ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGowda Patil Yatnal) ಅವರ ಹೇಳಿಕೆಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್ ಮಾಡದಂತೆ ವಾರ್ನ್ ಮಾಡಿದ್ದೇವೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನಿಂಗ್ ಮಾಡಿದ್ದೇವೆ ಎಂದು ಬಿಜೆಪಿ (BJP) ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನು ಮಂತ್ರಿ ಮಾಡಿಲ್ಲ. ಅದಕ್ಕಾಗಿ ಹೀಗೆ ಮಾತನಾಡಿದ್ದಾರೆ. ಯಾರೇ ಆದ್ರು ಪಕ್ಷದ ಚೌಕಟ್ಟಿನಲ್ಲಿ ಮಾಡಬೇಕು. ಪಕ್ಷದ ಹಿರಿಯ ನಾಯಕರನ್ನು ಗೌರವಿಸಬೇಕು. ಯತ್ನಾಳ್ ಇಂತಹ ಹೇಳಿಕೆಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್ ಮಾಡದಂತೆ ವಾರ್ನ್ ಮಾಡಿದ್ದೇವೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ಸೂಚಿಸಿದ್ದೇವೆ. ಈ ಬಗ್ಗೆ ಪಕ್ಷ ಸೂಕ್ತವಾದ ನಿರ್ಧಾರ ಮಾಡಲಿದೆ. ಯಾರು ತಮ್ಮ ಸ್ವಾರ್ಥವನ್ನು ಇಟ್ಟುಕೊಂಡು ಮಾತನಾಡಬಾರದು ಎಂದರು. ಇದನ್ನೂ ಓದಿ: ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ: ಅರುಣ್ ಸಿಂಗ್
ಬಿಎಸ್‍ವೈ, ಸಿಎಂ ಬೊಮ್ಮಾಯಿ ಒಟ್ಟಾಗಿ ವಿಜಯಸಂಕಲ್ಪ ಯಾತ್ರೆ ಮಾಡಿದ್ರೆ ಬಿಜೆಪಿ ಸೋಲುತ್ತದೆ ಎಂದು ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಅವರ ಹೇಳಿಕೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಯತ್ನಾಳ್ ಹೇಳಿಕೆಯನ್ನು ಪಕ್ಷದ ಕಾರ್ಯಕರ್ತರು ನಿರ್ಲಕ್ಷ್ಯ ಮಾಡುತ್ತಾರೆ. ಅವರು ನಮ್ಮ ಕೋರ್ ಕಮಿಟಿ ಸದಸ್ಯರೂ ಅಲ್ಲ. ಇಂತಹ ಯತ್ನಾಳ್ ಹೇಳಿಕೆ ಪಕ್ಷದ ಕಾರ್ಯಕರ್ತರಿಗೂ ಇಷ್ಟ ಆಗಲ್ಲ. ಯತ್ನಾಳ್ ಅವರು ಬಿಜೆಪಿಯಿಂದ ಗೆದ್ದಿದ್ದಾರೆ. ಈ ಹಿಂದೆ ಪಕ್ಷದಿಂದ ಹೊರಗೆ ಹೋಗಿದ್ರು. ಬಿಜೆಪಿ ಎಲ್ಲಾ ಸಮಾಜ, ಜನಾಂಗದ ಪರವಾಗಿ ಕೆಲಸ ಮಾಡುತ್ತಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅಂತಾ ಮೋದಿ (Narendra Modi) ಸರ್ಕಾರ ಕೆಲಸ ಮಾಡುತ್ತಿದೆ. ಮೋದಿಯವರ ಸರ್ಕಾರ ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅನೇಕ ಸ್ವಾಮೀಜಿ ಅವರೇ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಆಧುನಿಕ ಭಗೀರಥ ಖ್ಯಾತಿಯ ಕಾಮೇಗೌಡ ನಿಧನ
ಪಂಚಮಸಾಲಿ (Panchamasali) ಮೀಸಲಾತಿ ಹೋರಾಟ ವಿಚಾರಕ್ಕೆ, ಎಸ್‍ಸಿ (SC), ಎಸ್‍ಟಿ (ST) ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಹೆಚ್ಚಳ ಮಾಡಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿಗೆ ಬಿಜೆಪಿ ಬೆಂಬಲಿಸಿದೆ. ಕಾಂಗ್ರೆಸ್ (Congress) ಎಂದಿಗೂ ಮೀಸಲಾತಿ ಹೆಚ್ಚಿಸುವ ಕೆಲಸವನ್ನು ಮಾಡಲಿಲ್ಲ. ಪಂಚಮಸಾಲಿ ಸಮುದಾಯದ ಮೂರು ದೊಡ್ಡ ನಾಯಕರೇ ಮಂತ್ರಿಗಳಿದ್ದಾರೆ. ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಂಕರ್ ಗೌಡ ಪಾಟೀಲ್ ಮುನೇನಕೊಪ್ಪ ಅವರೇ ಪಂಚಮಸಾಲಿ ಸಚಿವರು ಇದ್ದಾರೆ. ಆದ್ರು ಪಂಚಮಸಾಲಿ ಸಮುದಾಯದ ಜನರ ಬೇಡಿಕೆ ಬಗ್ಗೆ ಕುಳಿತು ಸಮಾಲೋಚನೆ ಮಾಡಿದ್ದೇವೆ ಎಂದು ಅರುಣ್ ಸಿಂಗ್ ಹೇಳಿದರು.