ನವದೆಹಲಿ: ಮಹಾಘಟಬಂಧನ್ ಮೈತ್ರಿಕೂಟ ತೊರೆದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮೌನ ಮುರಿದಿದ್ದಾರೆ. ನಮಗೆ ನಿತೀಶ್ ಕುಮಾರ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆ (Bharat Jodo Nyay Yatra) ಕೈಗೊಂಡಿರುವ ರಾಹುಲ್ ಗಾಂಧಿ ಅವರು, ಬಿಹಾರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಮಗೆ ನಿತೀಶ್ ಕುಮಾರ್ ಅಗತ್ಯವಿಲ್ಲ. ಒತ್ತಡಕ್ಕೆ ಒಳಗಾಗಿ ಅವರು ಯೂ-ಟರ್ನ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿತೀಶ್ ಸಿಎಂ ಆದ ಬಳಿಕ ಮೊದಲ ಬಾರಿ ಭಾರತ್ ಜೋಡೋ ಯಾತ್ರೆ ಬಿಹಾರಕ್ಕೆ ಎಂಟ್ರಿ
Advertisement
Advertisement
ರಾಜ್ಯಪಾಲರಿಗೆ ಬಹಳ ಆಶ್ಚರ್ಯವಾಯಿತು. ‘ಏನು ನಿತೀಶ್-ಜಿ ನೀವು ಇಷ್ಟು ಬೇಗ ಹಿಂತಿರುಗಿದ್ದೀರಿ?’ ಅವರು ಕೇಳಿದ್ದರು. ನಿತೀಶ್ ಕುಮಾರ್ ಅವರು ಹಾಗೆಯೇ ಎಂದು ರಾಹುಲ್ ಗಾಂಧಿ ಚಾಟಿ ಬೀಸಿದ್ದಾರೆ.
Advertisement
ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದಿಂದ ಬಿಹಾರ ಸಿಎಂ ನಿತೀಶ್ ಕುಮಾರ್ ಈಚೆಗೆ ನಿರ್ಗಮಿಸಿದರು. ಬಳಿಕ ಆರ್‌ಜೆಡಿ ಜೊತೆಗಿನ ಮಹಾಘಟಬಂಧನ್ ಮೈತ್ರಿ ಮುರಿದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಇದನ್ನೂ ಓದಿ: 9ನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ
Advertisement
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜ.28 ರಂದು 9 ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಇದರ ಜೊತೆ ಬಿಹಾರದ ಸಂಪುಟ ದರ್ಜೆಯ ಸಚಿವರಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಪ್ರಮಾಣ ವಚನ ಸ್ವೀಕರಿಸಿದರು.