ನವದೆಹಲಿ/ಬೆಂಗಳೂರು: UPA ಮೈತ್ರಿಕೂಟದ ಮಹತ್ವದ ಸಭೆ ಜುಲೈ 17 ಹಾಗೂ 18 ರಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ.
ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಕಳೆದ ಬಾರಿ ಪಾಟ್ನಾದಲ್ಲಿ ನಡೆದ ಸಭೆ 6 ಜನ ಮುಖ್ಯಮಂತ್ರಿಗಳೂ ಸೇರಿ 15 ಪಕ್ಷಗಳ 32 ನಾಯಕರನ್ನ ಒಳಗೊಂಡಿತ್ತು. ಈ ಬಾರಿ 24 ಪಕ್ಷದ 40ಕ್ಕೂ ಹೆಚ್ಚು ನಾಯಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
Advertisement
ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಪ್ರಮುಖ ನಾಯಕರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಯುಪಿಎ ಮೈತ್ರಿಕೂಟದ ನಾಯಕರಿಗೆ ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಔತಣಕೂಟ ಏರ್ಪಡಿಸಿದ್ದಾರೆ. ಅಲ್ಲಿ ಮೈತ್ರಿಕೂಟದ ಮೊದಲ ಅನೌಪಚಾರಿಕ ಸಭೆ ನಡೆಯಲಿದೆ. ಜುಲೈ 18 ರಂದು ಯುಪಿಎ ಮೈತ್ರಿ ಕೂಟದ ಅಧಿಕೃತ ಮಹತ್ವದ ಸಭೆ ನಡೆಯಲಿದೆ.
Advertisement
ಭಾಗವಹಿಸುವ ಪಕ್ಷಗಳು:
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐಎಂ, ಸಿಪಿಐ, ಆರ್‌ಜೆಡಿ, ಜೆಡಿಯು, ಡಿಎಂಕೆ, ಸಮಾಜವಾದಿ ಪಾರ್ಟಿ, ಶಿವಸೇನೆ ಉದ್ದವ್ ಠಾಕ್ರೆ, ಎಎಪಿ, ಜೆಎಂಎಂ, ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ, ಸಿಪಿಐಎಂಎಲ್, ಎಂಡಿಕೆ, ಆರ್‌ಎಸ್‌ಪಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್‌ನ ಎರಡೂ ಬಣಗಳು (ಜೋಸೇಫ್ ಮತ್ತು ಮಣಿ) ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ ಎನ್ನಲಾಗಿದೆ. ಇದನ್ನೂ ಓದಿ: ನಿಯಮ ಮೀರಿ ಹುದ್ದೆ ನೀಡಿದ ಆರೋಪ- ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಂದ ಸರ್ಕಾರಕ್ಕೆ ಪತ್ರ
Advertisement
ಸಭೆಯಲ್ಲಿ ಪಾಲ್ಗೊಳ್ಳುವ ಪ್ರಮುಖ ನಾಯಕರು:
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಹೇಮಂತ್ ಸೊರೇನ್, ಎಂ.ಕೆ ಸ್ಟಾಲಿನ್, ನಿತೀಶ್ ಕುಮಾರ್, ಶರದ್ ಪವಾರ್, ಸುಪ್ರಿಯಾ ಸುಳೆ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಮೆಹಬೂಬಾ ಮುಫ್ತಿ, ಲಾಲು ಪ್ರಸಾದ್ ಯಾದವ್, ಡಿ. ರಾಜಾ, ಸೀತಾರಾಂ ಯೆಚೂರಿ, ಒಮರ್ ಅಬ್ದುಲ್ಲಾ ಮೊದಲಾದ ನಾಯಕರು ಬೆಂಗಳೂರಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಲೋಕಸಮರಕ್ಕಾಗಿ BJP- JDS ದೋಸ್ತಿ- NDA ಸಭೆಯಲ್ಲಿ ಭಾಗಿಯಾಗ್ತಾರಾ ಹೆಚ್‍ಡಿಕೆ?
ಸಭೆಯ ಪ್ರಮುಖ ಅಜೆಂಡ ಏನು….?
* 24 ಪಕ್ಷಗಳು ಸೇರಿ ಒಟ್ಟು 150 ಲೋಕಸಭಾ ಸದಸ್ಯರನ್ನ ಹೊಂದಿವೆ ಅದನ್ನ ಹೆಚ್ಚಿಸಿಕೊಳ್ಳುವುದು ಮೈತ್ರಿ ಕೂಟದ ಲೆಕ್ಕಾಚಾರ..
* ಈ ಸಭೆಯಲ್ಲಿ ಮೈತ್ರಿಕೂಟಕ್ಕೆ ಅಧಿಕೃತ ಹೆಸರು ಘೋಷಣೆ ಸಾಧ್ಯತೆ
* ಲೋಕಸಭಾ ಸೀಟು ಹಂಚಿಕೆ ಸಂಬಂಧವೂ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ.
* 150 ಸ್ಥಾನಕ್ಕಿಂತ ಹೆಚ್ಚುವರಿ ಎಷ್ಟು ಸ್ಥಾನ ಗಳಿಸಬಹುದು ಎಂಬುದನ್ನ ಸಭೆಯಲ್ಲಿ ಹೆಚ್ಚು ಒತ್ತು ಕೊಟ್ಟು ಚರ್ಚೆ ಮಾಡಲು ನಿರ್ಧಾರ
* ಮೈತ್ರಿಕೂಟದ ನಾಯಕತ್ವ ಯಾರದ್ದು ಎಂಬುದು ಸಹಾ ತೀರ್ಮಾನ ಆಗುವ ಸಾಧ್ಯತೆ
* ಪಾಟ್ನಾ ಸಭೆಯಲ್ಲಿ 15 ಪಕ್ಷಗಳು ಭಾಗವಹಿಸಿದ್ದು. ಈ ಬಾರಿ 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ.
Web Stories