ಬಳ್ಳಾರಿ: ಚುನಾವಣೆ ಸಂದರ್ಭದಲ್ಲಿ 593 ಭರವಸೆ ಕೊಟ್ಟಿದ್ವಿ. ಅವುಗಳಲ್ಲಿ 2 ವರ್ಷಗಳಲ್ಲಿ 242 ಭರವಸೆ ಈಡೇರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಹೊಸಪೇಟೆಯಲ್ಲಿ ನಡೆದ ಸರ್ಕಾರದ ಸಮರ್ಪಣಾ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಎರಡು ವರ್ಷಗಳ ಹಿಂದೆ ನಾವು ಈ ರಾಜ್ಯದ ಜನರ ಮುಂದೆ ಹೋದಾಗ ಅನೇಕ ಭರವಸೆ ಕೊಟ್ಟಿದ್ವಿ. ಆ ಭರವಸೆಗಳ ಉದ್ದೇಶ ಸರ್ವ ಜನಾಂಗದ ಶಾಂತಿಯ ತೋಟ. ಅದರಲ್ಲಿ 593 ಭರವಸೆ ಕೊಟ್ಟಿದ್ವಿ. ಅವುಗಳಲ್ಲಿ 2 ವರ್ಷಗಳಲ್ಲಿ 242 ಭರವಸೆ ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸ್ತೇವೆ. ಅದರ ಜೊತೆಗೆ ಐದು ಗ್ಯಾರಂಟಿ ಭರವಸೆ ಕೊಟ್ಟಿದ್ವಿ. ಯಾವುದೇ ಧರ್ಮ, ಜಾತಿ ಇಲ್ಲದೇ ಎಲ್ಲಾ ಜನರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಕೊಡುವ ಕಾರಣಕ್ಕೆ ಗ್ಯಾರಂಟಿ ಭರವಸೆ ಕೊಟ್ಟಿದ್ವಿ. ಅದರಲ್ಲಿ ಶಕ್ತಿ ಯೋಜನೆ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ಮಾಡಿದ್ವಿ. ಉಳಿದಂತೆ ಗೃಹಜ್ಯೋತಿ, ಅನ್ನಭ್ಯಾಗ್ಯ ಜಾರಿ ಮಾಡಿದ್ವಿ. ಆಗಸ್ಟ್ ತಿಂಗಳಲ್ಲಿ ಆಮೇಲೆ ಉಳಿದ ಎರಡು ಗ್ಯಾರಂಟಿ ಗೃಹಲಕ್ಷ್ಮೀ ಹಾಗೂ ಜನವರಿಯಲ್ಲಿ ಯುವನಿಧಿ ಜಾರಿ ಮಾಡಿದ್ವಿ. ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಗ್ಯಾರಂಟಿ ಕೊಟ್ಟು, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕೊಟ್ಟ ಮಾತಿನಂತೆ ನಡೆದ ಯಾವುದಾದ್ರೂ ಸರ್ಕಾರ ಇದ್ರೆ ಅದು ನಮ್ಮ ಸರ್ಕಾರ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಜೆಟ್ ಪ್ರಶ್ನೆಗೆ ಬಿಜೆಪಿ ಪಾಕ್ ಪೋಸ್ಟರ್ – ಬಿರಿಯಾನಿ ತಿಂದವರು ಯಾರು? ಅಂತ ಕಾಂಗ್ರೆಸ್ ಕೌಂಟರ್
