ಮಾಸ್ಕೋ: ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವನ್ನಲ್ಲ ಎಂದು ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ಪಷ್ಟಪಡಿಸಿದ್ದಾರೆ.
ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಸಭೆ ನಡೆಯುತ್ತಿದೆ. ಪ್ರಪಂಚವು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ವಿಭಜನೆಯ ಬಗ್ಗೆಯೂ ಮಾತನಾಡುತ್ತಿದೆ. ಈ ಸಂದರ್ಭದಲ್ಲಿ ಹಣದುಬ್ಬರವನ್ನು ತಡೆಗಟ್ಟುವುದು ಮತ್ತು ಆಹಾರ, ಶಕ್ತಿ, ಆರೋಗ್ಯ ಮತ್ತು ನೀರಿನ ಭದ್ರತೆಯನ್ನು ಖಾತ್ರಿಪಡಿಸುವುದು ಆದ್ಯತೆಯ ವಿಷಯಗಳಾಗಿವೆ. ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಹಿತಿ (ಆನ್‌ಲೈನ್‌ನಲ್ಲಿ ಹರಡುವಿಕೆ) ಮತ್ತು ಡೀಪ್‌ಫೇಕ್ ಮೊದಲಾದ ಸೈಬರ್ ವಂಚನೆಗಳಂತಹ ಹೊಸ ಸವಾಲುಗಳು ಎದುರಾಗಿವೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಂತಿ ಮಾತುಕತೆ ಯಶಸ್ವಿ – 5 ವರ್ಷದ ಬಳಿಕ ನಡೆಯಲಿದೆ ಮೋದಿ-ಜಿನ್‌ಪಿಂಗ್ ದ್ವಿಪಕ್ಷೀಯ ಸಭೆ
Advertisement
Advertisement
ಇಂತಹ ಸನ್ನಿವೇಶದಲ್ಲಿ ಬ್ರಿಕ್ಸ್ ಗುಂಪಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ನಾವು ವೈವಿಧ್ಯಮಯ ಮತ್ತು ಅಂತರ್ಗತ ವೇದಿಕೆಯಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದು ನಾನು ನಂಬುತ್ತೇನೆಂದು ಹೇಳಿದ್ದಾರೆ.
Advertisement
ನಮ್ಮ ವಿಧಾನವು ಜನಕೇಂದ್ರಿತವಾಗಿರಬೇಕು. ಬ್ರಿಕ್ಸ್ ವಿಭಜನೆ ಮಾಡುವುದಕ್ಕಾಗಿ ಅಲ್ಲ. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ: ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತು
Advertisement
ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರನ್ನು ಎದುರಿಸಲು ನಮಗೆ ಎಲ್ಲರ ಏಕ ಮನಸ್ಸಿನ ಮತ್ತು ದೃಢವಾದ ಬೆಂಬಲ ಬೇಕು. ಈ ಗಂಭೀರ ವಿಷಯದಲ್ಲಿ ಎರಡು ಮಾನದಂಡಗಳಿಗೆ ಸ್ಥಳವಿಲ್ಲ ಎಂದು ಒತ್ತಿ ಹೇಳಿದ್ದಾರೆ.