ಚುನಾವಣೆ ಪ್ರಕ್ರಿಯೆ ನಿಯಂತ್ರಿಸುವ ಅಧಿಕಾರ ತಮಗಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಕೇಸಲ್ಲಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

Public TV
1 Min Read
Supreme Court

ನವದೆಹಲಿ: ಮತಯಂತ್ರದಲ್ಲಿ ನಮೂದಾದ ಶೇ.100 ರಷ್ಟು ಮತಗಳೊಂದಿಗೆ ವಿವಿ ಪ್ಯಾಟ್ (VVPAT) ಸ್ಲಿಪ್‌ಗಳನ್ನು ಹೋಲಿಸಿ ಲೆಕ್ಕ ಹಾಕಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ತೀರ್ಪನ್ನು ಕಾಯ್ದಿರಿಸಿದೆ.

ಕೇಂದ್ರ ಚುನಾವಣಾ ಆಯೋಗ ಎನ್ನುವುದು ಸಂವಿಧಾನಬದ್ಧವಾದ ಸಂಸ್ಥೆ. ನೀವು ಹೀಗೆ ಮಾಡಿ ಎಂದು ಕೋರ್ಟ್ ನಿರ್ದೇಶಿಸಲು ಬರಲ್ಲ. ಅಸಲಿಗೆ ಚುನಾವಣೆ ಪ್ರಕ್ರಿಯೆಯನ್ನು ನಿಯಂತ್ರಿಸುವ ಅಧಿಕಾರ ತಮಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕನೌಜ್‌ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಸ್ಪರ್ಧೆ

supreme Court 1

ಇವಿಎಂನಲ್ಲಿ ಮೈಕ್ರೋ ಕಂಟ್ರೋಲರ್ ಎಲ್ಲಿರುತ್ತೆ? ಕಂಟ್ರೋಲಿಂಗ್ ಯೂನಿಟ್‌ನಲ್ಲಾ? ವಿವಿ ಪ್ಯಾಟ್‌ನಲ್ಲಾ ಎಂದು ಪ್ರಶ್ನಿಸಿತು. ಇದಕ್ಕೆ ಚುನಾವಣಾಧಿಕಾರಿಗಳು ಕೋರ್ಟ್ ಮುಂದೆ ಹಾಜರಾಗಿ ವಿವರಣೆ ನೀಡಿದರು. ಇದನ್ನು ಪರಿಶೀಲಿಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತು.

ಈ ಸಂದರ್ಭದಲ್ಲಿ, ನಮ್ಮ ಅನುಮಾನಗಳನ್ನು ಆಯೋಗ ನಿವಾರಿಸಿದೆ. ಆದರೆ ನಿಮ್ಮ ಆಲೋಚನಾ ಧೋರಣೆಯನ್ನು ನಾವು ಬದಲಿಸಲಾಗಲ್ಲ. ಕೇವಲ ಅನುಮಾನಗಳ ಆಧಾರದ ಮೇಲೆ ಯಾವುದೇ ತೀರ್ಪು ನೀಡಲ್ಲ ಎಂದು ಅರ್ಜಿದಾರರನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ಹೇಳಿತು. ಇದನ್ನೂ ಓದಿ: ಬಿಜೆಪಿ ಟಿಕೆಟ್‌ ವಂಚಿತ, ಹತ್ರಾಸ್‌ ಸಂಸದ ಹೃದಯಾಘಾತದಿಂದ ನಿಧನ

Share This Article