ಇಸ್ಲಾಮಾಬಾದ್: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ನಡೆಯುತ್ತಿರುವ ಕಾದಾಟದ ನಡುವೆ ಇದೀಗ ಪಾಕ್‌ಗೆ ಚೀನಾ (China) ಬೆಂಬಲ ನೀಡುವುದಾಗಿ ತಿಳಿಸಿದೆ.
ಏ.22ರಂದು ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸುವ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಭಾರತಕ್ಕೆ ರಷ್ಯಾ, ಜಪಾನ್ ಬೆಂಬಲಿ ನೀಡಿದರೆ, ಇನ್ನೊಂದು ಕಡೆ ನೆರೆ ರಾಷ್ಟ್ರ ಚೀನಾ ಪಾಕ್‌ಗೆ ಬೆಂಬಲ ನೀಡುವುದಾಗಿ ಹೇಳಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವು ಸದಾ ಪಾಕಿಸ್ತಾನ ಬೆಂಬಲಿಸುತ್ತೇವೆ ಎಂದು ಹೇಳಿದೆ.ಇದನ್ನೂ ಓದಿ: ಯೆಮೆನ್ ಬಂದರು ಮೇಲೆ ಇಸ್ರೇಲ್ ದಾಳಿ- ಉಂಡೆಗಳಂತೆ ಮೇಲಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆ
ಸೋಮವಾರ ಪಾಕ್ ಅಧ್ಯಕ್ಷ ಅಲಿ ಜರ್ದಾರಿ ಅವರನ್ನು ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಚೀನಾ ಮತ್ತು ಪಾಕಿಸ್ತಾನದ ಸ್ನೇಹ ಶಾಶ್ವತವಾಗಿದೆ. ಕಾಲ ಕಾಲಕ್ಕೆ ಪರೀಕ್ಷೆಗೆ ಒಳಗಾಗಿದ್ದರೂ ಯಾವಾಗಲೂ ಸವಾಲಿನ ಸಮಯದಲ್ಲಿ ಪರಸ್ಪರ ಬೆಂಬಲಿಸಿದ ಸ್ನೇಹ ನಮ್ಮದಾಗಿದೆ. ಹೀಗಾಗಿ ದಕ್ಷಿಣ ಏಷ್ಯಾ ಶಾಂತಿಗಾಗಿ ಪಾಕ್‌ಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ.
ಪಾಕ್ ಬೆಂಬಲಿಸುವುದಾಗಿ ತಿಳಿಸಿ ಮಾತನಾಡಿದ ಜರ್ದಾರಿ, ಭಾರತವು ಬೇಜಾವಾಬ್ದಾರಿ ಮತ್ತು ಆಕ್ರಮಣಕಾರಿ ನಡೆಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: 1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್! – ಮಾಕ್ ಡ್ರಿಲ್ ಹೇಗಿರಲಿದೆ?