ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಧಿಪತಿಗಳಿಗೆ ಕೊಟ್ಟಿರುವ ಹಣವನ್ನು ತಂದು ರೈತರಿಗೆ (Farmers) ಹಂಚಲು ಯೋಚಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ವಿಜಯಪುರದಲ್ಲಿಂದು (Vijayapura) ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೈ ಅಭ್ಯರ್ಥಿ ರಾಜು ಅಲಗೂರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಮೋದಿ ಸರ್ಕಾರ (Modi Govt.) ಕಳೆದ 10 ವರ್ಷಗಳಲ್ಲಿ 20 ಮಂದಿ ಶ್ರೀಮಂತರನ್ನ ಮಾತ್ರ ಬೆಳೆಸಿದೆ. ಅದಾನಿ ಅವರಿಗೆ ಭಾರತದ ದೊಡ್ಡ ದೊಡ್ಡ ಯೋಜನೆಗಳನ್ನ ಕೊಟ್ಟಿದ್ದಾರೆ. ಬಡವರಿಗೆ ಏನು ಕೊಟ್ಟಿದ್ದಾರೆ? ಆದ್ರೆ ನಮ್ಮ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಡವರಿಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದೆ. ಆದರಿಂದ ಸಾಕಷ್ಟು ಉಪಯೋಗ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 38.23% ಮತದಾನ-ಬೆಂಗಳೂರು ನಗರದಲ್ಲಿ ಅತಿ ಕಡಿಮೆ, ದಕ್ಷಿಣ ಕನ್ನಡದಲ್ಲಿ ಗರಿಷ್ಠ
Advertisement
Advertisement
ನಮ್ಮ ಸರ್ಕಾರ ಈಗ ಕೋಟ್ಯಧಿಪತಿಗಳನ್ನು ಲಕ್ಷಾಧಿಪತಿಗಳಾಗಿ ಮಾಡಲು ಹೊರಟಿದೆ. ಎಷ್ಟು ಹಣ ಮೋದಿ ಅವರು ಈ ಕೋಟ್ಯಧಿಪತಿಗಳಿಗೆ ಕೊಟ್ಟಿದ್ದಾರೋ ಅದನ್ನ ರೈತರಿಗೆ ಕೊಡಲು ಯೋಚಿಸಿದ್ದೇವೆ. ಈಗಾಗಲೇ ಕರ್ನಾಟಕದಲ್ಲಿ ಮಹಿಳೆಯರಿಗೆ 2,000 ರೂ. ಸಿಗುತ್ತಿದೆ. ಈ ಚುನಾವಣೆಯ ನಂತರ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತೆ. ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರ ಪಟ್ಟಿ ರೆಡಿ ಮಾಡ್ತೀವಿ. ಪ್ರತಿ ಬಡ ಕುಟುಂಬದಿಂದ ಓರ್ವ ಮಹಿಳೆಯನ್ನ ಆಯ್ಕೆ ಮಾಡುತ್ತೇವೆ. ಆ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ಕೊಡ್ತೇವೆ. ಇದರ ಜೊತೆಗೆ ಕರ್ನಾಟಕ ಸರ್ಕಾರ ಮಹಿಳೆಯರಿಗೆ 24 ಸಾವಿರ ರೂ. ಕೊಡುವುದನ್ನು ಮುಂದುವರಿಸುತ್ತದೆ. ಪ್ರತಿ ತಿಂಗಳು 1ನೇ ತಾರೀಕಿನಂದು ತಮ್ಮ ಅಕೌಂಟ್ ಚೆಕ್ ಮಾಡಿದ್ರೆ ಅದರಲ್ಲಿ 10,500 ರೂ. ಇರುತ್ತೆ ಎಂದು ಭರವಸೆ ನೀಡಿದ್ದಾರೆ.
ಬಡವರು ಆರ್ಥಿಕವಾಗಿ ಸಬಲರಾಗುವವರೆಗೂ ಅವರಿಗೆ ಹಣ ಕೊಡುತ್ತೇವೆ. ಮೋದಿಯವರು ಕೋಟ್ಯಾಧೀಶರಿಗೆ ಕೆಲಸ ಕೊಟ್ಟು, ಬಡವರಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರ ವೇತನ ಡಬಲ್ ಮಾಡುತ್ತೇವೆ. ಅಗ್ನಿವೀರ್ ಯೋಜನೆಯನ್ನು ರದ್ದುಮಾಡುತ್ತೇವೆ ಎಂದು ಗ್ಯಾರಂಟಿ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಹತೈಗೈದ ಸೇನೆ
ಪ್ರಧಾನಿ ಮೋದಿಗೆ ಈಗಾಗಲೇ ಭಯ ಶುರುವಾಗಿದೆ. ಅದಕ್ಕಾಗಿ ಅವರು ಬೇರೆ-ಬೇರೆ ವಿಚಾರ ಮಾತನಾಡ್ತಾರೆ. ಒಮ್ಮೆ ಚೀನಾ ಮತ್ತೊಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡಿ ದಿಕ್ಕು ತಪ್ಪಿಸುತ್ತಾರೆ. ಭಾರತದಲ್ಲಿ ಎದುರಿಸಬೇಕಾದ ಸವಾಲುಗಳು ಅನೇಕ ಇವೆ. ಬಡತನ, ನಿರುದ್ಯೋಗ, ಬೆಲೆ ಏರಿಕೆಯಂತಹ ಸವಾಲುಗಳು ನಮ್ಮ ಮುಂದಿವೆ. ಕಳೆದ 10 ವರ್ಷಗಳಲ್ಲಿ ಬಡವರನ್ನು ಉದ್ಧಾರ ಮಾಡಿದ್ದೇವೆ ಎಂದು ಹೇಳುವ ಮೋದಿ ಬಡವರಿಂದಲೇ ಹಣ ಕಸಿದುಕೊಂಡಿದ್ದಾರೆ. ಆದ್ದರಿಂದಲೇ ಭಾರತದ ಶೇ.1 ರಷ್ಟು ಜನರ ಬಳಿ ಇವತ್ತು 40% ಸಂಪತ್ತು ತುಂಬಿದೆ ಎಂದು ಕಿಡಿ ಕಾರಿದ್ದಾರೆ.