ಅತೀ ಚಿಕ್ಕ ವಯಸ್ಸಿನಲ್ಲೇ ನಟನೆ ಮತ್ತು ನಿರ್ದೇಶನವನ್ನು ಸಂಭಾಳಿಸಿಕೊಂಡು ಅಪರೂಪ ಎನ್ನುವಂತಹ ಚಿತ್ರ ಕೊಟ್ಟವರು ಐಶಾನಿ ಶೆಟ್ಟಿ. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳದೇ ಪ್ರೇಕ್ಷಕರ ಮನತಟ್ಟುವಂತಹ ಪಾತ್ರಗಳಲ್ಲಿ ಈವರೆಗೂ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಹೊಂದಿಸಿ ಬರೆಯಿರಿ ಮತ್ತು ಧರಣಿ ಮಂಡಲ ಚಿತ್ರಗಳಲ್ಲಿ ನಟಿಸಿರುವ ಇವರು, ಚಿತ್ರವೊಂದರ ನಿರ್ದೇಶನಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ.
Advertisement
ಇಂಜಿನಿಯರಿಂಗ್ ಸ್ಟೂಡೆಂಟ್ ಬದುಕನ್ನು ಆಧರಿಸಿದ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಐಶಾನಿ ಶೆಟ್ಟಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದು, ಮಹತ್ವಾಕಾಂಕ್ಷಿ ಇಟ್ಟುಕೊಂಡಿರುವ ಹುಡುಗಿಯ ಪಾತ್ರವನ್ನು ಈ ಸಿನಿಮಾದಲ್ಲಿ ಅವರು ನಿರ್ವಹಿಸಿದ್ದಾರೆ. ‘ಹೊಂದಿಸಿ ಬರೆಯಿರಿ ಸಿನಿಮಾ ಬಹುತೇಕರ ಬದುಕನ್ನು ಪ್ರತಿನಿಧಿಸುವಂಥದ್ದು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನವನ್ನು ಸಿನಿಮಾದಲ್ಲಿ ತೋರಿಸಿದ್ದರೂ, ಅದು ಬದುಕಿನ ಬೇರೆ ಬೇರೆ ಮಜಲುಗಳ ದರ್ಶನ ಮಾಡಿಸುತ್ತದೆ. ನನ್ನ ಪಾತ್ರವೇ ವಿಶೇಷವಾಗಿದೆ. ತನ್ನ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡ ಹುಡುಗಿಯೊಬ್ಬಳು, ಅದನ್ನು ಪಡೆಯಲು ಏನೆಲ್ಲ ಹರಸಾಹಸ ಮಾಡುತ್ತಾಳೆ ಎನ್ನುವ ಹಿನ್ನೆಲೆಯಿದೆ. ಮೊನ್ನೆಯಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಅಂತಾರೆ ಐಶಾನಿ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್
Advertisement
Advertisement
ಬೋಲ್ಡ್ ಕ್ಯಾರೆಕ್ಟರ್
Advertisement
ಧರಣಿ ಮಂಡಲ ಸಿನಿಮಾದಲ್ಲಿ ಈವರೆಗೂ ಮಾಡದೇ ಇರುವಂತಹ ಪಾತ್ರವನ್ನು ಐಶಾನಿ ಶೆಟ್ಟಿ ನಿರ್ವಹಿಸಿದ್ದಾರಂತೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಹಾದಿ ತಪ್ಪಿರುವ ಹುಡುಗಿಯ ಬದುಕನ್ನು ಐಶಾನಿ ಪಾತ್ರ ಪ್ರತಿನಿಧಿಸುತ್ತದೆಯಂತೆ. ಅಲ್ಲದೇ, ಈವರೆಗೂ ನೋಡಿರದೇ ಇರುವ ಐಶಾನಿ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ‘ನಿಜ, ನಾನು ಈವರೆಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೆ. ಆದರೆ, ಮೊದಲ ಬಾರಿಗೆ ಬೋಲ್ಡ್ ಆಗಿ ಇರುವಂಥ ಪಾತ್ರ ಪೋಷಿಸುತ್ತಿದ್ದೇನೆ. ಅವಳು ಎಲ್ಲ ರೀತಿಯಲ್ಲೂ ಬೋಲ್ಡ್. ಡೈಲಾಗ್, ಪಾತ್ರ ವರ್ತಿಸುವ ರೀತಿ, ಆಕೆಯ ಹಿನ್ನೆಲೆ ಹೀಗೆ ಎಲ್ಲವೂ ಹೊಸದಾಗಿದೆ. ಈ ಕಾರಣಕ್ಕಾಗಿ ಇಂಥದ್ದೊಂದು ಪಾತ್ರವನ್ನು ನಾನು ಒಪ್ಪಿಕೊಂಡೆ’ ಎನ್ನುವುದು ಐಶಾನಿ ಮಾತು. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ
ನಿರ್ದೇಶಕಿಯಾಗುವ ಕನಸು
ಐಶಾನಿ ಶೆಟ್ಟಿ ಈಗಾಗಲೇ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದಕ್ಕೆ ಹಲವು ಪ್ರಶಸ್ತಿಗಳು ಕೂಡ ಬಂದಿವೆ. ಈಗ ಸಿನಿಮಾ ಮಾಡುವತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಥೆಯನ್ನು ಕೂಡ ಬರೆದುಕೊಂಡಿದ್ದಾರೆ. ತಮ್ಮೂರಿನ ಹಿನ್ನೆಲೆಯಾಗಿಟ್ಟುಕೊಂಡು ಕಥೆ ಸಿದ್ಧಪಡಿಸಿರುವ ಅವರು, ಈ ವರ್ಷ ಸಿನಿಮಾ ನಿರ್ದೇಶನವನ್ನು ಮಾಡಲಿದ್ದಾರಂತೆ. ನಿರ್ದೇಶನದ ಜತೆಗೆ ಈ ಸಿನಿಮಾದಲ್ಲಿ ಅವರೇ ಮುಖ್ಯ ಪಾತ್ರವನ್ನೂ ನಿಭಾಯಿಸುತ್ತಿರುವುದು ವಿಶೇಷ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ
‘ನನ್ನೂರಿನ ಕಥೆಯನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ. ಅದೊಂದು ಅಪರೂಪದ ಕಥೆ. ಅದನ್ನು ನಾನು ಜನರಿಗೆ ಹೇಳಲೇಬೇಕಿದೆ. ಹಾಗಾಗಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವೆ. ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊರುತಿದ್ದೇನೆ. ಆದಷ್ಟು ಬೇಗ ಎಲ್ಲ ಮಾಹಿತಿಯನ್ನೂ ಹಂಚಿಕೊಳ್ಳುತ್ತೇನೆ’ ಎಂದರು ಐಶಾನಿ.