ಬಳ್ಳಾರಿ: ಬಿಜೆಪಿ (BJP) ಅಭ್ಯರ್ಥಿ ಶ್ರೀರಾಮುಲು (B. Sriramulu) ಪರ ಮತಯಾಚಿಸಿದ ಮೈಸೂರು -ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Wadiyar) ದಲಿತರ ಮನೆಯಲ್ಲಿ ಎಳನೀರು ಸೇವಿಸಿದ್ದಾರೆ. ಬಳಿಕ ಮಾತನಾಡಿ, ದಲಿತರೊಂದಿಗೆ ನಾವಿದ್ದೇವೆ. ಮೈಸೂರು ಸಂಸ್ಥಾನ ಹಾಗೂ ಸಂವಿಧಾನಕ್ಕೂ ಅವಿನಾಭಾವ ಸಂಬಂಧವಿದೆ ಎಂದಿದ್ದಾರೆ.
ಜೈನ್ ಮಾರುಕಟ್ಟೆ ಮತ್ತು ಗೋನಾಳ ದಲಿತ ಕೇರಿಗಳಲ್ಲಿ ಅವರು ರಾಮುಲು ಪರ ಮತಯಾಚಿಸಿದ್ದಾರೆ. ಇಲ್ಲಿನ ಹಂಪಿ, ಅಂಜನಾದ್ರಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಚುನಾವಣಾ ಪ್ರಚಾರಕ್ಕೆ ಇದೇ ಮೊದಲ ಬಾರಿ ಬಂದಿದ್ದೇನೆ. ಅಂಬೇಡ್ಕರ್ ಸಂವಿಧಾನ ರಚನೆ ವೇಳೆ ಮೈಸೂರಿನ ಪ್ರಜಾ ಪ್ರತಿನಿಧಿ ಕಾಲ ಉಲ್ಲೇಖಿಸಿ, ಅಂದಿನ ಕಾಲದಿಂದಲೂ ದಲಿತರಿಗೆ ಸಮಾನ ಅವಕಾಶ ನೀಡುತ್ತಾ ಬಂದಿದ್ದೇವೆ. ಸಾಮಾನ್ಯ ಜನರ ಜೊತೆಗೆ ಮೈಸೂರಿನ ಮಹಾರಾಜರು ಸದಾಕಾಲವೂ ಇದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಭಾರತೀಯರಾಗಿ ಇರೋಣ ಎಂದು ಈ ವೇಳೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ: ಮೋದಿ
ಮಹಾರಾಜರ ಕುಟುಂಬ ಎಲ್ಲಾ ವರ್ಗದ ಜೊತೆಗೆ ಅಂದು ಮೈಸೂರಿನವರಾಗಿ, ಇದೀಗ ಭಾರತೀಯರಾಗಿ ಇದ್ದೇವೆ. ರಾಜ್ಯದ 28 ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮೈಸೂರಿನಲ್ಲಿ ನಾನು ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‍ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು