Bengaluru CityDistrictsKarnatakaLatestLeading NewsMain Post

ಪಕ್ಷ ಗೆದ್ದ ಬಳಿಕವೇ ಮುಖ್ಯಮಂತ್ರಿ ವಿಚಾರ – ಮುಂದಿನ ಸಿಎಂ ಚರ್ಚೆಗೆ ರಾಹುಲ್ ಗಾಂಧಿ ಬ್ರೇಕ್

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿದ್ದು ಸಿಎಂ ಹಾಗೂ ಡಿಕೆಶಿ ಸಿಎಂ ಕೂಗಿಗೆ ತಾತ್ಕಾಲಿಕ ವಿರಾಮ ಬಿದ್ದಂತೆ ಕಾಣ್ತಿದೆ. ಸೈಲೈನ್ಸ್ ಪ್ಲೀಸ್ ಅಂತ ಪದೇ ಪದೇ ಮುಂದಿನ ಸಿಎಂ ಎಂದು ಕೂಗುವ ಆಪ್ತ ನಾಯಕರಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಇಂತದೊಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಕೂಗಿಗೆ ತಾತ್ಕಾಲಿಕ ವಿರಾಮವನ್ನ ಎರಡೂ ಬಣ ಘೋಷಿಸಲು ನಿರ್ಧರಿಸಿವೆ. ಸಿದ್ದರಾಮೋತ್ಸವದ ಸಂದರ್ಭದಲ್ಲಿ ನಡೆದ ಸಿಎಂ ಕುರ್ಚಿ ಕದನಕ್ಕೆ ಹೈ ಕಮಾಂಡ್ ಒಗ್ಗಟ್ಟಿನ ಮಂತ್ರ ಭೋದಿಸಿತ್ತು. ಅದನ್ನ ಪಾಲಿಸುವಂತೆ ಇಬ್ಬರು ನಾಯಕರಿಗೂ ಹೈಕಮಾಂಡ್ ಸೂಚನೆ ನೀಡಿದೆ. ಇದನ್ನೂ ಓದಿ: ಡಿಕೆಶಿ ಕೈಎತ್ತಿದ ಬಳಿಕ ಕುಮಾರಸ್ವಾಮಿ ಅಬ್ಬೇಪಾರಿ ಆಗಿ ಬೀದಿಗೆ ಬಂದ್ರು, ಸಿದ್ದರಾಮಯ್ಯಗೂ ಇದೇ ಗತಿ: ಆರ್. ಅಶೋಕ್

ಮುಂದಿನ ಚುನಾವಣೆಯನ್ನ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಇದಕ್ಕೆ ವ್ಯತಿರಿಕ್ತವಾದ ವಿಚಾರ ಮುಂದಿಟ್ಟುಕೊಂಡು ಆಂತರಿಕ ರಾಜಕೀಯದಲ್ಲಿ ತೊಡಗುವವರು ಅದೆಷ್ಟೇ ದೊಡ್ಡ ನಾಯಕರಾಗಿದ್ದರೂ ಹೈಕಮಾಂಡ್ ಸಹಿಸುವುದಿಲ್ಲ. ಸಿದ್ದರಾಮಯ್ಯ ಜನ್ಮ ದಿನದ ಅಮೃತ ಮಹೋತ್ಸವ ಸಮಾರಂಭದ ಹಿಂದಿನ ದಿನ ರಾಜ್ಯ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ 35 ಮಂದಿ ನಾಯಕರನ್ನು ಉದ್ದೇಶಿಸಿ ವರಿಷ್ಠ ರಾಹುಲ್ ಗಾಂಧಿ ಇಂತಹದೊಂದು ಸ್ಪಷ್ಟನಿರ್ದೇಶನ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಖರ್ಗೆ ಸಮ್ಮುಖದಲ್ಲಿ ನ್ಯಾಷನಲ್‌ ಹೆರಾಲ್ಡ್‌ ಕಚೇರಿ ಶೋಧ: ಅಧಿವೇಶನದ ಮಧ್ಯೆ ಸಮನ್ಸ್‌ ಜಾರಿಗೆ ಕಾಂಗ್ರೆಸ್‌ ಕಿಡಿ

ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳು ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ರಾಜ್ಯ ನಾಯಕರ ನಡುವೆ ನಡೆದಿರುವ ಸಿಎಂ ಹುದ್ದೆ ರೇಸ್ ವಿಚಾರವನ್ನು ಪ್ರಸ್ತಾಪಿಸಿದ್ದರು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೈಕಮಾಂಡ್ ಹೇಳಿದ್ದರೂ ರಾಜ್ಯದ ಕೆಲ ನಾಯಕರು ಹಾಗೂ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾಪಿಸಿ ಗೊಂದಲ ನಿರ್ಮಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯ ದುರಾಡಳಿತದ ಬಗ್ಗೆ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ. ಇಂತಹ ಪೂರಕ ವಾತಾವರಣ ಇರುವ ಸನ್ನಿವೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಪ್ರತಿಯೊಬ್ಬರೂ ತಮ್ಮ ಗಮನ ಕೇಂದ್ರೀಕರಿಸಬೇಕು. ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಇದಕ್ಕೆ ಭಿನ್ನವಾಗಿ ಯಾರಾದರೂ ಆಂತರಿಕ ರಾಜಕೀಯದಲ್ಲಿ ತೊಡಗಿದರೆ, ಅಂತಹವರು ಹಾಗೂ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಹೈಕಮಾಂಡ್‌ನ ಸಂಪೂರ್ಣ ಸಹಮತಿ ಇರುತ್ತದೆ. ಇಂತಹ ನಡವಳಿಕೆಯನ್ನು ಹೈಕಮಾಂಡ್ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

Live Tv

Leave a Reply

Your email address will not be published.

Back to top button