– ವಾಯುಪಡೆಗೆ ದೇಶವ್ಯಾಪಿ ವಂದನೆ
ನವದೆಹಲಿ: ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಭಾರತ ವಾಯುಪಡೆ ಇಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ನೆಲೆಗಳ ದಾಳಿ ಮಾಡಿದ್ದಕ್ಕೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿದ್ದು, ರಾಜಕೀಯ ನಾಯಕರು ಟ್ವೀಟ್ ಮಾಡಿ ಯೋಧರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಐಎಎಫ್‍ನ ಮತ್ತೊಂದು ಅರ್ಥ ಎಂದರೆ ಇಂಡಿಯನ್ಸ್ ಅಮೇಜಿಂಗ್ ಫೈಟರ್ಸ್. ಜೈ ಹಿಂದ್ ಎನ್ನುವ ಮೂಲಕ ಉಗ್ರರ ಮೇಲೆ ದಾಳಿ ಮಾಡಿದ ವಾಯು ಪಡೆಯ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
Advertisement
IAF also means India's Amazing Fighters. Jai Hind
— Mamata Banerjee (@MamataOfficial) February 26, 2019
Advertisement
ಇಂಡಿಯನ್ ಏರ್‍ಫೋರ್ಸ್ (ಐಎಎಫ್) ಪೈಲಟ್‍ಗಳಿಗೆ ನನ್ನ ವಂದನೆಗಳು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Advertisement
???????? I salute the pilots of the IAF. ????????
— Rahul Gandhi (@RahulGandhi) February 26, 2019
Advertisement
ಪೈಲಟ್‍ಗಳ ಮತ್ತು ಏರ್‍ಫೋರ್ಸ್ ಶೌರ್ಯಕ್ಕೆ ನಮ್ಮಿಂದ ವಂದನೆಗಳು. ನಮ್ಮ ಸೈನ್ಯದ ಬಗ್ಗೆ ಹೆಮ್ಮೆಯಿದೆ ಹಾಗೂ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ. ಜೈ ಹಿಂದ್ ಎಂದು ರಾಷ್ಟ್ರೀಯ ಜನತಾದಳದ ಮುಖಂಡ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ಉಗ್ರರ ಮೂರು ನೆಲೆಗಳ ಮೇಲೆ ದಾಳಿ ಮಾಡಿರುವುದು ನಿಜವೇ ಆಗಿದ್ದರೆ, ಇದು ದೊಡ್ಡ ಪ್ರಮಾಣದ ದಾಳಿಯೇ ಸರಿ. ಆದರೆ ಈ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
We salute bravery of our pilots and Air Force. We are blessed and proud of our forces. Jai Hind
— Tejashwi Yadav (@yadavtejashwi) February 26, 2019
ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ ಏರ್‍ಫೋರ್ಸ್ ಪೈಲಟ್ ಹಾಗೂ ಏರ್‍ಫೋರ್ಸ್ ಪಡೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಅನೇಕ ನಾಯಕರು ಟ್ವೀಟ್ ಮೂಲಕ ವಂದನೆ ಸಲ್ಲಿಸಿದ್ದಾರೆ.
I salute the Indian Air Force and indeed all our Armed Forces. Congratulations @IAF_MCC
— Akhilesh Yadav (@yadavakhilesh) February 26, 2019
I salute the bravery of Indian Air Force pilots who have made us proud by striking terror targets in Pakistan
— Arvind Kejriwal (@ArvindKejriwal) February 26, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv