ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿರುವುದು ರಾಜಕೀಯ ಪ್ರೇರಿತ. ಈ ಸಮಯದಲ್ಲಿ ದಾಳಿ ನಡೆಸಿರುವುದು ಸರಿಯಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಐಟಿ ದಾಳಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಅವರು, ರೆಸಾರ್ಟ್‍ಗೆ ಹೋಗಿ ದಾಳಿ ಮಾಡಿದ್ದು ಸರಿಯಲ್ಲ. ರೆಸಾರ್ಟ್‍ಗೆ ಹೋಗಿ ಗುಜರಾತ್ ಶಾಸಕರಿಗೆ ಅಮಿಷ ಒಡ್ಡಿದ್ದಾರೆ. ಇದು ಕೇಂದ್ರ ಸರ್ಕಾರದ ಪಿತೂರಿ ಅಂತ ಹೇಳಿದ್ದಾರೆ.
Advertisement
ಕೇಂದ್ರ ಸಚಿವ ಅನಂತಕುಮಾರ್ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಬಿಜೆಪಿ ರಾಜ್ಯಾಧ್ಯಕ್ಷರ ಬಿಎಸ್ ವೈ ಮೇಲೆ ಆರೋಪ ಇದೆ. ಇವರು ಡಿಕೆಶಿ ಅವರನ್ನು ರಾಜೀನಾಮೆ ಕೇಳೋದಕ್ಕೆ ಯಾವ ನೈತಿಕತೆ ಇದೆ. ಡಿಕೆಶಿ ಮನೆಯಲ್ಲಿ ಏನು ಸಿಕ್ಕಿದೆ ಸಿಕ್ಕಿಲ್ಲ ಅನ್ನೋದು ನಮಗೆ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿಗೆ ಸಿಆರ್ ಪಿಎಫ್ ಬಳಸಿದ್ದು ಏಕೆ..? ಈ ಬಗ್ಗೆ ಸಚಿವರ ಸಭೆಯನ್ನು ಕರೆದು ಮಾತನಾಡುತ್ತೇನೆ ಅಂದ್ರು.
Advertisement
ಐಟಿ ದಾಳಿಗೆ ನನ್ನ ವಿರೋಧ ಇಲ್ಲ. ಯಾರ ಮನೆ ಮೇಲೆ ದಾಳಿಯಾದ್ರೂ ನಾನು ವಿರೋಧಿಸಲ್ಲ. ಆದ್ರೆ ಈ ಸಮಯದಲ್ಲಿ ದಾಳಿ ನಡೆಸಿ, ಗುಜರಾತ್ ಶಾಸಕರಿಗೆ ಅಮಿಷಯೊಡ್ಡಿದ್ದು ಅಕ್ಷಮ್ಯ ಅಪರಾಧ. ಡಿಕೆಶಿ ಆರೋಪಗಳಿಂದ ಹೊರಬರುತ್ತಾರೋ.. ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ಮನೆಯಲ್ಲಿ ಏನು ಸಿಕ್ಕಿದೆ ಏನು ಅಂತಾ ಗೊತ್ತಿಲ್ಲ ಅಂತ ಸಿಎಂ ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement
ಸಚಿವ ಡಿ.ಕೆ.ಶಿವಕುಮಾರ್ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿ ರಾಜಕೀಯ ಪ್ರೇರಿತ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ.#ದ್ವೇಷದ ರಾಜಕಾರಣ
— CM of Karnataka (@CMofKarnataka) August 2, 2017
Advertisement
ಡಿಕೆಶಿ ಮನೆಯಲ್ಲಿ 3ನೇ ದಿನವೂ ಮುಂದುವರಿದ ಐಟಿ ರೇಡ್ https://t.co/NECdmDca7T#Mysuru #Bengaluru #DKShivakumar #ITRaid pic.twitter.com/zTimrAREgH
— PublicTV (@publictvnews) August 4, 2017
ಸಿಎಂ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್ ತಾಯಿ-ವಿಡಿಯೋ ನೋಡಿhttps://t.co/I8bG2l3iXu#DKShivakumar #Congress #ITraid #Siddaramaiah pic.twitter.com/GOhKNuWS5B
— PublicTV (@publictvnews) August 3, 2017
ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ https://t.co/jE7jfDOqnh #DKShivakumar #ITRaid #Bengaluru pic.twitter.com/ah6lHpVjl6
— PublicTV (@publictvnews) August 3, 2017