ಬೀದರ್: ನಾವೆಲ್ಲಿ ಕುರ್ಚಿಗಾಗಿ ಕಿತ್ತಾಡುತ್ತಿದ್ದೇವೆ, ನಮ್ಮಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santhosh Lad) ತಿರುಗೇಟು ನೀಡಿದ್ದಾನೆ.
ಬೀದರ್ ನಲ್ಲಿ (Bidar) ಸಿಎಂ ಹಾಗೂ ಡಿಸಿಎಂ ಕುರ್ಚಿ ಕಿತ್ತಾಟ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದವರ ವಿಪಕ್ಷ ನಾಯಕನ ಹುದ್ದೆ ಖಾಲಿ ಇದ್ದು ವಿಪಕ್ಷಗಳು ಕಿತ್ತಾಡುತ್ತಿವೆಯೇ ಹೊರತಾಗಿ ನಾವಲ್ಲಾ ಎಂದ್ರು ಕಿಡಿಕಾರಿದರು.
Advertisement
Advertisement
ಮಧ್ಯಪ್ರದೇಶ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಗ್ಗೆ ಮಾತಾನಾಡಬೇಕಲ್ಲಾ ಅವರು. ಮಧ್ಯಪ್ರದೇಶದಲ್ಲಿ ಒಂದು ಮೊಬೈಲ್‍ನಿಂದ 7 ಲಕ್ಷ ಜನರು ಅದರ ಸದುಪಯೋಗ ಪಡೆದಿದ್ದಾರೆ. ಕತಾರ್‍ನಲ್ಲಿ ಮಾಜಿ ನೌಕಾಪಡೆಯ 8 ಜನ ಅಧಿಕಾರಿಗಳನ್ನು ಗಲ್ಲಿಗೇರಿಸಿದರು. ಇದರ ಬಗ್ಗೆ ಒಬ್ಬರಾದ್ರು ಮಾತನಾಡಿದ್ರಾ..? ಪ್ರಧಾನಿ ಮೋದಿ (Narendra Modi) ಸಾಹೇಬರು ಅವರ ಸಾಧನೆ ಬಗ್ಗೆ ಮಾತಾನಾಡಬೇಕು, ರಾಜ್ಯ ಸರ್ಕಾರದ ಟೀಕೆ ಮಾಡಿದ್ರೆ ಏನು ಸಿಗುತ್ತೆ ಎಂದು ಮೋದಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಡಿಕೆಶಿಗೆ ನಾಳೆಯೇ ಸಿಎಂ ಆಗಬೇಕೆಂಬ ತವಕ: ಕಾಗೇರಿ
Advertisement
Advertisement
ನಮ್ಮ ಯೋಜನೆಗಳನ್ನು ಮೋದಿ ಕಾಪಿ ಮಾಡಿದ್ದು ಎಲ್ಲಾ ಕಾರ್ಯಕ್ರಮಗಳ ಹೆಸರು ಬದಲಾವಣೆ ಮಾಡಿ 70 ವರ್ಷದ ನಮ್ಮ ಯೋಜನೆ ಜಾರಿ ಮಾಡಿದ್ದಾರೆ. ಬೇರೆ ರಾಜ್ಯಕ್ಕೆ ಹೋಗಿ ನಮ್ಮ ರಾಜ್ಯದ ಬಗ್ಗೆ ಟೀಕೆ ಮಾಡುತ್ತಾರೆ. ನಮ್ಮ ರಾಜ್ಯದಲ್ಲಿ ಬರ ಬಂದಿದೆ. ಏನಾದ್ರು ಅನುದಾನ ಕೊಟ್ರಾ, ಅದಾನಿಗೂ ಸಾಲ ಕೊಡುತ್ತಾರೆ. ನಮಗೆ ಕೊಡೋಕೆ ಹಣ ಇಲ್ವಾ ಎಂದು ಸಂತೋಷ್ ಲಾಡ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಂಡಮಂಡಲರಾದರು.