ರಷ್ಯಾದ ಏರ್‌ಬೇಸ್‌ ಉಡೀಸ್‌ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್‌ ವಿಶೇಷವೇನು ಗೊತ್ತಾ?

Public TV
4 Min Read
FPV Drones

ಷ್ಯಾದ (Russia) ಮೇಲೆ ಉಕ್ರೇನ್‌ (Ukraine) ಜೂ.1ರಂದು ನಡೆಸಿದ ಡ್ರೋನ್‌ ದಾಳಿಯಲ್ಲಿ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಧ್ವಂಸವಾಗಿವೆ. ರಷ್ಯಾದಲ್ಲಿ ಪ್ರಬಲವಾದ ಮಿಲಿಟರಿ ವ್ಯವಸ್ಥೆ ಇದ್ದರೂ ಉಕ್ರೇನ್ ಭಾರೀ ಪ್ರಮಾಣದ ದಾಳಿ‌ಗೆ ಬಳಸಿದ ಎಫ್‌ಪಿವಿ ಡ್ರೋನ್‌ಗಳ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆ ಆರಂಭವಾಗಿದೆ.

FPV ಡ್ರೋನ್‌ ಎಂದರೇನು?
ಫಸ್ಟ್‌ ಪರ್ಸನ್‌ ವೀವ್‌ ಡ್ರೋನ್‌ನಲ್ಲಿ (FPV Drones ) ಅಳವಡಿಸಲಾದ ಕ್ಯಾಮೆರಾದ ಮೂಲಕ ಆಪರೇಟರ್‌ಗೆ ನೇರ ದೃಶ್ಯಗಳನ್ನು ರವಾನಿಸುತ್ತವೆ. ಸ್ಮಾರ್ಟ್‌ಫೋನ್‌ಗಳು ಅಥವಾ ಇತರ ಸಾಧನಗಳನ್ನು ಬಳಸಿಕೊಂಡು ಈ ದೃಶ್ಯಾವಳಿಗಳನ್ನು ವೀಕ್ಷಿಸಬಹುದು. ಇನ್ನೂ ದಾಳಿಯ ವೇಳೆ, ರಿಮೋಟ್‌ ಬಳಸಿ ಟಾರ್ಗೆಟ್‌ನ್ನು ನಾಶಪಡಿಸಲಾಗುತ್ತದೆ.

FPV Drones 2

FPV ಡ್ರೋನ್‌ಗಳನ್ನು ಮಾಧ್ಯಮ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈಗ ಮಿಲಿಟರಿ ಕಾರ್ಯಾಚರಣೆಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಡ್ರೋನ್‌ಗಳು ಸಾಮಾನ್ಯವಾಗಿ ಕಣ್ಗಾವಲು ಡ್ರೋನ್‌ಗಳಿಗೆ ಹೋಲಿಸಿದರೆ ಕಡಿಮೆ ವ್ಯಾಪ್ತಿಯನ್ನು ಹೊಂದಿರುತ್ತವೆ. ಇದನ್ನೂ ಓದಿ: ರಷ್ಯಾದ ವಾಯುನೆಲೆಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ – 40 ವಿಮಾನಗಳು ಧ್ವಂಸ

ಯುದ್ಧದಲ್ಲಿ FPV ಡ್ರೋನ್‌ಗಳ ಬಳಕೆ ಏಕೆ?
FPV ಡ್ರೋನ್‌ಗಳ ಬೆಲೆ ಬಹಳ ಕಡಿಮೆ. FPV ಡ್ರೋನ್‌ನ ಬೆಲೆಯನ್ನು ಸುಮಾರು 500 ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಯುದ್ದದಲ್ಲಿ ಬಳಸುವ ಬೇರೆ ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ, ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗುತ್ತದೆ.

FPV Drones 3

FPV ಡ್ರೋನ್‌ಗಳನ್ನು ಪತ್ತೆಹಚ್ಚುವುದು ಕಷ್ಟ, ಇದರಿಂದಾಗಿ ಶತ್ರು ನೆಲೆಗಳ ಮೇಲೆ ಸುಲಭವಾಗಿ ದಾಳಿ ಮಾಡಬಹುದಾಗಿದೆ. ಇದೇ ಕಾರಣಕ್ಕೆ ಈಗ ಉಕ್ರೇನ್ ಮತ್ತು ರಷ್ಯಾ ಎರಡೂ ತಮ್ಮ ಮಿಲಿಟರಿ ಶಕ್ತಿ ಹೆಚ್ಚಿಸಲು ಡ್ರೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿವೆ.

