ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಪಿ.ಆರ್.ಕೆ ಪ್ರೊಡಕ್ಷನ್ ಈಗಾಗಲೇ 9 ಚಿತ್ರಗಳನ್ನು ಕನ್ನಡ ಸಿನಿಮಾ ರಂಗಕ್ಕೆ ನೀಡಿದೆ. 10 ನೇ ಸಿನಿಮಾ ನಿರ್ಮಾಣಕ್ಕೂ ಮುನ್ನ ಪುನೀತ್ ಅವರು ಅಗಲಿದರು. ಹಾಗಾಗಿ ಈ ನಿರ್ಮಾಣ ಸಂಸ್ಥೆಯು ಮುಂದುವರೆಯುತ್ತಾ ಇಲ್ಲವಾ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಪತಿಯ ಕನಸನ್ನು ಮುಂದುವರೆಯಿಸಿಕೊಂಡು ಹೋಗಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಸಿದ್ಧರಾಗಿದ್ದಾರೆ. ತಮ್ಮ ಸಂಸ್ಥೆಯ 10ನೇ ಸಿನಿಮಾವನ್ನು ಅನೌನ್ಸ್ ಕೂಡ ಮಾಡಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಬಹುತೇಕ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಪಿ.ಆರ್.ಕೆ ಬ್ಯಾನರ್ ನಿಂದ ನಿರ್ದೇಶಕಿಯನ್ನು ಪರಿಚಯಿಸಲಾಗುತ್ತಿದೆ. ಚಿತ್ರಕ್ಕೆ ‘ಆಚಾರ್ ಅಂಡ್ ಕೋ’ ಎಂದು ಹೆಸರಿಡಲಾಗಿದ್ದು, ಸಿಂಧು ಶ್ರೀನಿವಾಸ್ ಮೂರ್ತಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ : ಉಪೇಂದ್ರ ಮೆಚ್ಚಿಕೊಂಡ ಓ ಮೈ ಲವ್ ಸಾಂಗ್
Advertisement
ಯಾರಿದು ಸಿಂಧು ಶ್ರೀನಿವಾಸ್ ಮೂರ್ತಿ?
Advertisement
ಮೂಲತಃ ಬೆಂಗಳೂರಿನವರೇ ಆಗಿರುವ ಸಿಂಧು ಶ್ರೀನಿವಾಸ್ ಮೂರ್ತಿ ಬೆಂಗಳೂರಿನ ಕಾರ್ಮೆಲ್ ಶಾಲೆಯಲ್ಲಿ ಓದಿದವರು. ಜ್ಯೋತಿ ನಿವಾಸ ಕಾಲೇಜು ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ್ದಾರೆ. ಕಾಲೇಜು ದಿನಗಳಿಂದಲೇ ರಂಗಭೂಮಿಯತ್ತ ಆಸಕ್ತಿ. ಹಾಗೂ ಬರವಣಿಗೆಯಲ್ಲೂಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಟನೆ ಮೇಲಿನ ಒಲವಿನಿಂದಾಗಿ ಹಲವು ಸಂಸ್ಥೆಗಳ ಜತೆಯೂ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ
Advertisement
Advertisement
ಸಿನಿಮಾ ರಂಗ ಪ್ರವೇಶ
ಕೌಶಿಕ್ ಮುಖರ್ಜಿ ನಿರ್ದೇಶನದ ‘ಬ್ರಹ್ಮನ್ ನಮನ್’ ಸಿನಿಮಾದ ಮೂಲಕ 2016ರಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದ ಇವರು, ನಂತರದಲ್ಲಿ ಪನ್ನಗಾಭರಣ ನಿರ್ದೇಶನ ಮಾಡಿದ ಹಾಗೂ ಪುನೀತ್ ರಾಜ್ ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ನಟಿಸಿದ್ದಾರೆ. ನಾಯಕನ ತಂಗಿಯಾಗಿ ಈ ಸಿನಿಮಾದಲ್ಲಿ ಸಿಂಧು ಕಾಣಿಸಿಕೊಂಡಿದ್ದಾರೆ. ಅಲ್ಲದೇ, 2016 ರಲ್ಲಿ ಬೆಟರ್ ಲೈಫ್ ಫೌಂಡೇಶನ್ ನಿರ್ಮಾಣ ಮಾಡಿರುವ ವೆಬ್ ಸರಣಿಯಲ್ಲೂ ಕೆಲಸ ಮಾಡಿದ ಅನುಭವ ಸಿಂಧು ಅವರದ್ದು. ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಇವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಡಿಮೆ ಬಜೆಟ್‍ನಲ್ಲಿ ತಯಾರಾಗಿ, ಅಪಾರ ಜನಮನ್ನಣೆ ಪಡೆದಿದ್ದ ಸಿನಿಮಾ ಬಂಡಿ ಚಿತ್ರದಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ, ಬರಹಗಾರರ ತಂಡಲ್ಲೂ ಕೆಲಸ ಮಾಡಿದ್ದಾರೆ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್
ಚೊಚ್ಚಲು ನಿರ್ದೇಶನದ ಚಿತ್ರ
ಸಿಂಧು ಅವರಿಗೆ ಆಚಾರ್ ಅಂಡ್ ಕೋ ಮೊದಲ ನಿರ್ದೇಶನದ ಸಿನಿಮಾ. ಕಾಸ್ಟಿಂಗ್ ಡೈರೆಕ್ಟರ್ ಮತ್ತು ಬರಹಗಾರರಾಗಿ, ನಟಿಯಾಗಿ ಇದೀಗ ನಿರ್ದೇಶನಕ್ಕೂ ಇಳಿದಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ನಾನಾ ವಿಭಾಗಗಳಲ್ಲಿ ಬಹುತೇಕ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿಂದುಮಾಲಿನಿ ಅವರ ಸಂಗೀತ ಸಂಯೋಜನೆ ಇದ್ದರೆ, ಕ್ರಿಯೇಟಿವ್ ಪ್ರೊಡ್ಯುಸರ್ ಡಾನ್ನಿಲಾ ಕೊರ್ರೆಯಾ, ಸ್ಟೈಲಿಸ್ಟ್ ಇಂಚರಾ ಸುರೇಶ್ ಇವರನ್ನೊಳಗೊಂಡಿದೆ ಚಿತ್ರತಂಡ. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ
ಸಿನಿಮಾಗಾಗಿ ವಿಶೇಷ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದು, 60ರ ದಶಕದಲ್ಲಿ ನಡೆದ ಘಟನೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ 60ರ ದಶಕದ ಬೆಂಗಳೂರನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಬಹುದಾಗಿದೆ. ಈ ಕುರಿತು ಟ್ವಿಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ‘ಆಚಾರ್ ಅಂಡ್ ಕೋ ಪಿ.ಆರ್.ಕೆ ಪ್ರೊಡಕ್ಷನ್ನ 10ನೇ ಚಿತ್ರ. 60ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಇದು ಒಳಗೊಂಡಿದೆ’ ಎಂದು ಟ್ವಿಟ್ ಮಾಡಿದ್ದಾರೆ. ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ, ಅತೀ ಶೀಘ್ರದಲ್ಲೇ ಹೆಚ್ಚಿನ ವಿವರವನ್ನು ಕೊಡಲಿದೆ ಪಿ.ಆರ್.ಕೆ ಪ್ರೊಡಕ್ಷನ್.