ಕೊಲ್ಕತ್ತಾ: ಬಂಗಾಳದ ಆಸ್ಪತ್ರೆಯೊಂದರಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಗೆ ರೋಗಿಯೊಬ್ಬ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಆರ್.ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಬಂಗಾಳದ (Bengal) ಬಿರ್ಭಮ್‌ನ ಇಲಂಬಜರ್ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆಸಿದೆ. ನರ್ಸ್ ಚಿಕಿತ್ಸೆ ನೀಡುತ್ತಿದ್ದ ವೇಳೆ ರೋಗಿಯೊಬ್ಬ ಕಿರುಕುಳ ನೀಡಿದ್ದಾನೆ. ಇದನ್ನೂ ಓದಿ: ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೀನಿ: ಆರ್.ವಿ ದೇಶಪಾಂಡೆ
Advertisement
ವೈದ್ಯರ ಸೂಚನೆಯಂತೆ ನಾನು ಚಿಕಿತ್ಸೆ ನೀಡುತ್ತಿದೆ. ಈ ವೇಳೆ ರೋಗಿಯು ನನ್ನೊಂದಿಗೆ ಅನುಚಿತವಾಗಿ ವರ್ತಿಸತೊಡಗಿದ, ನನ್ನ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ನರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಕೃತ್ಯವೆಸಗುವ ವೇಳೆ ರೋಗಿಯ ಕುಟುಂಬಸ್ಥರು ಜೊತೆಗೆ ಇದ್ದರು ಎಂದು ಆರೋಪಿಸಿದ್ದಾರೆ.
Advertisement
Advertisement
ಭದ್ರತೆಯ ಕೊರತೆಯಿಂದಾಗಿ ಇಂತಹ ಕೃತ್ಯಗಳು ನಡೆಯುತ್ತವೆ. ಇಲ್ಲವಾದರೆ ರೋಗಿಯೊಬ್ಬನಿಗೆ ಕರ್ತವ್ಯದಲ್ಲಿರುವವರ ಜೊತೆ ಈ ರೀತಿಯಾಗಿ ನಡೆದುಕೊಳ್ಳಲು ಧೈರ್ಯವಾದರೂ ಹೇಗೆ ಬಂದಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಕೆಶಿ ಓಡಿಸುತ್ತಿದ್ದ ಹಳೇ ಬೈಕ್‌ಗೆ ಹೊಸ ರೂಪ – 1981 ರ ಮಾಡೆಲ್ ಎಝಡಿ ರೋಡ್ ಕಿಂಗ್ ಬೈಕ್
Advertisement
ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣದ ನಂತರ ಈ ಘಟನೆಯು ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಇದರಿಂದಾಗಿ ಬಿಜೆಪಿಯು (BJP) ಆಡಳಿತ ರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದೆ.
36 ಗಂಟೆಗಳ ಶಿಫ್ಟ್ ಅಮಾನುಷ ಎಂದಿದ್ದ ಸುಪ್ರೀಂ:
ವೈದ್ಯರನ್ನು 36 ಗಂಟೆಗಳ ಕಾಲ ನಿರಂತರವಾಗಿ ದುಡಿಸಿಕೊಳ್ಳುವುದು ಅಮಾನವೀಯ ಎಂದು ಪ್ರಕರಣದ ವಿಚಾರಣೆಯ ಆರಂಭದಲ್ಲೇ ಸುಪ್ರೀಂ ಕೋರ್ಟ್ (Supreme Court) ಆಕ್ಷೇಪ ವ್ಯಕ್ತಪಡಿಸಿತ್ತು. ಕೋಲ್ಕತ್ತಾ ಆರ್.ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಅತ್ಯಾಚಾರ- ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ (DYChandrachud) ನೇತೃತ್ವದ ತ್ರಿಸದಸ್ಯ ಪೀಠ ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೇ ಈ ಬಗ್ಗೆ ಕ್ರಮ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಕೆಲ ವೈದ್ಯರು 36 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದರು. ನೇಮಕಗೊಂಡ 10 ಮಂದಿ ಸದಸ್ಯರ ಕಾರ್ಯಪಡೆ ಈ ಬಗ್ಗೆ ತನಿಖೆ ನಡೆಸಿ ಎಲ್ಲಾ ವೈದ್ಯರ (Kolkata Doctor) ಕರ್ತವ್ಯದ ಸಮಯವನ್ನು ಸುವ್ಯವಸ್ಥಿತಗೊಳಿಸಲು ಪರಿಶೀಲಿಸಬೇಕು ಪೀಠ ತಾಕೀತು ಮಾಡಿತ್ತು. ಈ ಬೆಳವಣಿಗೆಯ ಮಧ್ಯೆಯೇ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್ವೊಬ್ಬರು ರೋಗಿಯಿಂದಲೇ ಕಿರುಕುಳಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಇದನ್ನೂ ಓದಿ: ಸಿಎಂ ಯಾವತ್ತಿಗೂ ಟಗರೇ, ಭಯ ಬೀಳೋ ಪ್ರಶ್ನೆನೇ ಬರಲ್ಲ: ಜಮೀರ್