ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಕೇವಲ 21 ದಿನಗಳಷ್ಟೇ ಉಳಿದಿದೆ. ಇದೇ ಹೊತ್ತಲ್ಲಿ ಇಡೀ ಕರ್ನಾಟಕವೇ (Karnataka) ಹೆಮ್ಮೆ ಪಡುವ ವಿಚಾರವೊಂದು ಘಟಿಸಿದೆ. ಜನವರಿ 22ರಂದು ಪ್ರತಿಷ್ಠಾಪನೆಯಾಗಲಿರುವ ಬಾಲರಾಮನ (Ramlala) ವಿಗ್ರಹ ಯಾವುದು ಎಂಬ ಕುತೂಹಲಕ್ಕೆ ಹೆಚ್ಚು ಕಡಿಮೆ ತೆರೆ ಬಿದ್ದಿದೆ.
ಕರುನಾಡಿನ ರಾಮ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಮೈಸೂರು (Mysuru) ಮೂಲದ ಕಲಾವಿದ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ರಾಮ್‌ಲಲ್ಲಾ ವಿಗ್ರಹವನ್ನು ರಾಮಮಂದಿರ ಟ್ರಸ್ಟ್ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ.
Advertisement
ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರು ಮೂಲದ ಜಿಎಲ್ ಭಟ್, ರಾಜಸ್ಥಾನದ ಸತ್ಯನಾರಾಯಣ ಪಾಂಡೆಯವರಿಂದ ಮೂರು ಬಾಲರಾಮನ ವಿಗ್ರಹಗಳನ್ನು ಟ್ರಸ್ಟ್ ಕೆತ್ತಿಸಿತ್ತು. ಈ ಮೂರರಲ್ಲಿ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹ ಫೈನಲ್ ಮಾಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.ಹೆರಿಟೇಜ್ ಸೈನ್ಸ್ ತಜ್ಞರು, ಸಾಧುಸಂತರು, ಟ್ರಸ್ಟ್ ಸದಸ್ಯರಿಂದ ಈ ಆಯ್ಕೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?
Advertisement
Advertisement
ಬಾಲರಾಮನ ಮೂರ್ತಿ ವಿಶೇಷ ಏನು?
ಐದು ವರ್ಷದ ಬಾಲಕನ ರೂಪವನ್ನು ಹೊದಿಂದುದ್ದು ಧನುರ್ಧಾರಿ ರೂಪದಲ್ಲಿ ಕೆತ್ತಲಾಗಿದೆ. ಕಮಲದ ಮೇಲೆ ಕುಳಿತಿದ್ದು, ಪವಿತ್ರ ಕೃಷ್ಣಶಿಲೆಯಲ್ಲಿ ನಿರ್ಮಾಣವಾಗಿದೆ. 51 ಇಂಚು ಎತ್ತರವನ್ನು (4.3 ಅಡಿ) ಹೊಂದಿದೆ.
Advertisement
ಬಾಲರಾಮನ ಆಯ್ಕೆಗೆ ಮಾನದಂಡ ಏನು?
ವಿಗ್ರಹ ಕಡೆಯಲು ಬಳಸಿದ ಶಿಲೆಯ ಗುಣಮಟ್ಟ, ರಾಮನ ಬಾಲ್ಯದ ನೋಟ, ವಿಗ್ರಹಕ್ಕೆ ಇರುವ ಸೌಂದರ್ಯ, ಆಕರ್ಷಣೆ , ವಿಗ್ರಹಕ್ಕೆ ಇರುವ ದೈವತ್ವದ ಕಳೆ, ಭಾವ, ವಿಗ್ರಹದ ರಚನಾತ್ಮಕ ಸ್ವರೂಪ, ಕೆತ್ತನೆಯ ಗುಣಮಟ್ಟ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು
ಬಾಲರಾಮನ ಶಿಲಾ ವಿಶೇಷತೆ ಏನು?
ಮೈಸೂರಿನ ಕೃಷ್ಣಶಿಲೆಯಲ್ಲಿ ಮೂರ್ತಿ ಕೆತ್ತಲಾಗಿದ್ದು ಹಾರೋಹಳ್ಳಿಯ ರಾಮ್‌ದಾಸ್ ಜಮೀನಲ್ಲಿ ಈ ಶಿಲೆ ಸಿಕ್ಕಿತ್ತು. ಈ ಜಮೀನನ್ನು ಶ್ರೀನಿವಾಸ್ ಗುತ್ತಿಗೆ ಪಡೆದಿದ್ದರು. ಗುತ್ತಿಗೆದಾರ ಶ್ರೀನಿವಾಸ್ ಅವರನ್ನು ಸುರೇಂದ್ರ ವಿಶ್ವಕರ್ಮ ಸಂಪರ್ಕಿಸಿದ್ದರು.
ಮಾನಯ್ಯ ಬಡಿಗೇರ್ ಮೂಲಕ ಕೃಷ್ಣಶಿಲೆಯ ಪರೀಕ್ಷೆ ಮಾಡಿ ಅಯೋಧ್ಯೆ ಗುರುಗಳ ಸಮ್ಮುಖದಲ್ಲಿ ಮೂರ್ತಿ ಶಿಲೆಯನ್ನು ಅಂತಿಮಗೊಳಿಸಲಾಗಿತ್ತು. 19 ಟನ್ ತೂಕ, 9.8 ಅಡಿ ಉದ್ದದ ಶಿಲೆ ಅಯೋಧ್ಯೆಗೆ ರವಾನಿಸಲಾಗಿತ್ತು. ಶಿಲೆ ಕಳುಹಿಸಿದ ನಂತರ ಪ್ರಚಾರ ಪಡೆಯಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಶಿಲೆ ತೆಗೆದ ಸ್ಥಳವನ್ನು ಮಣ್ಣಿನಿಂದ ಮುಚ್ಚಿ ಭೂಮಿ ಸಮತಟ್ಟು ಮಾಡಲಾಗಿದೆ.