– ಬಂದ್ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದಿದ್ದ ಎಚ್‍ಡಿಕೆ
– ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ
ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ಬಂದ್‍ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದು ಹೇಳಿದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ ಎಂದು ಹೇಳುವ ಮೂಲಕ ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಿ.31 ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಕನ್ನಡಪರ ಚಳುವಳಿಗಾರರು ಬಂದ್‍ಗೆ ಕರೆ ಕೊಟ್ಟಿದ್ದಾರೆ. ಅದು ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ. ಏಕೆಂದರೆ ನಾವು ಪ್ರತಿದಿನ ಏನು ಬಂದ್ ಮಾಡಲ್ಲ ಎಂದು ಉತ್ತರಿಸಿದ ಅವರು, ಎಂಇಎಸ್, ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ. ಬಂದ್‍ಗೆ ಜೆಡಿಎಸ್ ಬೆಂಬಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ
Advertisement
Advertisement
ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎಚ್‍ಡಿಕೆ, ಡಿ. 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ವಿವಿಧ ಸಂಘಟನೆಗಳು ಕರೆ ನೀಡಿದೆ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್‍ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು ಎಂದಿದ್ದರು.
Advertisement
Advertisement
ಡಿ.28 ರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಕುಮಾರಸ್ವಾಮಿ, ಜನರು ಇನ್ನೂ ಕೂಡ ಜಾಗೃತರಾಗಿಲ್ಲ. ಕೊರೊನಾ ಅನೇಕ ರೂಪಾಂತರಿಗಳನ್ನು ಹೊಂದಿದೆ. ಈಗ ಓಮಿಕ್ರಾನ್ ಬಂದಿದ್ದು, ಹೆಚ್ಚಾಗುತ್ತಿದೆ. ಸರ್ಕಾರದ ಕಾನೂನುಗಳನ್ನು ಜನರು ಪಾಲಿಸಬೇಕು. ಒಂದಿಷ್ಟು ಜನ ಸೇರಬಹುದು ಎಂದು ಮಾಡಿರುವುದು ತಪ್ಪು. ಮೊದಲಿನಂತೆ ಬಿಗಿಯಾಗಬೇಕು. ಜನರ ದಿನಚರಿಗೆ ತೊಂದರೆಯಾಗದಂತೆ ನಿಯಮಗಳನ್ನು ತರಬೇಕು ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೆ ಕಷ್ಟ: ಎಚ್‌ಡಿಕೆ
ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ ಮಾಡಿದ್ದೇವೆ. ದೇಶದಲ್ಲಿ ಎಲ್ಲರೂ ಕೂಡ ಒಂದೇ, ಯಾವುದೇ ಧರ್ಮ ಅನುಸರಿಸಲಿ ಎಲ್ಲ ಕೂಡ ಒಂದೇ. ಮಹಾತ್ಮ, ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಮತಾಂತರವಾಗಿದ್ರು. ಅದು ಅವರವರ ಇಚ್ಛೇ. ಆದರೆ ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಈಗಾಗಲೇ ಸಂವಿಧಾನದಲ್ಲಿ ಅವಕಾಶವಿದೆ, ಆದ್ದರಿಂದ ಇವೆಲ್ಲವನ್ನೂ ತರುವ ಅಗತ್ಯವಿಲ್ಲ. ಭಾವನಾತ್ಮಕ ವಿಚಾರಗಳನ್ನು ತಂದು ಪಕ್ಷಕ್ಕೆ ಅನೂಕೂಲ ಮಾಡಿಕೊಳ್ಳುವ ದೃಷ್ಟಿಯಿಂದ ಬಿಜೆಪಿ ಸರ್ಕಾರ ಈ ರೀತಿ ಮಾಡಿದೆ. ನಾವು ವಿರೋಧ ಮಾಡಿದ್ದೀವಿ, ಕಾಂಗ್ರೆಸ್ ವಿರೋಧ ಮಾಡಿದೆ, ಜನಸಾಮಾನ್ಯರು ವಿರೋಧ ಮಾಡಿದ್ದಾರೆ ಎಂದು ಹೇಳಿದರು.