LatestMain PostNational

ಹೈದರಾಬಾದ್‍ ಮರ್ಯಾದಾ ಹತ್ಯೆಯನ್ನು ಖಂಡಿಸಿ ಮೋದಿಗೆ ಪ್ರಶ್ನೆ ಕೇಳಿದ ಓವೈಸಿ

ಹೈದರಾಬಾದ್: ತೆಲಂಗಾಣದ ಸರೂರ್‌ನಗರದಲ್ಲಿ ಶುಕ್ರವಾರ ನಡೆದ ಮರ್ಯಾದಾ ಹತ್ಯೆ ಘಟನೆಯು ಸಂವಿಧಾನ ಮತ್ತು ಇಸ್ಲಾಂ ಧರ್ಮದ ಪ್ರಕಾರ ಇದೊಂದು ಅಪರಾಧ ಕೃತ್ಯ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದ ರ್‍ಯಾಲಿ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರೂರ್‌ನಗರದಲ್ಲಿ ನಡೆದ ಘಟನೆಯನ್ನು ನಾವು ಖಂಡಿಸುತ್ತೇವೆ. ಮಹಿಳೆ ಇಷ್ಟಪಟ್ಟು ಮದುವೆಯಾಗಲು ನಿರ್ಧರಿಸಿದ್ದಾಳೆ. ಹಾಗಾಗಿ ಆಕೆಯ ಸಹೋದರನಿಗೆ ಪತಿಯನ್ನು ಕೊಲ್ಲುವ ಹಕ್ಕು ಇಲ್ಲ. ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಇದೊಂದು ಅಪರಾಧ ಕೃತ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

honour killing

ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗ ಮಾತನಾಡುತ್ತಾರೆ ಅಂತ ಅವರನ್ನು ಕೇಳಲು ಬಯಸುತ್ತೇನೆ? ಈ ಘಟನೆ ಬಗ್ಗೆ ಮೋದಿ ಅವರು ಮೌನ ವಹಿಸಿರುವುದೇಕೆ? ನಿಮ್ಮ ಅಪ್ಪ-ಅಮ್ಮ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರವಾಗಲು ಸಿದ್ಧರಿದ್ದರು: ನಾಗರಾಜು ಪತ್ನಿ ಅಶ್ರಿನ್

ನಿನ್ನೆಯಿಂದ ಈ ಘಟನೆಗೆ ಮತ್ತೊಂದು ಬಣ್ಣ ನೀಡಲಾಗುತ್ತಿದೆ. ಇಲ್ಲಿನ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಲಿಲ್ಲವೋ? ಅಥವಾ ಬಂಧಿಸುತ್ತಾರೋ? ಆದರೆ ನಾವು ಮಾತ್ರ ಆರೋಪಿಯ ಜೊತೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಮುಂಜಾನೆ, ಹೈದರಾಬಾದ್‍ನ ಸರೂರ್‌ನಗರ ಪೊಲೀಸರು ಬಿಲ್ಲಿಪುರಂ ನಾಗರಾಜು ಹತ್ಯೆಯಲ್ಲಿ ಭಾಗಿಯಾಗಿದ್ದ ಆಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿಯ ಇಬ್ಬರು ಸಂಬಂಧಿಕರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮೊಹಮ್ಮದ್ ಮಸೂದ್ ಅಹ್ಮದ್ ಅವರ ಸಹೋದರ ಸೈಯದ್ ಮೊಬಿನ್ ಅಹ್ಮದ್ ಎಂದು ಆಶ್ರಿನ್ ಸುಲ್ತಾನ ಗುರುತಿಸಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಸರೂರನಗರ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.

Back to top button