ಮಂಗಳೂರು: ಹತ್ಯೆಯಾದ ಎಲ್ಲರ ಮನೆಗೂ ಸಿ.ಎಂ ಬರುತ್ತೇನೆ ಎಂದು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ. ಪರಿಹಾರ ಕೊಡುವ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸುತ್ತಾರೆ. ಕನಿಷ್ಠ ಮಾನವೀಯತೆ ದೃಷ್ಟಿಯಿಂದಾದರೂ ಮನೆಗೆ ಹೋಗಬೇಕು. ತಾರತಮ್ಯ ಮಾಡುವುದನ್ನು ಯಾವ ಧರ್ಮದವರು ಸಹ ಒಪ್ಪಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ರಾಜ್ಯದಲ್ಲಿ ಹತ್ಯೆಯಾದವರಿಗೆ ಸರ್ಕಾರದಿಂದ ಪರಿಹಾರ ನೀಡುವಲ್ಲಿ ತಾರತಮ್ಯ ವಿಚಾರವಾಗಿ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಸಮಾನ ಪರಿಹಾರ ಕೊಟ್ಟಿದ್ದೇವೆ. ಅಶ್ರಫ್ ಕಲಾಯಿ- ಶರತ್ ಮಡಿವಾಳ ಇಬ್ಬರಿಗೂ ಪರಿಹಾರ ನೀಡಿದ್ದೇವೆ. ದೀಪಕ್ ರಾವ್ – ಬಷೀರ್ ಇಬ್ಬರಿಗೂ ಸಮಾನ ಪರಿಹಾರ ಕೊಡಲಾಗಿದೆ. ವೈಯಕ್ತಿಕ ದ್ವೇಷದ ಹಲ್ಲೆ ಆದಾಗ ಪರಿಹಾರ ಕೊಡದೆ ಇರಬಹುದು. ಒಬ್ಬರ ಮನೆಗೆ ಹೋಗಿ ಇನ್ನೊಬ್ಬರ ಮನೆಗೆ ಹೋಗದೆ ತಾರತಮ್ಯ ಮಾಡಿಲ್ಲ ಎಂದು ಸಿಎಂ ನಡೆಯ ಕುರಿತು ಕೆಂಡಕಾರಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ
Advertisement
Advertisement
ರಾಜ್ಯದಲ್ಲಿ ಪ್ರಕೃತಿ ವಿಕೋಪ ಅತಿವೃಷ್ಟಿಯಿಂದ ಜನ ತತ್ತರಿಸಿದ್ದಾರೆ. ರಾಜ್ಯ ಸರ್ಕಾರದಿಂದ ಜನರ ಕಣ್ಣೀರು ಒರೆಸುವ ಒಂದೇ ಒಂದು ಯೋಜನೆ ಇಲ್ಲ. ಕೇಂದ್ರದಿಂದ ಅನುದಾನ ಕೇಳುವುದಕ್ಕೆ ರಾಜ್ಯ ಸರ್ಕಾರಕ್ಕೆ ಧೈರ್ಯ ಇಲ್ಲ. ಸಂಕಷ್ಟದಲ್ಲಿರುವ ರಾಜ್ಯದ ನೊಂದ ಜನರನ್ನು ರಾಜ್ಯ ಸರ್ಕಾರ ಅನಾಥರನ್ನಾಗಿಸಿದೆ. ರಾಜ್ಯ ಸರ್ಕಾರ ಅತಿವೃಷ್ಟಿ, ಪ್ರಕೃತಿ ವಿಕೋಪ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಂಕಷ್ಟ ಎದುರಿಸುತ್ತಿರುವ ಜನರ ರಕ್ಷಣೆಗೆ ಸರ್ಕಾರ ಬರಲಿದೆ ಎಂಬ ವಿಶ್ವಾಸ ಜನರಿಗಿಲ್ಲ. ಸರ್ಕಾರದ ಮೇಲೆ ಜನ ಇಟ್ಟಿರುವ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದರೂ ಸರ್ಕಾರ ಅನುದಾನ ಕೇಳಿಲ್ಲ. ಪಕ್ಷದ ವಿಚಾರವಷ್ಟೇ ಚರ್ಚೆ ಮಾಡುತ್ತಾರೆ. ಅನುದಾನದ ವಿಚಾರದಲ್ಲಿ ಒಂದು ಮನವಿಯನ್ನು ಸಲ್ಲಿಸಿಲ್ಲ. ಜನರನ್ನು ಉಳಿಸುವ ಬದಲು ಪಕ್ಷ ಉಳಿಸುವ ವಿಚಾರವಷ್ಟೇ ಇವರಿಗಿದೆ. ರಾಜ್ಯದ ಹಕ್ಕು ಕೇಳಲು ಯಾಕೆ ಮೌನವಾಗಿದ್ದಾರೆ? ಅನುದಾನ ಕೇಳಲು ಮುಜುಗರವಾದ್ರೆ ಸರ್ವ ಪಕ್ಷದ ಮುಖಂಡರನ್ನು ಕರೆದುಕೊಂಡು ಹೋಗಲಿ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಇದನ್ನೂ ಓದಿ: ನನ್ನನ್ನು ಕಂಡ್ರೆ ಬಿಜೆಪಿಯವರಿಗೆ ಭಯವೋ ಭಯ: ಸಿದ್ದರಾಮಯ್ಯ
Advertisement
Live Tv
[brid partner=56869869 player=32851 video=960834 autoplay=true]