ಬೀದರ್: ಪ್ರತಿ ವರ್ಷ ಮದರಸಾದಲ್ಲಿ (Madrasa) ಪೂಜೆ ನಡೆಯುತ್ತಿದ್ದು, ಇಲ್ಲಿಯವರೆಗೆ ಯಾವುದೇ ವಿವಾದಗಳಾಗಿರಲಿಲ್ಲ. ಆದರೆ ಈ ವರ್ಷ ಯಾರದೋ ಕುಮ್ಮಕ್ಕಿನಿಂದ ಮದರಸಾ ವಿವಾದವಾಗಿದೆ. ಅವರೇ ವಿಡಿಯೋಗಳನ್ನು ಮಾಡಿ, ವೈರಲ್ ಮಾಡಿದ್ದು, ಮದರಸಾ ವಿವಾದಕ್ಕೆ ಕಾರಣರಾಗಿದ್ದಾರೆ ಎಂದು ಹಿಂದೂ (Hindu) ಮುಖಂಡರು ಮದರಸಾದಲ್ಲಿ ದೇವಿಗೆ ಪೂಜೆ ಮಾಡಿದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Advertisement
ಬೀದರ್ (Bidar) ನಗರದ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕ ಮೊಹಮ್ಮದ್ ಗವಾನ್ ಮದರಸಾದಲ್ಲಿ (Mohammed Gawan Madrasa) ದಸರಾ (Dasara) ಉತ್ಸವದ ವೇಳೆ ದೇವಿಗೆ ಪೂಜೆ ಸಲ್ಲಿಸಿರುವ ಬಗ್ಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತೀಯ ಕಾರ್ಯಕಾರಣಿ ಸದಸ್ಯ ರಾಮಕೃಷ್ಣನ್, ಮದರಸಾ ವಿವಾದದಲ್ಲಿ ಯಾವುದೋ ದುಷ್ಟ ಶಕ್ತಿ ಬೀದರ್‌ಗೆ ಪ್ರವೇಶ ಮಾಡಿದೆ. ಎಂಐಎಂ (MIM) ಪಕ್ಷ ಬೀದರ್‌ಗೆ ಪ್ರವೇಶ ಮಾಡಿ ಹಲವು ವರ್ಷಗಳು ಕಳೆದಿದ್ದು. ಈಗ ಇವರು ಮುಸ್ಲಿಮರನ್ನು ಎತ್ತಿ ಕಟ್ಟಿ ಜಿಲ್ಲೆಯಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಎಂಐಎಂ ಪಕ್ಷದ ಸಂಸ್ಥಾಪಕ ಅಸಾದ್ದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ‘ಕಬ್ಬಿಣದ ಕಾಲುಗಳ ವ್ಯಕ್ತಿ’ ಭಾರತಕ್ಕೆ ಗರಬಡಿಸಿದ್ದಾನೆ: ಮೋದಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್
Advertisement
Advertisement
ಮದರಸಾದಲ್ಲಿ ಪೂಜೆಗೆ ಹೋದ ಸಂದರ್ಭದಲ್ಲಿ ಅಲ್ಲಿನ ಯಾವುದೇ ಲಾಕ್‌ಗಳನ್ನು ಮುರಿಯಲಾಗಿಲ್ಲ. ಯಾರನ್ನೂ ತಳ್ಳಿಲ್ಲ. ಇದರಲ್ಲಿ ಹಿಂದೂಗಳದ್ದು ಯಾವುದೇ ತಪ್ಪಿಲ್ಲ. ಮದರಸಾದಲ್ಲಿ ಪೂಜೆ ಮಾಡುವ ಸಂಪ್ರದಾಯ 1985 ರಿಂದಲೂ ಇದ್ದು, ಅದನ್ನು ಪಾಲಿಸಿಕೊಂಡು ಬಂದಿದ್ದೇವೆ. ಇದಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿಯನ್ನೂ ಪಡೆಯಲಾಗಿದೆ ಎಂದರು. ಇದನ್ನೂ ಓದಿ: ಮಿನಿಮಮ್ ಚಾರ್ಜ್ ಲೂಟಿ – ಓಲಾ, ಉಬರ್ ಆಟೋ ಮುಂದಿನ 3 ದಿನ ಇರೋದು ಡೌಟ್
Advertisement
ಹಿಂದೂಗಳದ್ದು ಯಾವುದೇ ತಪ್ಪಿಲ್ಲದಿದ್ದರೂ ಶಾಸಕ ರಹೀಂ ಖಾನ್ ಒತ್ತಡಕ್ಕೆ ಒಳಗಾಗಿ ಅವರ ಮೇಲೆ ಎಎಫ್‌ಐಆರ್ ದಾಖಲು ಮಾಡಲಾಗಿದೆ. ಈಗಾಗಲೇ ಬಂಧಿಸಿದ ನಾಲ್ವರಿಗೆ ಜಾಮೀನು ಸಿಕ್ಕು ಹೊರಗಡೆ ಬಂದಿದ್ದಾರೆ. ಅವರು ಇನ್ನಾದರೂ ಸುಮ್ಮನೆ ಕುಳಿತರೆ ಸರಿ, ಇಲ್ಲವಾದರೆ ನಾವು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.