ಬೆಂಗಳೂರು: ವೀಕೆಂಡ್ ಕರ್ಫ್ಯೂ ವೇಳೆ ಸಣ್ಣ ಪುಟ್ಟ ಕಾರಣಗಳೊಂದಿಗೆ ಬೆಳ್ಳಂಬೆಳಗ್ಗೆ ರಸ್ತೆಗೆ ಬಂದ ಜನಸಾಮಾನ್ಯರು ಪೊಲೀಸರ ಕೈಯಲ್ಲಿ ಸಿಕ್ಕಿ ಒದ್ದಾಡಿದ್ರು. ಅನಗತ್ಯವಾಗಿ ರಸ್ತೆಗೆ ಇಳಿದವರ ಜೊತೆಗೆ ತುರ್ತು ಮತ್ತು ನೈಜ ಕಾರಣಗಳೊಂದಿಗೆ ಮನೆಯಿಂದ ಹೊರಗೆ ಬಂದವರು ಕೂಡ ತೊಂದ್ರೆ ಅನುಭವಿಸಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಬೇರೆ ಬೇರೆ ಸಬೂಬು ಹೇಳಿದ್ದಾರೆ.
Advertisement
ಕರ್ಫ್ಯೂ ಇದ್ದುದರಿಂದ ಕೆಆರ್ ಮಾರ್ಕೆಟ್ ಬಳಿ ವಾಹನ ತಪಾಸಣೆಗಿಳಿದ್ದ ಬೆಂಗಳೂರು ಪೊಲೀಸರ ಬಳಿ ವ್ಯಕ್ತಿಯೊಬ್ಬ ಕೊತ್ತಂಬ್ರಿ ಸೊಪ್ಪು ತರೋಕೆ ಬಂದೆ ಎಂದು ಹೇಳಿ ಮತ್ತೊಮ್ಮೆ ಹಳೆಯ ಕೊತ್ತಂಬರಿ ಸೊಪ್ಪು ಘಟನೆ ನೆನಪಿಸಿದ್ದಾನೆ. ಮತ್ತೊಬ್ಬ ಸಂಡೇ ಆಂಟಿ ಮನೆಗೆ ಹೊಂಟೀವಿ.. ಬಿಡಿ ಸಾರ್ ಎಂದರೆ, ಅಲ್ಲೊಬ್ಬ ಅತ್ತೆ ಮನೆಲಿದ್ದೆ.. ಮನೆಗೆ ಹೋಗ್ತಿದ್ದಿನಿ ಸಾರ್ ಎಂದು ಕಾರಣ ಕೊಟ್ಟು ನಗೆ ಪಾಟಲಿಗೆ ಕಾರಣರಾದರು. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್
Advertisement
Advertisement
ಕೆಆರ್ ಮಾರ್ಕೆಟ್ ಬಳಿ ಅಂತೂ, ಮಗುವಿಗೆ ಹುಷಾರಿಲ್ಲ. ತಾಯತದವ್ರನಾ ಹುಡುಕಿ ಬಂದೇ, ಮಟನ್ ತರೋಕೆ ಬಂದೆ ಎಂದು ಕಾರಣ ಹೇಳಿ ಪೊಲೀಸರಿಗೆ ನಗು ತರಿಸಿದರು. ಇನ್ನೂ ಜಿಲ್ಲೆಗಳತ್ತ ಕೂಡ ಇದೇ ಪರಿಸ್ಥಿತಿ ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ನಿಮಗೆ ಕೊರೊನಾ ಬರಲಿ ಎಂದು ಪೊಲೀಸ್ರಿಗೆ ಹಿಡಿಶಾಪ ಹಾಕಿದರೆ, ಬೆಳಗಾವಿಯಲ್ಲಿ ನಿಮ್ ಪೊಲೀಸ್ರು ಮಾಸ್ಕ್ ಹಾಕಿಲ್ಲ. ಡಿಸಿಪಿ ಜೊತೆ ವೈದ್ಯೆ ವಾಗ್ವಾದಕ್ಕೆ ಇಳಿದಿದ್ದರು. ಮತ್ತೊಬ್ಬ ಹತ್ತು ರೂಪಾಯಿ ಮಾಸ್ಕ್‍ಗೆ 100 ರೂ. ದಂಡ ಕಟ್ಬೇಕಾ? ಎಂದು ಪ್ರಶ್ನೆ ಕೇಳಿದ್ದಾನೆ. ಇದನ್ನೂ ಓದಿ: ಬೆಂಗಳೂರು ಬುಲ್ಸ್ ವಿರುದ್ಧ ಗೆಲುವಿನ ಪಟಾಕಿ ಸಿಡಿಸಿದ ಪಾಟ್ನಾ
Advertisement
ವಿಜಯಪುರದಲ್ಲಿ ರೈತರೊಬ್ಬರು ಕೊತ್ತಂಬರಿ, ಸೊಪ್ಪು ರಸ್ತೆಗೆ ಎಸೆದು ಆಕ್ರೋಶ ಹೊರಹಾಕಿದರು. ಯಾದಗಿರಿಯಲ್ಲಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಶಲ್ಯ ಹಾಕಿದ್ದೀನಲ್ವಾ..? ಮಾಸ್ಕ್ ಯಾಕೆ ಹಾಕ್ಬೇಕು ಎಂದು ಪೊಲೀಸರಿಗೆ ದಬಾಯಿಸಿದ್ದಾನೆ. ಹೀಗೆ ಹಲವು ಭಾಗಗಳಲ್ಲಿ ಹಲವು ಘಟನೆಗಳು ವಿಕೇಂಡ್ ಕರ್ಫ್ಯೂನಲ್ಲಿ ಕಾಣಸಿಕ್ಕಿತು. ಇದನ್ನೂ ಓದಿ: ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲ ತೆಗೆದುಹಾಕಿದ ವೈದ್ಯರು