2013 ರಲ್ಲಿಯೂ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೆವು. ಬಿಜೆಪಿ 2018 ರಲ್ಲಿ ನೀಡಿದ ಯಾವ ಭರವಸೆ ಈಡೇರಿಸಿದೆ ಹೇಳಿ? ಅವರು ನೀಡಿದ್ದ ಭರವಸೆಗಳಲ್ಲಿ ಹತ್ತು ಪರ್ಸೆಂಟ್ ಭರವಸೆ ಈಡೇರಿಸಿಲ್ಲ. ಸುಳ್ಳು ಹೇಳೋದ್ರಲ್ಲಿ ಬಿಜೆಪಿಯವರು ನಿಸ್ಸೀಮರು. ನನ್ನ ಮೇಲೂ ಇಲ್ಲಸಲ್ಲದ ಅರೋಪ ಮಾಡಿದ್ರು. ಅದೆಲ್ಲಾ ನೂರಕ್ಕೆ ನೂರು ಸುಳ್ಳು. ಅವರೇನು ಕೊಟ್ರು ನಾವೇನು ಕೊಟ್ಟಿದ್ದೇವೆ, ಚರ್ಚೆಗೆ ಬನ್ನಿ ಅಂದ್ರೆ ಯಾರೂ ಬರೋದಿಲ್ಲ. ಧರ್ಮ ಧರ್ಮ, ಜಾತಿ ಜಾತಿಗಳ ಮೇಲೆ ಜಗಳ ದ್ವೇಷ ಹುಟ್ಟು ಹಾಕೋ ಕೆಲಸ ಬಿಜೆಪಿಯವರು ಮಾಡ್ತಾರೆ. ಯಾವುದೇ ಜಾತಿ, ಧರ್ಮ ಇರಲಿ ಎಲ್ಲರೂ ಒಂದೇ ಎನ್ನುವ ಮನೋಭಾವ ನಮ್ಮದು. ಅಂಬೇಡ್ಕರ್ ನೀಡಿದ ಸಂವಿಧಾನದ ಪ್ರಕಾರ ಸಮಾನತೆ ಜೀವನ ಮಾಡುತ್ತೇವೆ. ಬಹುತ್ವ ಇರುವ ದೇಶದಲ್ಲಿ ಸೌಹಾರ್ದತೆ ಪ್ರೀತಿ ಇರಬೇಕು. ಕಳೆದ ಎರಡು ವರ್ಷದಲ್ಲಿ ಕೇಂದ್ರ ಅನ್ಯಾಯ ಮಾಡಿದೆ. ತೆರಿಗೆ ಹಣದ ಪಾಲು ನೀಡಿಲ್ಲ. 13,000 ಕೋಟಿ ರೂ. ಹಣ ರಾಜ್ಯಕ್ಕೆ ನಷ್ಟವಾಗಿದೆ. ನಾಲ್ಕುವರೆ ಲಕ್ಷ ಕೋಟಿ ಹಣ ತೆರಿಗೆ ಕಟ್ಟುತ್ತೇವೆ. ಆದರೆ, ನಮಗೆ ಬರೋದು ಅರವತ್ತೈದು ಸಾವಿರ ಕೋಟಿ ಮಾತ್ರ. ರಾಜ್ಯಕ್ಕೆ ಅಗುವ ಅನ್ಯಾಯ ಸರಿಪಡಿಸಬೇಕಿದೆ. ಕೇಂದ್ರದ ಯೋಜನೆಗಳು ಕಡಿಮೆಯಾಗ್ತಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ರೀತಿಯಲ್ಲಿ ನಾವು ಸಮಾಜವನ್ನು ಬೆಳೆಸುತ್ತಿದ್ದೇವೆ. ಗಾಂಧೀಜಿ ಅವರು ಸರ್ವೋದಯ ಅಂದ್ರು. ಅದನ್ನ ನಾವು ಪಾಲನೆ ಮಾಡ್ತಿದ್ದೇವೆ. ಕಳೆದ ಎರಡು ವರ್ಷದಲ್ಲಿ ಕೇಂದ್ರ ಸರ್ಕಾರ ಅನೇಕ ಅನ್ಯಾಯ ಮಾಡಿದೆ. ಕೆಂದ್ರ ಸರ್ಕಾರ ತೆರಿಗೆಯಲ್ಲಿ ಪಾಲು ಕೊಟ್ಟಿಲ್ಲ. ನಮಗೆ ಇನ್ನೂ 13 ಸಾವಿರ ಕೋಟಿ ಕೊಡಬೇಕಿದೆ. ನಾವು ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ನಾಲ್ಕುವರೆ ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಅದರೆ, ಅವರು ನಮಗೆ ಕೇವಲ 65 ಸಾವಿರ ಕೋಟಿ ಕೊಡ್ತಾರೆ. ಅಂದ್ರೆ ನಾವು ನೂರು ರೂಪಾಯಿ ಕೊಟ್ಟರೆ ಅವರು ಕೇವಲ 15 ರೂಪಾಯಿ ಅಷ್ಟೇ ಕೊಡ್ತಾರೆ. ಪ್ರತಿ ವರ್ಷ ನಮ್ಮ ಪಾಲನ್ನ ನಮಗೆ ಸರಿಯಾಗಿ ಕೊಡ್ತಾ ಇಲ್ಲ. ನಮ್ಮ ಪಾಲನ್ನ ನಮಗೆ ಸರಿಯಾಗಿ ಕೊಡಿ ಎಂದ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಲ್ಲಿ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ ಕೇಂದ್ರ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಸ್ಕೀಂ ನಿಲ್ಲೋದಿಲ್ಲ: ಡಿಕೆಶಿ ಸ್ಪಷ್ಟನೆ
