ಬಾಗಲಕೋಟೆ: ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮದೇವ ವಚನಾಂಕಿತ ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.
Advertisement
25 ವರ್ಷಗಳ ಹಿಂದಿನ ವಚನಗಳ ಅಂಕಿತನಾಮ ವಿವಾದಕ್ಕೆ ಇತಿಶ್ರೀ ಹಾಡಿದ ಗಂಗಾದೇವಿ ಅವರು, ಇಂದು ಸುದ್ದಿಗೋಷ್ಠಿಯಲ್ಲಿ ಬಸವಣ್ಣನವರ ವಚನಗಳ ಅಂಕಿತ ನಾಮ ಗೊಂದಲ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.
Advertisement
Advertisement
ಈ ವೇಳೆ ಅವರು, ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಬದಲಾಗಿ, ಲಿಂಗದೇವ ಎಂದು ಅಂಕಿತನಾಮ ಬಳಸಲಾಗುತ್ತಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದಾಗಲೂ ಕೂಡಲ ಸಂಗಮ ದೇವ ಎಂದು ವಚನಾಂಕಿತ ಬಳಸುವಂತೆ ಆದೇಶಿಸಲಾಗಿತ್ತು. ಈ ಬಗ್ಗೆ ಯಾವುದೇ ಗೊಂದಲ ಬೇಡ. ಇನ್ಮುಂದೆ ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮ ದೇವ ವಚನಾಂಕಿತ ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಅಂಕಿತನಾಮದ ಗೊಂದಲಕ್ಕೆ ತೆರೆ ಎಳೆದರು. ಇದನ್ನೂ ಓದಿ: ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ
Advertisement
ಮಾತೆ ಮಹಾದೇವಿಯವರು ಬರೆದಿದ್ದ ‘ಬಸವ ವಚನ ದೀಪ್ತಿ’ ಪುಸ್ತಕದಲ್ಲಿ ಬಸವಣ್ಣನವರ ವಚನಾಂಕಿತವನ್ನು ಕೂಡಲಸಂಗಮ ದೇವ ಬದಲಾಗಿ ಲಿಂಗದೇವ ಎಂದು ಬಳಸಲಾಗಿತ್ತು. ಬಸವಣ್ಣನವರ ವಚನಗಳ ಅಂಕಿತನಾಮದಲ್ಲಿ ಕೂಡಲಸಂಗಮ ಬಳಸಬೇಕಾ ಅಥವಾ ಲಿಂಗದೇವ ಬಳಸಬೇಕಾ ಎಂಬ ಗೊಂದಲ ವಚನಗಾರರಲ್ಲಿ ಏರ್ಪಟ್ಟಿತ್ತು. ಹಲವು ಸ್ವಾಮೀಜಿಗಳ ವಿರೋಧದ ಮಧ್ಯೆ 25 ವರ್ಷಗಳ ಹಿಂದೆ ಈ ವಿವಾದ ಹೈಕೋರ್ಟ್ ನಂತರ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಇಂದು ಅದಕ್ಕೆಲ್ಲ ಮುಕ್ತಿ ಸಿಕ್ಕಿದೆ. ಇನ್ನು ಮುಂದೆ ಹೈಕೋರ್ಟ್ ಆದೇಶದಂತೆ ವಚನಗಳಿಗೆ ಕೂಡಲಸಂಗಮದೇವ ಎಂದು ಬಳಸುತ್ತೇವೆ ಎಂದು ಮಾತೆ ಗಂಗಾದೇವಿ ಸ್ಪಷ್ಟಪಡಿಸಿದ್ದಾರೆ.