ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ (Chakravarti Sulibele) ಬರೆದಿರುವ ಪಠ್ಯ ತೆಗೆಯುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ (BJP) ಅವಧಿಯ ಪಠ್ಯ ಪರಿಷ್ಕರಣೆ (Text Book Revision) ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ಓದಿಲ್ಲ. ಆದರೂ ಅವರು ಬರೆದಿರುವ ಪಠ್ಯ ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ? ಅವರು ಪಿಹೆಚ್‌ಡಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ
Advertisement
Advertisement
ಬಾಡಿಗೆ ಭಾಷಣಕಾರರನ್ನೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿದ್ದೀರಿ. ಅದನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸಪ್ ಯೂನಿವರ್ಸಿಟಿಯಲ್ಲಿ ಓದೋರುವವರು ಇವರು. ಅವರೆಲ್ಲಾ ಪಠ್ಯ ರಚನೆ ಮಾಡಲು ಪ್ರಾರಂಭಿಸಿದ್ದಾರೆ. ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಸೂಲಿಬೆಲೆ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿದ್ದು ಪ್ರಮಾಣವಚನ ವೇಳೆ ವೇದಿಕೆಯಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ – ತನಿಖೆಗೆ ರಾಜ್ಯಪಾಲರ ಪತ್ರ
Advertisement
ಚಕ್ರವರ್ತಿ ಸೂಲಿಬೆಲೆಯವರು ಭಗತ್‌ಸಿಂಗ್, ಸುಖದೇವ್ ಅವರ ಬಗ್ಗೆ ಬರೆದಿರುವುದು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವವಿದೆ. ಅವರ ನಿಜವಾದ ಇತಿಹಾಸ ನಾವು ಹೇಳುತ್ತೇವೆ. ನಾನು ನಾಸ್ತಿಕ ಏಕೆ ಆಗಿದ್ದೇನೆ ಎಂಬ ಭಗತ್ ಸಿಂಗ್ ಪುಸ್ತಕವಿದೆ. ಅದನ್ನು ಚಕ್ರವರ್ತಿ ಸೂಲಿಬೆಲೆ ಓದಲಿ ಸಾಕು. ಇತಿಹಾಸ ತಿರುಚಿಲ್ಲದ ಪಾಠ ನಾವು ಇಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅತ್ತೆ, ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ: ರೇಣುಕಾಚಾರ್ಯ
Advertisement
ಚಕ್ರವರ್ತಿಗಿಂತ ಒಳ್ಳೆಯ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳುವ ವ್ಯಕ್ತಿ ಅಲ್ಲ. ಅವರು ಬರೆದಿರುವ ಪಠ್ಯ ನಾನು ಯಾಕೆ ಓದಲಿ? ನನಗೆ ಓದೋಕೆ ಸಾಕಷ್ಟಿದೆ. ಅವರು ಬರೆದಿರುವ ಪಠ್ಯ ನಾನು ಓದಿಲ್ಲ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ಮಕ್ಕಳಿಗೆ ಅಗತ್ಯವಿಲ್ಲ. ಯಾವುದು ಕೇಸರೀಕರಣವಿದೆ. ಯಾವುದು ಸತ್ಯ ಅಲ್ಲ ಅದೆಲ್ಲವನ್ನೂ ತೆಗೆಯುತ್ತೇವೆ ಎಂದರು. ಇದನ್ನೂ ಓದಿ: ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸರು – ತಪ್ಪಾಯ್ತು ಬಿಟ್ಬಿಡಿ ಅಣ್ಣಾ ಎಂದು ಸಾರ್ವಜನಿಕರಲ್ಲಿ ಕ್ಷಮೆ
ಸಾಹಿತಿಗಳ ಹಿನ್ನೆಲೆ ಇಲ್ಲದೇ ಬರೆದವರ ಪಠ್ಯ ಯಾಕೆ ಓದಬೇಕು? ಆಡಳಿತ ಪಕ್ಷಕ್ಕೆ ಹತ್ತಿರದವರಾಗಿದ್ದೆ ಎಂದು ಪಠ್ಯ ಹಾಕುವುದು ಸರಿನಾ? ನಾವು ಅದರ ವಿರುದ್ಧ ಇದ್ದೇವೆ. ನಮ್ಮ ಮಕ್ಕಳು ವಾಟ್ಸಪ್ ಯೂನಿವರ್ಸಿಟಿ ಓದಬೇಕಾ ಅಥವಾ ಒಳ್ಳೆಯ ಯೂನಿವರ್ಸಿಟಿ ಓದಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!
ಗೃಹಲಕ್ಷ್ಮೀ (Gruhalakshmi) ವಿಚಾರದಲ್ಲಿ ಮಕ್ಕಳು ತೆರಿಗೆ ಕಟ್ಟಿದರೆ ಯೋಜನೆ ಅನ್ವಯ ಆಗಲ್ಲ ಎಂಬ ನಿಯಮ ಕುರಿತು ಮಾತನಾಡಿದ ಅವರು, ಮಾರ್ಗಸೂಚಿಗಳು ಈಗ ಕ್ಲಿಯರ್ ಆಗಿವೆ. ಟ್ಯಾಕ್ಸ್ ಕಟ್ಟೋರು, ಜಿಎಸ್‌ಟಿ ಕಟ್ಟುವವರಿಗೆ ಯೋಜನೆ ಅನ್ವಯ ಆಗಲ್ಲ ಎಂದು ಹೇಳಿದ್ದೇವೆ. ಆ ನಿಯಮ ಸರಿಯಾಗಿಯೇ ಇದೆ. ಮುಂಚೆಯೂ ನಾವು ಹೇಳಿದ್ದೆವು. ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಸಮಾಜದ ಮುಖ್ಯವಾಹಿನಿಗೆ ತರೋದು ನಮ್ಮ ಸರ್ಕಾರದ ಮೂಲ ಉದ್ದೇಶ. ಫೇಸ್ 1ರಲ್ಲಿ ಈಗ ಇರುವ ನಿಯಮವೇ ಅಂತಿಮ. ಫೇಸ್ 2ರಲ್ಲಿ ಇದೆಲ್ಲವನ್ನೂ ಮುಂದೆ ನೋಡೋಣ ಎಂದು ಕಾಂಗ್ರೆಸ್ (Congress) ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?