LatestMain PostNational

ಮದುವೆ ಹಾಲ್‍ಗೆ ಬೆಂಕಿ ಬಿದ್ದರೂ ಅತಿಥಿಗಳು ಊಟದಲ್ಲಿಯೇ ಮಗ್ನ

ಮುಂಬೈ: ಮದುವೆ ಹಾಲ್‍ಗೆ ಬೆಂಕಿ ಬಿದ್ದರೂ ನಿರ್ಲಕ್ಷಿಸಿದ ಅತಿಥಿಗಳು ಭೋಜನ ಸವಿಯುವುದರಲ್ಲೇ ತಲ್ಲೀನರಾದ ಘಟನೆ ಮಹಾರಾಷ್ಟ್ರ  ಥಾಣೆಯಲ್ಲಿ ನಡೆದಿದೆ.

ಥಾಣೆ ಜಿಲ್ಲೆಯ ಭಿವಂಡಿ ಸಮೀಪದ ಅನ್ಸಾರಿ ಮದುವೆ ಹಾಲ್‍ನಲ್ಲಿ ಭಾನುವಾರ ರಾತ್ರಿ ಬೆಂಕಿ ಭುಗಿಲೆದ್ದಿತ್ತು. ಮದುವೆ ಹಾಲ್ ಸಮೀಪದ ಸ್ಟೋರ್ ರೂಮಿನಿಂದ ಬೆಂಕಿ ಹರಡಿದೆ ಎನ್ನಲಾಗಿದೆ. ಜೊತೆಗೆ ಪಕ್ಕದಲ್ಲೇ ನಿಲ್ಲಿಸಿದ್ದ ಹಲವಾರು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನು ನೋಡಿಯೂ ನಿರ್ಲಕ್ಷಿಸಿದ ಅತಿಥಿಗಳು ಭೋಜನ ಸವಿಯುವುದರಲ್ಲೇ ಮಗ್ನರಾಗಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ‘ಅಪ್ಪು ಸರ್ಕಲ್’ ಉದ್ಘಾಟನೆ ಮಾಡಿದ ಯರಪ್ಪನಹಳ್ಳಿ ಗ್ರಾಮಸ್ಥರು


ವೀಡಿಯೋದಲ್ಲಿ ಏನಿದೆ?: ಮದುವೆ ಹಾಲ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅತಿಥಿಗಳು ಊಟ ಮಾಡುತ್ತಿದ್ದರು. ಬೆಂಕಿ ಬಿದ್ದಿರುವುದನ್ನು ನೋಡುತ್ತಿದ್ದ ಅತಿಥಿಗಳು ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನೋಡುತ್ತಾ ಭೋಜನ ಸವಿಯುತ್ತಿದ್ದರು. ಈ ದೃಶ್ಯವನ್ನು ಅಲ್ಲಿದ್ದ ಹಲವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್

Leave a Reply

Your email address will not be published. Required fields are marked *

Back to top button