಂದ್ಯ ಗೆಲ್ಲಬೇಕಿದೆ. ಈಗಾಗಲೇ 12 ಅಂಕ ಪಡೆದಿರುವ ಭಾರತ ಇನ್ನೊಂದು ಪಂದ್ಯ ಗೆದ್ದರೆ 14 ಅಂಕಗಳೊಂದಿಗೆ ನೇರವಾಗಿ ಸೆಮಿಸ್‌ಗೆ ಎಂಟ್ರಿ ಕೊಡಲಿದೆ.
40 ಲೀಗ್ ಪಂದ್ಯಗಳಲ್ಲಿ ಈಗಾಗಲೇ 30 ಪಂದ್ಯಗಳು ಮುಗಿದಿವೆಯಾದರೂ ಯಾವೊಂದು ತಂಡವೂ ಇನ್ನೂ ಅಧಿಕೃತವಾಗಿ ನಾಕೌಟ್‌ಗೆ ಅರ್ಹತೆ ಗಳಿಸಿಲ್ಲ. ಆದ್ರೆ 12 ಅಂಕ ಗಳಿಸಿ ಟಾಪ್‌ನಲ್ಲಿರುವ ಭಾರತ ಬಹುತೇಕ ಸೆಮಿಸ್ ಅರ್ಹತೆಯನ್ನು ಖಚಿತಪಡಿಸಿಕೊಂಡಿದೆ. ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ, ನವೆಂಬರ್ 5 ರಂದು ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮತ್ತು ನವೆಂಬರ್ 12 ರಂದು ನೆದರ್ಲೆಂಡ್ಸ್ ವಿರುದ್ಧ ಆಡಲಿರುವ ರೋಹಿತ್ ಸೈನ್ಯ ತನ್ನೆಲ್ಲಾ ಪಂದ್ಯಗಳಲ್ಲಿ ಸೋತರೂ ಅಗ್ರ 4 ಸ್ಥಾನಗಳಲ್ಲಿ ನಾಕೌಟ್ ಪ್ರವೇಶಿಸುವ ಅವಕಾಶ ಹೊಂದಿದೆ.
ಈಗಾಗಲೇ 6 ಪಂದ್ಯಗಳಲ್ಲಿ 5 ರಲ್ಲಿ ಸೋತಿರುವ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್, ಮತ್ತು ಬಾಂಗ್ಲಾದೇಶ ತಂಡಗಳು ಸೆಮಿ ಫೈನಲ್ಸ್ ಸ್ಪರ್ಧೆಯಿಂದ ಹೊರಗುಳಿವೆ. ಈ ತಂಡಗಳು ತಮ್ಮ ಉಳಿದ 3 ಪಂದ್ಯಗಳಲ್ಲಿ ಗೆದ್ದರೂ ತಲಾ ಅಂಕಗಳಿಗೆ 8 ಸೀಮಿತಗೊಳ್ಳಿವೆ. ಇನ್ನೂ 10 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡ +2.032 ರನ್ ರೇಟ್‌ನೊಂದಿಗೆ ಅಂಕ ಪಡೆದಿದ್ದು, ಸೆಮಿಸ್ ತಲುಪುವ ಹಾದಿ ಸುಗಮವಾಗಿಸಿಕೊಂಡಿವೆ. 3 ಮತ್ತು 4ನೇ ಸ್ಥಾನದ ಪೈಪೋಟಿಗಾಗಿ ಕಿವೀಸ್ (New Zealand), ಆಸೀಸ್ (Australia), ಅಫ್ಘಾನ್ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.
6 ಪಂದ್ಯಗಳಲ್ಲಿ ತಲಾ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಮುಂದಿನ ಎಲ್ಲ ಪಂದ್ಯಗಳಲ್ಲೂ ಅತ್ಯಧಿಕ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದಲ್ಲಿ ಮಾತ್ರ 4ನೇ ಸ್ಥಾನಕ್ಕೆ ಜಿಗಿಯಬಹುದಾಗಿದೆ. ಇಷ್ಟೇ ಸಾಲುವುದಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳೂ ಮುಂದಿನ ಪಂದ್ಯಗಳಲ್ಲಿ ಸೋತರಷ್ಟೇ ಈ ಚಾನ್ಸ್ ಸಿಗಲಿದೆ ಎನ್ನಲಾಗಿದೆ.
ಪಾಕ್‌ಗೆ ಮಾಡು ಇಲ್ಲವೇ ಮಡಿ: ಇನ್ನೂ ತನ್ನ ಸೆಮಿಸ್ ಹಾದಿಯ ಕನಸು ಕಂಡಿರುವ ಪಾಕಿಸ್ತಾನ ತಂಡ ಇಂದು (ಅ.31) ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ. ಸೆಮಿಸ್ ಹಾದಿ ಸುಗಮವಾಗಿಸಿಕೊಳ್ಳಲು ಉತ್ತಮ ರನ್‌ರೇಟ್‌ನೊಂದಿಗೆ ಜಯ ದಾಖಲಿಸುವ ಕನಸು ಕಂಡಿದೆ.
Web Stories