ಲಕ್ಷ ವೆಚ್ಚ.. ಕೋಟಿ ಕೋಟಿ ಮೌಲ್ಯದ ವಿಮಾನ, ಟ್ಯಾಂಕರ್ ಧ್ವಂಸ!
ಎಫ್‌ಪಿವಿ ಡ್ರೋನ್‌ಗಳು ಕಡಿಮೆ ವೆಚ್ಚದ್ದಾಗಿದ್ದು, ಇವುಗಳನ್ನು ಡ್ರೋನ್ ರೇಸಿಂಗ್ ಮತ್ತು ಚಿತ್ರೀಕರಣಕ್ಕೆ ಬಳಕೆ ಮಾಡಲಾಗುತ್ತಿತ್ತು. ಈಗ ಇವುಗಳನ್ನು ಯುದ್ಧಕ್ಕೂ ಬಳಕೆ ಮಾಡಲಾಗುತ್ತಿದೆ. ಇವುಗಳಿಗೆ ಸ್ಫೋಟಕಗಳನ್ನು ಅಳವಡಿಸಿ, ಶತ್ರುಗಳ ನೆಲಕ್ಕೆ ಕಳುಹಿಸಿ ಸ್ಫೊಟಿಸಲಾಗುತ್ತಿದೆ. ಈ ಡ್ರೋನ್‌ಗಳ ಬೆಲೆ ಕಡಿಮೆ ಆದ್ರೂ, ಬೃಹತ್‌ ಟ್ಯಾಂಕರ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ.

FPV Drones 5

ಆಪ್ಟಿಕಲ್‌ ಫೈಬರ್‌
ಈ ಡ್ರೋನ್‌ಗಳನ್ನು ಆಪ್ಟಿಕಲ್‌ ಫೈಬರ್‌ ಬಳಸಿ ತಯಾರಿಸಲಾಗುತ್ತದೆ. ಇವು 18 ರಿಂದ 20 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಅತಿ ವೇಗ ಹಾಗೂ ಸಣ್ಣ ಗಾತ್ರ ಹೊಂದಿರುವುದರಿಂದ ಶತ್ರು ರಾಷ್ಟ್ರಗಳ ರಾಡಾರ್‌ಗೆ ಇವುಗಳನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಇದು ದಾಳಿಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಈ ಡ್ರೋನ್‌ಗಳು ಅಷ್ಟೊಂದು ಬಲಶಾಲಿನಾ?
ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ  (Russia – Ukraine War) ದಿನೇ ದಿನೇ ಉಲ್ಬಣವಾಗುತ್ತಿದೆ. ಇತ್ತೀಚೆಗೆ ವಿಶ್ವವೇ ಬೆಚ್ಚಿ ಬೀಳುವಂತೆ ರಷ್ಯಾ ಮೇಲೆ ಉಕ್ರೇನ್‌ ದಾಳಿ ಮಾಡಿದೆ. ದಾಳಿಯಲ್ಲಿ ರಷ್ಯಾದ ಐದು ಏರ್‌ಬೇಸ್‌ಗಳು ಉಡೀಸ್‌ ಆಗಿವೆ. ಇದರಿಂದ FPV ಡ್ರೋನ್‌ಗಳು ಅಷ್ಟೊಂದು ಬಲಶಾಲಿನಾ ಎಂಬ ಚರ್ಚೆಗಳು ಆರಂಭವಾಗಿದೆ. ಉಕ್ರೇನ್‌ ರಷ್ಯಾದ ಮೇಲೆ ನಡೆಸಿದ ದಾಳಿಯ ಬೆನ್ನಲ್ಲೇ ಭಾರತದಲ್ಲೂ ಎಫ್‌ಪಿವಿ ಡ್ರೋನ್‌ಗಳ ಬಗ್ಗೆ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಭಾರತ ಹಾಗೂ ಪಾಕ್‌ ನಡುವಿನ ಉದ್ವಿಗ್ನತೆಯಿಂದ ಈ ವಿಚಾರ ಮತ್ತಷ್ಟು ಗಂಭೀರ ಚರ್ಚೆಗೆ ಕಾರಣವಾಗಿದೆ.

