ಬೆಂಗಳೂರು: 2022ರ ಹುಬ್ಬಳ್ಳಿ (Hubballi) ಗಲಭೆ ಕೇಸ್ ವಾಪಸ್ ಪಡೆದಿರೋ ಸರ್ಕಾರದ ನಿರ್ಧಾರವನ್ನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ದಾಖಲಿಸಿದ್ದ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ. ಕೆಲವು ಕೇಸ್‌ಗಳನ್ನು ಚರ್ಚೆ ಮಾಡಿ ವಾಪಸ್ ತೆಗೆದುಕೊಂಡಿದ್ದೇವೆ. ಗಲಭೆ ಪ್ರಕರಣಗಳಲ್ಲಿ ಇತರೆ ಆರೋಪಿಗಳು ಎಂದು ಸೇರಿಸಿರುತ್ತಾರೆ. ಹೀಗಾಗಿ ಅದರ ತನಿಖೆ ಮಾಡಿ ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು. ಇದನ್ನೂ ಓದಿ: ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು
ಸಿ.ಟಿ ರವಿ (C T Ravi) ಅವರ ಪ್ರಕರಣವನ್ನು ವಾಪಸ್ ತೆಗೆದುಕೊಂಡಿದ್ದೇವೆ. ಇದು ರಾಜಕೀಯ ಅಂತಾ ಅವರು ಹೇಳ್ತಾರಾ? ಹೇಳಲಿ ಅವರಿಗೆ ಏನು ಶಿಕ್ಷೆ ಆಗಬೇಕು ಆಗಲಿ. ಎಲ್ಲ ಕೇಸ್ ಪರಿಶೀಲನೆ ಮಾಡಲಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದು ಬಿ ರಿಪೋರ್ಟ್ ಹಾಕುತ್ತಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