ದೇಶದಲ್ಲಿ ಬಾಂಬ್ ಸ್ಫೋಟದ ಬೆದರಿಕೆ, ಪ್ರಧಾನಿ ಕೊಲ್ಲುವುದಾಗಿ ಕಾಮೆಂಟ್: ಆರೋಪಿಗಾಗಿ ತೀವ್ರ ಶೋಧ

Public TV
1 Min Read
narendra modi

ಮುಂಬೈ: ಪುಣೆಯ (Pune) ವ್ಯಕ್ತಿಯೊಬ್ಬರು ನಡೆಸುತ್ತಿರುವ ಹಿಂದೂ ಧರ್ಮದ ವಿಚಾರಧಾರೆಗಳ ವೆಬ್‍ಸೈಟ್‍ನ ಪೋಸ್ಟ್ ಒಂದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಹತ್ಯೆ ಮಾಡುವ ಬೆದರಿಕೆ ಹಾಕಿ ಕಾಮೆಂಟ್ ಮಾಡಲಾಗಿದೆ. ಅಲ್ಲದೇ ಭಾರತದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯನ್ನು ಹಾಕಲಾಗಿದೆ.

ರಾಹುಲ್ ದುಧಾನೆ ಎಂಬವರು ಹಿಂದೂ ಧರ್ಮದ ಬಗ್ಗೆ ವೆಬ್‍ಸೈಟ್ ನಡೆಸುತ್ತಿದ್ದಾರೆ. ಈ ವೆಬ್‍ಸೈಟ್‍ಗೆ ಕಾಮೆಂಟ್ ಪೋಸ್ಟ್ ಮಾಡಿರುವ ಮೊಖೀಮ್ ಎಂಬಾತ ಬೆದರಿಕೆ ಹಾಕಿದ್ದಾನೆ. ವೆಬ್‍ಸೈಟ್‍ನ್ನು ದುಧಾನೆ ಪರಿಶೀಲಿಸುವಾಗ ಮೊಖೀಮ್ ಕಾಮೆಂಟ್‍ನ್ನು ಗಮನಿಸಿದ್ದಾರೆ. ಕಾಮೆಂಟ್‍ನಲ್ಲಿ ಭಾರತದಲ್ಲಿ ಗಂಭೀರವಾದ ಬಾಂಬ್ ಸ್ಫೋಟವನ್ನು ನಡೆಸುತ್ತೇನೆ. ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ಮಾಡುತ್ತೇನೆ. ಹಿಂದೂ ಧರ್ಮವನ್ನು ನಾಶಪಡಿಸುತ್ತೇನೆ. ಅಲ್ಲದೇ ನರೇಂದ್ರ ಮೋದಿಯವರನ್ನೂ ಕೊಲ್ಲುತ್ತೇನೆ ಎಂದು ಬರೆದಿದ್ದಾನೆ. ಕಾಮೆಂಟ್ ವಿಚಾರ ತಿಳಿಯುತ್ತಿದ್ದಂತೆ ದುಧಾನೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸುಲಿಗೆ ಮನಸ್ಥಿತಿಗೆ ಸೂಕ್ತ ಚಿಕಿತ್ಸೆ ಬೇಡವೇ?: ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

ಈ ಬಗ್ಗೆ ಪ್ರಕರಣವನ್ನು ಪೊಲೀಸರು (Police) ದಾಖಲಿಸಿಕೊಂಡಿದ್ದಾರೆ. ಆರೋಪಿಯ ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದೇವೆ. ಐಪಿ ವಿಳಾಸ ವಿದೇಶದ್ದು ಎಂಬ ಶಂಕೆ ಇದೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ ತಿಳಿಸಿದ್ದಾರೆ.

ಈ ಸಂಬಂಧ ಮೊಖೀಮ್ ಎಂಬಾತನ ಮೇಲೆ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

Web Stories

Share This Article