FPV Drones 1

40 ಲಕ್ಷ ಡ್ರೋನ್‌ ಉತ್ಪಾದನೆ ಗುರಿ!
ಯುದ್ಧದ ಆರಂಭದಿಂದಲೂ ಉಕ್ರೇನ್ FPV ಡ್ರೋನ್‌ಗಳನ್ನು ಬಳಸುತ್ತಿದೆ. ಮಾರ್ಚ್ 2025 ರಲ್ಲಿ 1,000 FPV ಡ್ರೋನ್‌ಗಳನ್ನು ಉಕ್ರೇನ್‌ ಕೊಂಡುಕೊಂಡಿತ್ತು. ಈ ವರ್ಷ ಉಕ್ರೇನ್ 40 ಲಕ್ಷಕ್ಕೂ ಹೆಚ್ಚು ಡ್ರೋನ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಚೀನಾ ಜಾಗತಿಕ ಡ್ರೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದು, ಲಿಥಿಯಂ-ಐಯಾನ್ ಬ್ಯಾಟರಿಗಳಂತಹ ಅಗತ್ಯ ವಸ್ತುಗಳನ್ನು ಉಕ್ರೇನ್‌ಗೆ ಇಲ್ಲಿಂದಲೇ ಪೂರೈಕೆಯಾಗುತ್ತದೆ.

ಭಾರತದ ಸೇನೆಯಲ್ಲಿ ಎಷ್ಟು ಎಫ್‌ಪಿವಿ ಡ್ರೋನ್‌ಗಳಿವೆ?
ಭಾರತದ ಸೇನೆಯ ಬಳಿ ಸದ್ಯ 5 FPV ಡ್ರೋನ್‌ಗಳು ಇವೆ. ಈ ವರ್ಷ ಮಾರ್ಚ್‌ನಲ್ಲಿ ಸೇನೆಯ ಬತ್ತಳಿಕೆಗೆ ಇವು ಸೇರಿಸಲಾಯಿತು. ಇವುಗಳ ಬೆಲೆ ಒಂದಕ್ಕೆ 1.4 ಲಕ್ಷ ರೂ. ಆಗಿದ್ದು, ಭಾರತದಲ್ಲಿರುವ ಡ್ರೋನ್‌ಗಳನ್ನು ದೇಶೀಯವಾಗಿ, ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈಗ 95 ಡ್ರೋನ್‌ಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಈ ವರ್ಷದ ಕೊನೆಯಲ್ಲಿ ಒಟ್ಟು 100 FPV ಡ್ರೋನ್‌ಗಳನ್ನು ಸೇನೆಗೆ ನಿಯೋಜಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಭಾರತದ ಡ್ರೋನ್ ಸಿಸ್ಟಮ್ಸ್
ಹೆಚ್ಚುತ್ತಿರುವ ಡ್ರೋನ್ ದಾಳಿ ಬೆದರಿಕೆ ವಿರುದ್ಧ ಹೋರಾಡಲು ಭಾರತ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಡ್ರೋನ್‌ ದಾಳಿ ವಿಫಲಗೊಳಿಸಲು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಬಹು-ಪದರದ ಆಂಟಿ-ಡ್ರೋನ್ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಇದು ಮೈಕ್ರೋ-ಕ್ಷಿಪಣಿಗಳನ್ನು ಬಳಸಿಕೊಂಡು, 6–10 ಕಿಮೀ ವ್ಯಾಪ್ತಿಯಲ್ಲಿನ ಡ್ರೋನ್‌ಗಳನ್ನು ಪತ್ತೆಹಚ್ಚುತ್ತದೆ. 2.5 ಕಿಮೀ ವರೆಗಿನ ಪ್ರತಿಬಂಧಕ ವ್ಯಾಪ್ತಿಯನ್ನು ಈ ಕ್ಷಿಪಣಿಗಳು ಹೊಂದಿವೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಆಕಾಶ್‌ತೀರ್, ಕೆಳಮಟ್ಟದ ವಾಯುಪ್ರದೇಶದ ಮೇಲೆ ಕಣ್ಗಾವಲಿಡುತ್ತದೆ. ಭಾರತ – ಪಾಕ್‌ ಸಂಘರ್ಷದ ಸಮಯದಲ್ಲಿ ಡ್ರೋನ್ ಬೆದರಿಕೆಗಳನ್ನು ತಟಸ್ಥಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು.

ಇಂದ್ರಜಾಲ್: ಗ್ರೀನ್ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ ಇಂದ್ರಜಾಲ್, ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ AI-ಚಾಲಿತ ಪ್ರತಿ-ಡ್ರೋನ್ ವ್ಯವಸ್ಥೆಯಾಗಿದೆ. ಇದು ಕಠಿಣ ಭೂಪ್ರದೇಶದಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಎರಡು ರೀತಿಯಲ್ಲಿ ಶತ್ರು ಡ್ರೋನ್‌ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ. ಒಂದು ಡ್ರೋನ್‌ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಇನ್ನೊಂದು ಡ್ರೋನ್‌ನ್ನೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

Share This Article