ಅಪ್ಪರ್ ಭದ್ರಾ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಮಾಡ್ತೀವಿ ಎಂದು ಮಾಡಿಲ್ಲ. ನಾವೆಲ್ಲ ದೆಹಲಿಗೆ ಹೋಗಿ ಕೇಳಿದ್ವಿ, ಕೊಡಲಿಲ್ಲ. ನಾವಷ್ಟೇ ಅಲ್ಲ ಎಲ್ಲರೂ ಈ ಅನ್ಯಾಯವನ್ನು ಪ್ರತಿಭಟಿಸಬೇಕು. ಅದ್ರೆ ಬಿಜೆಪಿ, ಜೆಡಿಎಸ್, ಯಡಿಯೂರಪ್ಪ, ಕುಮಾರಸ್ವಾಮಿ ಬಾಯಿ ಬಿಡ್ತಾ ಇಲ್ಲ. ಯಡಿಯೂರಪ್ಪ ಆಪರೇಷನ್ ಕಮಲ ಮೂಲಕ ಅಧಿಕಾರಿಕ್ಕೆ ಬಂದ್ರು. ಇವತ್ತು ಅವರ ಜೊತೆ ಕುಮರಸ್ವಾಮಿ ಸೇರಿದ್ದಾರೆ. ಯಾವತ್ತೂ ಜನ ಪೂರ್ಣ ಪ್ರಮಾಣದಲ್ಲಿ ಅವರಿಗೆ ಆಶೀರ್ವಾದ ಮಾಡಿಲ್ಲ. ಬಿಜೆಪಿ ಅವರು ಕೊಟ್ಟ ಭರವಸೆಯಲ್ಲಿ ಒಂದೂ ಈಡೇರಿಸಲಿಲ್ಲ. ಅವರು ಸಮಾಜದಲ್ಲಿ ವಿಷ ಬೀಜ ಬಿತ್ತಿದರು. ಅವರ ಸರ್ಕಾರ ಇದ್ದಾಗ ಲಂಚ ಹೊಡೆದ್ರು, 40 ಪರ್ಸೆಂಟ್ ಕಮಿಷನ್ ಹೊಡೆದರು ಎಂದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಜನಾಕ್ರೋಶ ಇದ್ದರೆ ಈ ಕಾರ್ಯಕ್ರಮಕ್ಕೆ ಇಷ್ಟೊಂದು ಜನರು ಬರುತ್ತಿದ್ರಾ? ಜನರಲ್ಲಿ ಯಾವ ಆಕ್ರೋಶವಿಲ್ಲ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ. ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿದ್ದಾರೆ. ಚಿನ್ನದ ಬೆಲೆ ಗಗನಕ್ಕೇರಿದೆ. ಬೆಳ್ಳಿ ದರ ಹೆಚ್ಚಾಗಿದೆ, ಗ್ಯಾಸ್ ದರ ಏರಿಕೆಯಾಗಿದೆ. ಮೋದಿಯವರ ಚೇಲಾಗಳು, ಕರ್ನಾಟಕದಲ್ಲಿರೋ ಚೇಲಾಗಳು ಡಾಲರ್ ಬೆಲೆ ಕಡಿಮೆಯಾಗ್ತದೆ ಎಂದಿದ್ರು. ಇವಾಗ ಅದು ಎಷ್ಟಾಗಿದೆ? ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಜನಾಕ್ರೋಶ ಎನ್ನುತ್ತಾರೆ. ಕೇಂದ್ರದಿಂದ ದರ ಏರಿಕೆ ಮಾಡಿದ್ದಾರೆ. ಜನಾಕ್ರೋಶ ಸಂಪೂರ್ಣ ಸುಳ್ಳು ಕಾರ್ಯಕ್ರಮ. ಉಳುವವನೆ ಭೂಮಿ ಒಡೆಯ ಮಾದರಿಯಲ್ಲಿ ವಾಸಿಸುವನೆ ಮನೆಯ ಒಡೆಯ ಎಂದು ಹಕ್ಕು ಪತ್ರ ನೀಡಿದ್ದೇವೆ ಎಂದರು. ಇದನ್ನೂ ಓದಿ: ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ: ರಾಹುಲ್ ಗಾಂಧಿ