ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಎಲಿಮಿನೇಷನ್ ತೂಗುಕತ್ತಿ ತೂಗುತ್ತಿದೆ. 9ನೇ ವಾರಕ್ಕೆ 9 ಮಂದಿ ನಾಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಟಫ್ ಪೈಟ್ ಕೊಡುತ್ತಿರುವವರೇ ನಾಮಿನೇಷನ್ ಸೀಟ್ನಲ್ಲಿದ್ದಾರೆ. ಹಾಗಾದ್ರೆ ಯಾರ ಆಟ ಅಂತ್ಯವಾಗಲಿದೆ.
ಈಗಾಗಲೇ ಸ್ನೇಹಿತ್ ಗೌಡ- ಮೈಕಲ್ ಅಜಯ್ (Michael Ajay) ಅವರು ಸುದೀಪ್ ಅವರ ವಿಶೇಷ ಅಧಿಕಾರದಿಂದ ಕಳೆದ ವಾರ ಸೇವ್ ಆಗಿದ್ದರು. ಈ ವಾರ ಸುದೀಪ್ ಕಡೆಯಿಂದಲೇ ಸ್ನೇಹಿತ್ ಮತ್ತು ಅಜಯ್ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇದನ್ನೂ ಓದಿ:ಡಿ.6ರಂದು ಡಾಲಿ ಹೆಸರು ಘೋಷಿಸಲಿದ್ದಾರೆ ಸಿಎಂ ಸಿದ್ಧರಾಮಯ್ಯ
ಇನ್ನೂ ಈ ವಾರ ಕ್ಯಾಪ್ಟನ್ಗೆ ಸ್ನೇಹಿತ್ (Snehith Gowda) ವಿಶೇಷ ಅಧಿಕಾರವಿದ್ದು, ಸ್ಪರ್ಧಿಗಳಿಗೆ ನಾಮಿನೇಟ್ ಮಾಡುವ ಪವರ್ ಕೂಡ ಬಿಗ್ ಬಾಸ್ ಸ್ನೇಹಿತ್ಗೆ ನೀಡಿದ್ದರು. ಅದರಂತೆ ಸಂಗೀತಾ ಶೃಂಗೇರಿ (Sangeetha Sringeri), ಡ್ರೋನ್ ಪ್ರತಾಪ್, ಪವಿ ಪೂವಪ್ಪ, ಅವಿನಾಶ್ ಶೆಟ್ಟಿ, ಕಾರ್ತಿಕ್, ತನಿಷಾ, ಸಿರಿ ನಾಮಿನೇಟ್ ಆಗಿದ್ದಾರೆ. ಹಾಗೆಯೇ ಸ್ನೇಹಿತ್-ಮೈಕಲ್ ಕೂಡ ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ. ಈ ವಾರ ಈ ಪೈಕಿ ಔಟ್ ಆಗುವವರು ಯಾರು?
ವಾದ ಮತ್ತು ಪ್ರತಿವಾದ ಮಂಡಿಸಿದ ನಂತರ ಸ್ನೇಹಿತ್, ಯಾರು ನಾಮಿನೇಟ್ ಆಗಬೇಕು ಎಂದು ನಿರ್ಧರಿಸಿದ್ದರು. ಒಟ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಅವಿನಾಶ್- ಪವಿ ಈ ವಾರ ಡೇಂಜರ್ ಝೋನ್ನಲ್ಲಿದ್ದಾರೆ. ಆಟದ ಮಧ್ಯೆಕ್ಕೆ ಬಂದಿರೋರು ಮಧ್ಯೆದಲ್ಲೇ ಹೋಗುತ್ತಾರಾ ಎಂದು ಕಾದುನೋಡಬೇಕಿದೆ.