ಬೆಂಗಳೂರು: ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಲ್ಲ, ಯಾರು ಸಂಶಯ ಇಟ್ಟುಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ವಿಧಾನಸೌಧದ ಆವರಣದಲ್ಲಿ ನಡೆದ ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ಬೇಡ ಅಂದರೂ ನಾವು ಒಳ ಮೀಸಲಾತಿ ಜಾರಿ ಮಾಡ್ತೀವಿ. ಸುಪ್ರೀಂ ಕೋರ್ಟ್ ಕೋರ್ಟ್ ಡೈರೆಕ್ಷನ್ ಬಂದ್ಮೇಲೆ ನಾವು ಮಾಡದೇ ಇರ್ತೀವಾ? ಬಡ್ತಿ ಮೀಸಲಾತಿ ಮಾಡುತ್ತಿಲ್ಲ. ಒಂದು ವೇಳೆ ಮಾಡಿದ್ರು ಅದನ್ನು ನಿಲ್ಲಿಸುತ್ತೇವೆ. ಉದ್ಯೋಗ ನೇಮಕಾತಿ ಎಲ್ಲವನ್ನೂ ನಿಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಾಗಮೋಹನ್ ದಾಸ್ ನೇತೃತ್ವದ ಆಯೋಗದವರು ಮಧ್ಯಂತರ ವರದಿ ಕೊಟ್ಟಿದ್ದಾರೆ. ನಾವು ವೈಜ್ಞಾನಿಕವಾಗಿ ಜಾರಿ ಮಾಡಬೇಕಿದೆ. ಎರಡು ತಿಂಗಳ ಸಮಯ ತೆಗೆದುಗೊಂಡು ಸೂಕ್ತ ತೀರ್ಮಾನ ಮಾಡ್ತೀವಿ ಎಂದು ಆಯೋಗ ಹೇಳಿದೆ ಎಂದರು.