ತೆಹ್ರಾನ್: ಮಹ್ಸಾ ಅಮಿನಿಯ (Mahsa Amini) ಸಾವಿನ ನಂತರ ಇರಾನ್‌ನಲ್ಲಿ (Iran) ಹಿಜಬ್ (Hijab) ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಇದರ ನಡುವೆಯೇ, ಕಾರುಗಳಲ್ಲಿಯೂ ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಇರಾನ್ ಪೊಲೀಸರು ಮಹಿಳೆಯರಿಗೆ ಮತ್ತೆ ಕಟ್ಟೆಚ್ಚರ ನೀಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 16 ರಂದು, 22 ವಯಸ್ಸಿನ ಮಹ್ಸಾ ಅಮಿನಿ ಹಿಜಬ್ ಧರಿಸದೇ ಇದ್ದಿದ್ದಕ್ಕೆ ಟೆಹ್ರಾನ್‌ನಲ್ಲಿ ಬಂಧನಕ್ಕೊಳಗಾಗಿ ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದರು. ನಂತರ ಇರಾನ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮಹಿಳೆಯರು ಹಿಜಬ್ ಸುಟ್ಟು, ತಲೆಗೂದಲು ಕತ್ತರಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು
ಮಹಿಳೆಯರು ಕಾರ್‌ಗಳಲ್ಲಿ ಹಿಜಬ್ ತೆಗೆಯುತ್ತಾರೆ ಎಂಬುದನ್ನು ಮನಗಂಡು 2020ರಲ್ಲೇ ʼನಜೀರ್-1ʼ ಎಂಬ ಕಾರ್ಯಕ್ರಮವನ್ನು ಪರಿಚಯಿಸಲಾಗಿತ್ತು. ಈ ಬಗ್ಗೆ ಎಚ್ಚರಿಕೆ ನೀಡುವಂತೆ ಮತ್ತೆ ಕಾರ್ಯಕ್ರಮವನ್ನು ದೇಶಾದ್ಯಂತ ಪರಿಚಯಿಸಲು ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
“ನಿಮ್ಮ ವಾಹನದಲ್ಲಿ ಹಿಜಬ್ ತೆಗೆಯುವುದನ್ನು ಗಮನಿಸಲಾಗಿದೆ. ಸಮಾಜದ ನಿಯಮಗಳನ್ನು ಗೌರವಿಸುವುದು ಮತ್ತು ಈ ಕ್ರಮ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ
ಇರಾನ್‌ನ ನೈತಿಕ ಪೊಲೀಸರು ಕಟ್ಟುನಿಟ್ಟಾದ ವಸ್ತ್ರ ಸಂಹಿತೆ ಅನುಷ್ಠಾನವನ್ನು ಪರಿಶೀಲಿಸಲು ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡುವಂತೆ ಆದೇಶ ಹೊರಡಿಸಲಾಗಿದೆ. ಆದರೆ ಪ್ರತಿಭಟನೆಯ ನಡುವೆ ಮಹಿಳೆಯರು ಹಿಜಬ್ ಇಲ್ಲದೆ ಓಡಾಡುತ್ತಿದ್ದಾರೆ.