ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆ.7 ರಂದು ಗ್ರಾಮೀಣ ಶಾಲೆಯ 750 ಹೆಣ್ಣುಮಕ್ಕಳೇ ತಯಾರಿಸಿರುವ ಅತ್ಯಂತ ಚಿಕ್ಕ ಆಜಾದಿ ಉಪಗ್ರಹಗಳನ್ನು `ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (SSLV) ವಾಹಕದ ಮೂಲಕ ಹಾರಿಬಿಡುತ್ತಿದೆ.
Advertisement
ಭಾರತ 75ನೇ ಅಮೃತ ಮಹೋತ್ಸವ ಆಚರಿಸುತ್ತಿರುವ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ 8 ಕೇಜಿ ತೂಕದ `ಆಜಾದಿ ಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ಯಲಿದೆ. ಈ ವಾಹಕವು ತ್ರಿವರ್ಣ ಧ್ವಜವನ್ನೂ ನಭಕ್ಕೆ ಹೊತ್ತೊಯ್ಯಲಿದೆ. ಈ ಹೊಸ ಪ್ರಯತ್ನದ ಮೂಲಕ ವಿಶ್ವದ ಚಿಕ್ಕ ರಾಕೆಟ್ಗಳ ಮಾರುಕಟ್ಟೆಗೆ ಅಡಿ ಇಡಲು ಇಸ್ರೋ ಸಜ್ಜಾಗಿದೆ. ಇದು ಎಸ್ಎಸ್ಎಲ್ವಿಯ ಮೊದಲ ಉಡಾವಣೆಯಾಗಿದ್ದು, 145 ಕೆಜಿ ತೂಕದ ಭೂ ಪರಿವೀಕ್ಷಣಾ ಉಪಗ್ರಹ ಹಾಗೂ `ಆಜಾದಿ ಸ್ಯಾಟ್’ಗಳನ್ನು ಹೊತ್ತೊಯ್ಯಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪಕ್ಷ ಗೆದ್ದ ಬಳಿಕವೇ ಮುಖ್ಯಮಂತ್ರಿ ವಿಚಾರ – ಮುಂದಿನ ಸಿಎಂ ಚರ್ಚೆಗೆ ರಾಹುಲ್ ಗಾಂಧಿ ಬ್ರೇಕ್
Advertisement
Advertisement
ಅಲ್ಲದೇ ಎಸ್ಎಸ್ಎಲ್ವಿ ಕಡಿಮೆ ಸುತ್ತುವ ಅವಧಿಯನ್ನು ಹೊಂದಿದ್ದು, ಕಡಿಮೆ ಎತ್ತರದ ಕಕ್ಷೆಗಳಿಗೆ ಉಪಗ್ರಹವನ್ನು ಸೇರಿಸುವ ಬಾಹ್ಯಾಕಾಶ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಲಿದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದರ್ಗಾಕ್ಕೆ ತೆರಳಿ ವಾಪಸ್ಸಾಗ್ತಿದ್ದಾಗ ಅಪಘಾತ- ಒಂದೇ ಕುಟುಂಬದ 6 ಮಂದಿ ದುರ್ಮರಣ
Advertisement
ಆ.7ರಂದು ಮುಂಜಾನೆ 9.18ಕ್ಕೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಗುತ್ತದೆ. ಸುಮಾರು 13.2 ನಿಮಿಷಗಳ ಹಾರಾಟದ ಬಳಿಕ ಉಪಗ್ರಹಗಳನ್ನು ಈ ರಾಕೆಟ್ ಕಕ್ಷೆಗೆ ತಲುಪಿಸಲಿದೆ.
ಆಜಾದಿ ಸ್ಯಾಟ್ ವಿಷೇಷತೆ: ಸ್ವಾತಂತ್ರ್ಯ ದೊರಕಿ 75 ವರ್ಷ ಆದ ಕಾರಣ ದೇಶ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ವಿಶೇಷವಾಗಿ 75 ಪೇಲೋಡ್ ಇರುವ 75 ಗ್ರಾಮೀಣ ಸರ್ಕಾರಿ ಶಾಲೆಗಳ 750 ಮಕ್ಕಳು ಆಜಾದಿ ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದಾರೆ. ಇದು `ಆಜಾದಿ ಸ್ಯಾಟ್’ ವಿಶೇಷತೆ. ಈ ಮೂಲಕ ಬಾಹ್ಯಾಕಾಶ ಅಧ್ಯಯನದಲ್ಲಿ ಬಾಲಕಿಯರಿಗೂ ಪ್ರೇರಣೆ ನೀಡುವುದು ಇದರ ಹಿಂದಿನ ಉದ್ದೇಶ.
ಎಸ್ಎಸ್ಎಲ್ವಿ ವಿಶೇಷತೆ: ಇಸ್ರೋದ ವರ್ಕ್ಹಾರ್ಸ್ ಎಂದೇ ಖ್ಯಾತಿ ಪಡೆದಿರುವ ಪಿಎಸ್ಎಲ್ವಿಗಿಂತ ಬರೋಬ್ಬರಿ 10 ಮೀ. ಚಿಕ್ಕದಾಗಿರುವ ಎಸ್ಎಸ್ಎಲ್ವಿ ಕೇವಲ 34 ಮೀ. ಉದ್ದ ಹಾಗೂ 2 ಮೀ. ವ್ಯಾಸವನ್ನು ಹೊಂದಿದೆ. ಈ ರಾಕೆಟ್ ಒಟ್ಟು 120 ಟನ್ ತೂಕವಿದ್ದು, ಸುಮಾರು 500 ಕೇಜಿ ಪೇಲೋಡ್ ಅನ್ನು 500 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.