ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ಪೊಲೀಸ್ ಠಾಣೆಯಿಂದಲೇ ಸರ್ಕಾರಿ ಪಿಸ್ತೂಲ್ ಮತ್ತು ಸಮವಸ್ತ್ರವನ್ನು ಕಳ್ಳರು ಪರಾರಿಯಾಗಿದ್ದಾರೆ.
ನ್ಯೂ ಆಜಾದ್ ನಗರದ (Azad Nagar) ಬಿದ್ನು (Bidhnu) ಅವರ ಹೊರಠಾಣೆಯಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಪಿ ತೇಜ್ ಸ್ವರೂಪ್ ಸಿಂಗ್ ಅವರು ಔಟ್ ಪೋಸ್ಟ್ ಇನ್ ಚಾರ್ಜ್ ಸುಧಾಕರ್ ಪಾಂಡೆ ಅವರನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ದೇಗುಲದಲ್ಲಿ ತಪ್ತಮುದ್ರಾಧಾರಣೆಗೆ ಬ್ರೇಕ್ – ಸತ್ಯನಾರಾಯಣ ಪೂಜೆ, ಶನಿಕಥೆಗೆ ಅಡ್ಡಿ
Advertisement
Advertisement
ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಕುರಿತಂತೆ ಮಾಹಿತಿ ದೊರೆತ ಮೇರೆಗೆ ಎಸ್‍ಪಿ, ವಿಧಿವಿಜ್ಞಾನ ತಂಡ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಡ್‌ಶೀಟ್ ಮೇಲೆ ಕಲೆಗಳಿರುತ್ತಿತ್ತು- ಶ್ರೀಗಳ ಬೆಡ್‌ರೂಂ ರಸಹ್ಯ ಬಯಲು
Advertisement
ನ್ಯೂ ಆಜಾದ್ ನಗರ ಚೌಕಿಯ ಪೋಸ್ಟ್ ಇನ್ ಚಾರ್ಜ್ ಆಗಿ ಸಬ್ ಇನ್ಸ್‌ಪೆಕ್ಟರ್ ಸುಧಾಕರ್ ಪಾಂಡೆ ಅವರನ್ನು ನೇಮಿಸಲಾಗಿದೆ. ಬುಧವಾರ ತಡರಾತ್ರಿ ಕಳ್ಳರು ಠಾಣೆಯಲ್ಲಿದ್ದ ಪೆಟ್ಟಿಗೆಯನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ವಿಷಯ ಉನ್ನತ ಅಧಿಕಾರಿಗಳಿಗೆ ತಿಳಿದಾಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ತರಾತುರಿಯಲ್ಲಿ ಐಜಿ ರೇಂಜ್, ಎಸ್‍ಪಿ ಔಟರ್ ಸೇರಿದಂತೆ ಸರ್ಕಲ್ ಫೋರ್ಸ್ ಸ್ಥಳಕ್ಕೆ ಧಾವಿಸಿದರು. ನಂತರ ತಕ್ಷಣವೇ ವಿಧಿವಿಜ್ಞಾನ ತಂಡವನ್ನು ಸ್ಥಳಕ್ಕೆ ಕರೆಸಲಾಯಿತು. ಸುಧಾಕರ್ ಪಾಂಡೇ ಅವರ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ಇದೀಗ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
Advertisement
ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‍ಪಿ ತೇಜ್ ಸ್ವರೂಪ್ ಸಿಂಗ್ ಅವರು, ಪೊಲೀಸ್ ಠಾಣೆಯಲ್ಲಿಯೇ ಈ ಘಟನೆ ನಡೆದಿದ್ದು, ಸರ್ಕಾರಿ ಪಿಸ್ತೂಲ್ ಮತ್ತು 10 ಕಾಟ್ರಿಡ್ಜ್‌ಗಳು ಕಾಣೆಯಾಗಿದೆ. ಈ ವೇಳೆ ಎಸ್‍ಐ ಔಟ್‍ಪೋಸ್ಟ್‌ನಲ್ಲಿದ್ದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರನ್ನು ಹಿಡಿಯಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.