– ಹಾವೇರಿ ರೇಪ್ ಕೇಸ್ ಬಗ್ಗೆ ಗೃಹ ಸಚಿವರು ಹೇಳಿದ್ದೇನು?
ಬೆಂಗಳೂರು: ಬಿಜೆಪಿ (BJP) ಅವರು ಹೇಳಿದಂತೆ ನಾವು ಕೇಳೋಕೆ ಶುರು ಮಾಡಿದ್ರೆ, ನಾವು ಆಡಳಿತ ಮಾಡೋಕೆ ಆಗಲ್ಲ ಎಂದು ಬಿಜೆಪಿ ವಿರುದ್ಧ ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಕಿಡಿಕಾರಿದ್ದಾರೆ.
Advertisement
ಹಾವೇರಿ ರೇಪ್ ಕೇಸ್ (Haveri Rape Case) ಪ್ರಕರಣದಲ್ಲಿ ಎಸ್‌ಐಟಿ (SIT) ರಚನೆಗೆ ಆಗ್ರಹಿಸಿದ ವಿಚಾರ ಹಾಗೂ ಕೇಸ್‌ಗೆ ಸಂಬಂಧಿಸಿದವರ ಬಂಧನ ಆಗಿದೆ ಎಂಬ ಸಂತ್ರಸ್ತೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ತನಿಖೆ ಆಗುತ್ತಿದೆ. ಸಂಪೂರ್ಣ ತನಿಖೆ ಆಗಲಿ. ಅಲ್ಲಿಯವರೆಗೂ ನಾನೇನು ಹೇಳಲ್ಲ. ಈಗಾಗಲೇ 7-8 ಜನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಸಂತ್ರಸ್ತೆ ಊರಿಗೆ ಹೋಗಬೇಕು ಅಂದಿದ್ದಾರೆ. ಅದಕ್ಕೆ ಕಳುಹಿಸಲಾಗಿದೆ. ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಂಬಂಧ ಸ್ಥಳೀಯ ಇನ್ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ. ತನಿಖೆ ವರದಿ ಬರಲಿ ಮುಂದೆ ನೋಡೋಣ ಎಂದರು. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆಗೆ ಭಾರತ ಸಹಿ – 5 ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆಗೆ ಒಪ್ಪಂದ
Advertisement
Advertisement
ಎಸ್‌ಐಟಿ ತನಿಖೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಅವರು, ಎಸ್‌ಐಟಿ, ಸಿಬಿಐ, ಸಿಒಡಿ ಎಲ್ಲಾ ಮಾಡಿ ಅಂತ ಹೇಳುತ್ತಾರೆ. ಅವರು ಹೇಳಿದ್ದೆಲ್ಲಾ ಮಾಡಿಕೊಂಡು ಕೂತರೇ ಆಡಳಿತ ನಡೆಸೋಕೆ ಆಗುತ್ತಾ? ನಾವು ಹೇಳಿದಾಗ ಅವರು ಕೇಳಿದ್ರಾ? ವಿರೋಧ ಪಕ್ಷದಲ್ಲಿ ಇದ್ದಾಗ ನಾವು ಹೇಳಿದಾಗ ಅವರೇನು ಕೇಳಿದ್ರಾ? ಅವರೇನು ನಮ್ಮನ್ನು ಕೇಳಿ ಆಡಳಿತ ಮಾಡಿದ್ರಾ? ನಾವು ಜನರಿಗೆ ಜನಪರ ಆಡಳಿತ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದೇವೆ. ಆ ಕೆಲಸ ನಾವು ಮಾಡುತ್ತೇವೆ ಎಂದು ಮಾತನಾಡಿದರು. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ
Advertisement