8 ಸಾವಿರ ಕೋಟಿ ಖರ್ಚು ಮಾಡಿ ದಶಪಥ ರಸ್ತೆ ಮಾಡಿದ್ದೇವೆ, ಎಲ್ಲರೂ ಹೆಮ್ಮೆಪಡಬೇಕು – ಸಿಎಂ

Public TV
1 Min Read
Basavaraj Bommai

ಚಾಮರಾಜನಗರ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಗೆ (Bengaluru Mysuru Expressway) 8 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಇದರಿಂದ ಇಡೀ ರಾಷ್ಟ್ರವೇ ಮೈಸೂರನ್ನು ಸಂಪರ್ಕಿಸುತ್ತೆ. ಇದಕ್ಕೆ ಎಲ್ಲರೂ ಹೆಮ್ಮೆಪಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) 108 ಅಡಿಯ ಮಹದೇಶ್ವರ ಪ್ರತಿಮೆ ಲೋಕಾರ್ಪಣೆಗೊಳಿಸಿದ ನಂತರ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಮಳೆಯ ಅವಾಂತರದ ಬಗ್ಗೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.  ಇದನ್ನೂ ಓದಿ: ಮಾ.25ರಂದು ಮತ್ತೆ ಮೋದಿ ರಾಜ್ಯಕ್ಕೆ – ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋಗೆ ಮುಹೂರ್ತ ಫಿಕ್ಸ್‌

Bengaluru Mysuru Expressway 9

ಮಳೆ (Rain) ಬಂದಾಗ ರಸ್ತೆಯಲ್ಲಿ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಳ್ಳುತ್ತವೆ, ಅದನ್ನೆಲ್ಲ ಸರಿಪಡಿಸುತ್ತೇವೆ. ಒಂದು ಬಾರಿ ಮಳೆಯಾದಾಗಲೇ ಸಮಸ್ಯೆ ಗೊತ್ತಾಗುವುದು ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲದೇ ಯಾರೇ ಸ್ಪರ್ಧೆ ಮಾಡಿದ್ರು ನನ್ನ ಗೆಲುವು ಶತಸಿದ್ಧ – ಕೋಲಾರ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್

ʻಇಂತಹ ರಸ್ತೆ ಉದ್ಘಾಟನೆ ಮಾಡಲು ಮೋದಿ (Narendra Modi) ಬರಬೇಕಿತ್ತಾ?ʼ ಎಂಬ ಟೀಕೆಗೆ ಉತ್ತರಿಸಿದ ಸಿಎಂ, 8 ಸಾವಿರ ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ದೇವೆ. ಈ ರಸ್ತೆಯಿಂದ ಇಡೀ ರಾಷ್ಟ್ರವೇ ಮೈಸೂರನ್ನು ಸಂಪರ್ಕಿಸುತ್ತೆ. ಎಲ್ಲರೂ ಇದಕ್ಕೆ ಹೆಮ್ಮೆ ಪಡಬೇಕು. ಇಂತಹ ಮಹತ್ವದ ಕೆಲಸಕ್ಕಲ್ಲದೇ ಮತ್ತ್ಯಾವುದಕ್ಕೆ ಪ್ರಧಾನಿ ಅವರನ್ನ ಕರೆಸಬೇಕು? ಎಂದು ತಿರುಗೇಟು ನೀಡಿದ್ದಾರೆ.

Bengaluru Mysuru Expressway 1 2

ಎನ್‌‌ಎಚ್‌ಎಂ ನೌಕರರ ಮುಷ್ಕರ ವಿಚಾರದ ಬಗ್ಗೆ ಮಾತನಾಡಿ, ಅವರಿಗೂ ವೇತನ ಹೆಚ್ಚಳ ಮಾಡಬೇಕೆಂಬುದು ನಮ್ಮ ಉದ್ದೇಶ. ಇನ್ನೆರಡು ದಿನಗಳಲ್ಲಿ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದ ಅವರು, ಉರಿಗೌಡ ನಂಜೇಗೌಡ ವಿವಾದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

Share This Article
Leave a Comment

Leave a Reply

Your email address will not be published. Required fields are marked *