CinemaKarnatakaLatestLeading NewsMain PostSandalwood

ತೆಲುಗು ಸೂಪರ್ ಸ್ಟಾರ್ ಕೃಷ್ಣ ಮಾಡಿದ ದಾಖಲೆಗಳು ಯಾವವು?

ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರು ಸಿನಿಮಾ ರಂಗದಲ್ಲಿ ಮಾಡಿದ ದಾಖಲೆಗಳನ್ನೂ ಈವರೆಗೂ ಯಾರೂ ಮುರಿಯುವುದಕ್ಕೆ ಸಾಧ್ಯವಾಗಿಲ್ಲ. ಅಲ್ಲದೇ, ತೆಲುಗು ಸಿನಿಮಾ ರಂಗದಲ್ಲಿ ಅವರು ಹಲವು ಮೊದಲುಗಳಿಗೆ ಕಾರಣವೂ ಆಗಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ರಾಜಕಾರಣಿಯಾಗಿ ಸ್ಟುಡಿಯೋ ಮಾಲೀಕರು ಆಗಿ ಹತ್ತು ಹಲವು ದಾಖಲೆಗಳನ್ನು ಬರೆದಿದ್ದಾರೆ. ಆ ದಾಖಲೆಗಳು ಇವತ್ತಿಗೂ ಹಾಗೆಯೇ ಉಳಿದಿವೆ.

ತೆಲುಗಿನ ಮೊದಲ ಸಿನಿಮಾ ಸ್ಕೋಪ್ ಚಿತ್ರ ಅಲ್ಲೂರಿ ಸೀತಾರಾಮ ರಾಜು ಸಿನಿಮಾದ ಹೀರೋ ಇವರಾಗಿದ್ದಾರೆ. ಒಂದೇ ವರ್ಷದಲ್ಲಿ ಇವರು 18 ಸಿನಿಮಾಗಳು ಬಿಡುಗಡೆಯಾಗಿವೆ. ಈ ದಾಖಲೆಯನ್ನು ಈವರೆಗೂ ಯಾರೂ ಮುರಿಯುವುದಕ್ಕೆ ಸಾಧ್ಯವಾಗಿಲ್ಲ. 1972ರಲ್ಲಿ ಈ ದಾಖಲೆಯಾಗಿದ್ದು, ಈವರೆಗೂ ಅಷ್ಟೊಂದು ಸಿನಿಮಾಗಳು ಯಾವ ನಟರು ಮಾಡಿಲ್ಲ. ಇದನ್ನೂ ಓದಿ:`ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್

ಟಾಲಿವುಡ್ ನ ಮೊದಲ ಕೌಬಾಯ್ ಆಗಿ ಕೃಷ್ಣ ನಟಿಸಿದ್ದಾರೆ. ತೆಲುಗಿನ ಮೊದಲ 70 ಎಂಎಂ ಚಿತ್ರಕ್ಕೆ ಕೃಷ್ಣ ಅವರೇ ಹೀರೋ. ಮೊದಲ ಈಸ್ಟ್ ಮನ್ ಕಲರ್ ಸಿನಿಮಾದಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ತೆಲುಗಿನ ಮೊದಲ ಡಿಟಿಎಸ್ ಎಫೆಕ್ಟ್ ಸಿನಿಮಾ ವೀರ ಲೇವರ ಚಿತ್ರದಲ್ಲೂ ಇವರು ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಾಲಯ ಸ್ಟುಡಿಯೋಸ್ ಸ್ಥಾಪಿಸುವ ಮೂಲಕ ಸಿನಿಮಾ ರಂಗಕ್ಕೆ ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ.

ವಿಜಯ ನಿರ್ಮಲಾ ಜೊತೆ 48 ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ವಿಜಯಾ ನಿರ್ಮಾಲ ಇವರ ಮೊದಲ ಪತ್ನಿ ಕೂಡ ಆಗಿದ್ದಾರೆ. ನಟಿ ಜಯಪ್ರದಾ ಜೊತೆಗೆ 47 ಸಿನಿಮಾಗಳನ್ನು ಮಾಡಿದ ದಾಖಲೆಯೂ ಇವರ ಜೊತೆಗಿದೆ. 55 ವರ್ಷಗಳ ಕಾಲ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡ ಅಪರೂಪದ ನಟ. 350ಕ್ಕೂ ಅಧಿಕ ಚಿತ್ರಗಳಲ್ಲಿ ಕೃಷ್ಣ ನಟಿಸಿದ್ದಾರೆ.

ಗೂಢಚಾರಿ 116, ಪ್ರೈವೆಟ್ ಮಾಸ್ಟರ್, ಮಂಚಿ ಕುಟುಂಬಂ, ಮೋಸಗಾಡಿಕಿ ಮೋಸಗಾಳ್ಳು,ನಂಬರ್ 1, ಸಿಂಹಾಸನಂ, ರಾಮ್ ರಾಬರ್ಟ್ ರಹೀಂ, ಅಲ್ಲೂರಿ ಸೀತಾರಾಮ ರಾಜು ಹೀಗೆ ಸಾಕಷ್ಟು ಚಿತ್ರಗಳು ಸೂಪರ್ ಹಿಟ್ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ.

Live Tv

Leave a Reply

Your email address will not be published. Required fields are marked *

Back to top button