ಪ್ರಿನ್ಸ್ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ರಾಜಮೌಳಿ ಕೊಡುವ ಗಿಫ್ಟ್ ಏನು?

Public TV
1 Min Read
mahesh babu with rajamouli

ಪ್ರಿನ್ಸ್ ಮಹೇಶ್ ಬಾಬು (Mahesh Babu) ಭಕ್ತಗಣ ರಣಕೇಕೆ ಹಾಕುತ್ತಿದೆ. ಇನ್ನೇನು ಹತ್ತಿರ ಬಂದಿರುವ ಪ್ರಿನ್ಸ್ ಹುಟ್ಟುಹಬ್ಬದಂದು (Birthday) ರಾಜಮೌಳಿ ಹೊಸ ಸಿನಿಮಾದ ಪೋಸ್ಟರ್ ಝಲಕ್ ಬಿಡುತ್ತಾರಾ? ಗ್ಲೋಬಲ್ ಸಿನಿಮಾದ ಹೊಸ ಅಪ್‌ಡೇಟ್ ಕೊಡುತ್ತಾರಾ? ಈ ಪ್ರಶ್ನೆಗಳು ಹುಟ್ಟಿವೆ. ಅದಕ್ಕೆ ಉತ್ತರ ಏನು ನೀಡಲಿದ್ದಾರೆ ಜಕ್ಕಣ್ಣ.

mahesh babu

ಎಸ್. ಎಸ್. ರಾಜಮೌಳಿ (SS Rajamouli) ಇನ್ನೇನು ಹಬ್ಬ ಮಾಡಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ ಮಹೇಶ್ ಬಾಬು ಹುಟ್ಟುಹಬ್ಬ ಬರಲಿದೆ. ಆಗಸ್ಟ್ 9 ರಂದು ಬಾಬು ಮತ್ತೊಂದು ಹುಟ್ಟುಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಈ ಹೊತ್ತಲ್ಲೇ ರಾಜಮೌಳಿ ಗ್ಲೋಬಲ್ ಸಿನಿಮಾದ ಪೋಸ್ಟರ್ ಬಿಡುತ್ತಾರಾ? ಇನ್ಯಾವುದಾದರೂ ಟೈಟಲ್ ಹೇಳಿಬಿಡುತ್ತಾರಾ? ಅಥವಾ ಸಣ್ಣದೊಂದು ಟೀಸರ್ ಅನಾರವಣ ಮಾಡುತ್ತಾರಾ? ಪ್ರಿನ್ಸ್ ಫ್ಯಾನ್ಸ್ ಕಣ್ಣುಜ್ಜಿಕೊಂಡು ಕಾಯುತ್ತಿದ್ದಾರೆ. ಇದನ್ನೂ ಓದಿ:ಮತ್ತೆ ಬೋಲ್ಡ್ ಫೋಟೋ ಹಂಚಿಕೊಂಡ ಸಾನ್ಯಾ ಅಯ್ಯರ್

mahesh babu

ರಾಜಮೌಳಿ ಹಾಗೂ ಪ್ರಿನ್ಸ್ ಸಿನಿಮಾ ಈಗಾಗಲೇ ಅಖಾಡ ಸಿದ್ಧ ಮಾಡಿಕೊಂಡಿದೆ. ವಿಜಯೇಂದ್ರ ಪ್ರಸಾದ್ ಬರೆದ ಕತೆಯನ್ನು ಹಾಲಿವುಡ್ ರೇಂಜ್‌ನಲ್ಲಿ ನಿರ್ಮಿಸಲು ಸಜ್ಜಾಗಿದೆ. ಇಂಡಿಯಾನಾ ಜೋನ್ಸ್ ನೋಡಿದ್ದರಲ್ಲವೆ? ಅದೇ ರೀತಿ ಆಫ್ರಿಕಾದ ಕಾಡುಗಳಲ್ಲಿ ಮಹೇಶ್ ಬಾಬು ಅಡ್ವೆಂಚರ್ ಮಾಡಲಿದ್ದಾರೆ. ಭಾರತದಲ್ಲಿ ಈ ಹಿಂದೆ ಇಂಥ ಕತೆ ಬಂದಿಲ್ಲ ಎನ್ನುತ್ತದೆ ಮೌಳಿ ತಂಡ. ಇದರೊಂದಿಗೆ ಹನುಮಂತನ ನೆರಳಿರುವ ಪಾತ್ರವನ್ನು ಹೊಸೆದಿದ್ದಾರಂತೆ ವಿಜಯೇಂದ್ರ ಪ್ರಸಾದ್. ಕುತೂಹಲ ಆಕಾಶಕ್ಕೇರಿದೆ.

ಚಿತ್ರೀರಕಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೇಗಿದೆ ತಯಾರಿ ಎನ್ನುವುದು ಗೊತ್ತಾಗಿಲ್ಲ. ಎಲ್ಲವೂ ನಿಗೂಢ ನಿಗೂಢ. ಎಲ್ಲ ಸಿದ್ಧವಾದ ನಂತರ ರಾಜಮೌಳಿ ಕೆಲವು ಗುಟ್ಟು ಹೊರ ಬಿಡುಬಹುದು. ಅಂದ ಹಾಗೆ ಬಾಲಿವುಡ್‌ನಿಂದ ದೀಪಿಕಾ ಪಡುಕೋಣೆಯನ್ನು ಕರೆಸುವ ಪ್ಲಾನ್ ನಡೆಯುತ್ತಿದೆ. ಈಗಾಗಲೇ ಪ್ರಭಾಸ್ ಜೊತೆ ಕಲ್ಕಿ ಸಿನಿಮಾದಲ್ಲಿ ಡಿಪ್ಪಿ ನಟಿಸಿದ್ದಾರೆ. ಇದಕ್ಕೂ ಎಸ್ ಅಂದರೆ ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ದೀಪಿಕಾ ಎಂಟ್ರಿ ಆಗುತ್ತದೆ. ಎಲ್ಲರ ಕಣ್ಣು ಆಗಸ್ಟ್ 9ರ ಮೇಲಿದೆ.

Web Stories

Share This Article