– ದೇವಸ್ಥಾನ ಅಪೂರ್ಣವಾದ ಹಿನ್ನಲೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ
ನವದೆಹಲಿ: ರಾಮಮಂದಿರ (Ram Mandir) ಉದ್ಘಾಟನೆ ಬಿಜೆಪಿ (BJP) ಚುನಾವಣೆಗೆ ಬಳಸಿಕೊಳ್ಳುತ್ತಿದೆ. ರಾಮಮಂದಿರ ಕಾರ್ಯಕ್ರಮವನ್ನು ಕಾಂಗ್ರೆಸ್ (Congress) ತಿರಸ್ಕರಿಸಿಲ್ಲ. ಬದಲಿಗೆ ಯಾವ ಕಾರಣಕ್ಕೆ ನಾವು ಹೋಗಲ್ಲ ಅನ್ನೋದು ವಿವರಿಸಿದ್ದೇವೆ. ಪೂರ್ಣಗೊಳ್ಳದ ಮಂದಿರವನ್ನು ರಾಜಕೀಯಕ್ಕೆ ಬಳಸುತ್ತಿರುವುದರಿಂದ ನಾವು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ ( KN Rajanna) ಹೇಳಿದ್ದಾರೆ.
Advertisement
ನವದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದೂ ವಿರೋಧಿ ಅಂತಾ ಕರೆಯಬಹುದು. ಆದರೆ ನಾವು ಹಿಂದೂಗಳೇ. ರಾಮಲಲ್ಲಾ ಟೆಂಟ್‌ನಲ್ಲಿ ಇದ್ದಾಗ ನಾವು ಹೋಗಿ ದರ್ಶನ ಮಾಡಿದ್ದೇವೆ. ಆದರೆ ಬಿಜೆಪಿಯವರು ಹೇಳುವ ರೀತಿಯಲ್ಲಿ ನಮ್ಮದು ಗೋಡ್ಸೆ ಹಿಂದುತ್ವ ಅಲ್ಲ, ನಮ್ಮದು ಗಾಂಧಿ ಹಿಂದುತ್ವ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕೆಲ ಧರ್ಮದ್ವೇಷಿಗಳಿಂದ ಅಪಪ್ರಚಾರ: ಶೃಂಗೇರಿ ಮಠದಿಂದ ಸ್ಪಷ್ಟನೆ
Advertisement
Advertisement
ಮಂದಿರದ ಹೆಸರಿನಲ್ಲಿ ಬಿಜೆಪಿ ಗೋಡ್ಸೆ ಹಿಂದುತ್ವ ಜಾರಿಗೆ ತರಲು ಹೊರಟಿದೆ. ಇತಿಹಾಸಕ್ಕೆ ಹೋದರೆ ಯಾರು ಮಹಾತ್ಮ ಗಾಂಧಿ ವಿರೋಧ ಮಾಡಿದರು ಎಂದು ಗೊತ್ತಾಗುತ್ತದೆ. ಶಂಕರಾಚಾರ್ಯರು ಬಿಜೆಪಿ ನಡೆಯನ್ನು ವಿರೋಧಿಸಿದ್ದಾರೆ. ನಾವು ಅಲ್ಪ ಸಂಖ್ಯಾತರ ತುಷ್ಠೀಕರಣ ಮಾಡುವುದಾದರೆ ಮೋದಿ ಬಾಯಿಜಾನ್ ಕಾರ್ಯಕ್ರಮ ಬಿಜೆಪಿಯವರು ಮಾಡುತ್ತಿದ್ದಾರೆ. ಅದು ಮುಸ್ಲಿಂ ತುಷ್ಠೀಕರಣ ಅಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಕನ್ನಡದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಪ್ರಸಾರ
Advertisement
ಗ್ಯಾರಂಟಿ ಯೋಜನೆಗೆ ಸಮಿತಿ ರಚನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಆರ್ಥಿಕವಾಗಿ ಸುಭಿಕ್ಷವಾಗಿದೆ. ಯಾವುದೇ ಹಣಕಾಸಿನ ತೊಂದರೆ ಇಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ನಮ್ಮ ನಡುವೆ ವಿಚಾರ ಬೇಧ ಇರಬಹುದು, ಆದರೆ ನಾವೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಹಾಸನ, ತುಮಕೂರು ಕ್ಷೇತ್ರಗಳ ಅಭ್ಯರ್ಥಿಗಳ ವಿಚಾರವಾಗಿ ಚರ್ಚೆ ಮಾಡಿದೆ. ಮುದ್ದಹನುಮೇಗೌಡರು ನನ್ನನ್ನು ಭೇಟಿಯಾಗಿದ್ದು, ಬ್ಯಾಂಕಿನ ವಿಚಾರಕ್ಕೆ ಹೊರತು ರಾಜಕೀಯ ಚರ್ಚೆಯಾಗಿಲ್ಲ. ಮುದ್ದಹನುಮೇಗೌಡರು ಸಿಎಂ, ಡಿಸಿಎಂ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಏನು ಚರ್ಚೆ ಆಗಿದೆ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಮಂಡ್ಯದಿಂದ ಹೆಚ್‌ಡಿಕೆ ಸ್ಪರ್ಧೆ – ಕಾರ್ಯಕರ್ತರು, ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ: ನಿಖಿಲ್ ಕುಮಾರಸ್ವಾಮಿ