ರಾಮನಗರ: ಬಿಜೆಪಿಯವರಿಗಿಂತ (BJP) ನಮಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿದೆ. ದೇವೇಗೌಡರಿಗಿಂತ (H.D DeveGowda) ದೊಡ್ಡ ದೈವಾರಾಧಕರು ಯಾರೂ ಇಲ್ಲ. ನಾವು ಸದಾ ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ. ಅದಕ್ಕಾಗಿಯೇ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡಿಸಿ ಲಕ್ಷಾಂತರ ಜನರಿಗೆ ದೇವರ ದರ್ಶನ ಮಾಡಿಸಿದ್ದೆವು. ಭಕ್ತಿಗೆ ಇದಕ್ಕಿಂತ ಇನ್ನೊಂದು ನಿದರ್ಶನ ಬೇಕಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಅಭಿಪ್ರಾಯಪಟ್ಟರು.
Advertisement
ತಾಲೂಕಿನ ಕೈಲಂಚಾ ಹೋಬಳಿ ಕವಣಾಪುರದಲ್ಲಿ ಸಮುದಾಯ ಭವನ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಾತಿ, ಧರ್ಮದ ವಿಷ ಬೀಜ ಬಿತ್ತುವ ಕೆಲಸ ಫಲ ನೀಡುವುದಿಲ್ಲ. ಎಲ್ಲ ಸಮುದಾಯದವರು ಒಂದೇ ಎಂಬ ಭಾವನೆಯಲ್ಲಿ ಅಣ್ಣ ತಮ್ಮಂದಿರಂತೆ ಜೀವನ ನಡೆಸಬೇಕು. ಕ್ಷೇತ್ರದ ಜನರು ಸಹೋದರರಂತೆ ಸಹ ಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಯಾರೂ ಜಾತಿ, ಮತ, ಧರ್ಮದ ಆಧಾರಿತ ರಾಜಕೀಯಕ್ಕೆ ಮನ್ನಣೆ ನೀಡುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕರ್ನಾಟಕದ ಸಹಕಾರಿ ಕ್ಷೇತ್ರದಿಂದ ಇಡೀ ದೇಶಕ್ಕೆ ಸಂದೇಶ ರವಾನೆ – ಅಮಿತ್ ಶಾ ಬಣ್ಣನೆ
Advertisement
Advertisement
ಈ ಹಿಂದೆ ಕುಮಾರಸ್ವಾಮಿಯವರು (H.D Kumaraswamy) ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಿರುಪತಿ ದೇವಾಲಯ ಟ್ರಸ್ಟ್‌ನವರು ರಾಮನಗರದಲ್ಲಿ ದೇವಾಲಯ ನಿರ್ಮಿಸಲು ಮುಂದಾಗಿ ಸ್ಥಳವನ್ನು ಹುಡುಕುತ್ತಿದ್ದರು. ಆಗ 10 ಎಕರೆ ಜಾಗ ಗುರುತಿಸುವ ಕೆಲಸ ನಡೆದಿತ್ತು. ನಾವು ಹೆಚ್ಚು ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ವಿರೋಧಿಗಳಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಪ್ರತ್ಯುತ್ತರ ನೀಡುತ್ತೇವೆ. ನಮ್ಮದು ಅಭಿವೃದ್ಧಿ ರಾಜಕಾರಣ ಮಾತ್ರ. ಕೆಲವರು ಓಡಾಡಿಕೊಂಡು ಕೆಲಸ ಮಾಡುವವರ ವಿರುದ್ಧ ಟೀಕೆ ಮಾಡುವುದು ಸುಲಭ. ಆದರೆ, ಕ್ಷೇತ್ರದ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ನಾನು ಗಮನ ಹರಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಡಿ.31ರ ರಾತ್ರಿ ನಂದಿ ಬೆಟ್ಟಕ್ಕೆ ನೋ ಎಂಟ್ರಿ – ಪಾರ್ಟಿ ಪ್ರಿಯರಿಗೆ ನಿರಾಸೆ