ಕೋಲ್ಕತ್ತಾ: ಕೇವಲ 5 ತಿಂಗಳಲ್ಲಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಶ್ಚಿಮ ಬಂಗಾಳದ (West Bengal) ತೃಣಮೂಲ ಕಾಂಗ್ರೆಸ್ (TMC) ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ (BJP) ಭವಿಷ್ಯ ನುಡಿದಿದೆ.
ಬಿಜೆಪಿ ಸಂಸದ ಶಾಂತನು ಠಾಕೂರ್ ತಮ್ಮ ಲೋಕಸಭಾ ಕ್ಷೇತ್ರ ಬೊಂಗಾವ್‌ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಟಿಎಂಸಿ ಸರ್ಕಾರ ಇನ್ನು ಐದು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: UPA ಮೈತ್ರಿ ಕೂಟದ ಮಹತ್ವದ ಸಭೆಗೆ ಬೆಂಗಳೂರಿನಲ್ಲಿ ಮುಹೂರ್ತ
Advertisement
Advertisement
ಮಮತಾ ಬ್ಯಾನರ್ಜಿ ಸರ್ಕಾರವು ತನ್ನ ಉಪಯುಕ್ತತೆಯನ್ನು ಮೀರಿದೆ. ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಅಕ್ರಮ ನಡೆಸದೇ ಇದ್ದಿದ್ದರೆ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು. ಆದರೆ ಇದು ಟಿಎಂಸಿ ಸರ್ಕಾರದ ಮೇಲ್ವಿಚಾರಣೆಯಲ್ಲಿ ಕೊನೆಯ ಚುನಾವಣೆಯಾಗಲಿದೆ. ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಸೇರಿದಂತೆ ರಾಜ್ಯದ ಎಲ್ಲಾ ಆಡಳಿತ ವ್ಯವಸ್ಥೆಯು ನಿಷ್ಪಕ್ಷಪಾತ ಪಾತ್ರವನ್ನು ವಹಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಬಿಜೆಪಿಯ ಬಂಗಾಳದ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಮಾತನಾಡಿ, ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಟಿಎಂಸಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಇಂದಿನಿಂದ ಕೆಜಿ ಟೊಮೆಟೋ 80 ರೂ.ನಂತೆ ಮಾರಾಟ – ಕೇಂದ್ರ ನಿರ್ಧಾರ
Advertisement
ಯಾರಿಗೆ ಗೊತ್ತು, ಟಿಎಂಸಿಯ ದುರಾಡಳಿತ ಮತ್ತು ಭಯೋತ್ಪಾದನೆಯ ವಿರುದ್ಧ ಜನರ ದಂಗೆ ಏಳಬಹುದು. ಯಾರಿಗೆ ಗೊತ್ತು, ಟಿಎಂಸಿ ಶಾಸಕರು ಇದ್ದಕ್ಕಿದ್ದಂತೆ ಮಮತಾ ಬ್ಯಾನರ್ಜಿ ಅವರ ಕಾರ್ಯವೈಖರಿ ಬಂಡಾಯ ಏಳಬಹುದು. ಅದು ಸಂಭವಿಸುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ ಎಂದು ತಿವಿದಿದ್ದಾರೆ.
Web Stories