ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ತಜ್ಞರು ಸಲಹೆ ಕೊಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಿಜಿ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಹೆಚ್ಚಳ ಆಗ್ತಿದೆ. ತಜ್ಞರು ಸಲಹೆ ಕೊಟ್ಟಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಕ್ರಮ ತಗೋತೀವಿ. ಮೂರು ಅಲೆ ಎದುರಿಸಿದ್ದೇವೆ. ಈ ಬಗ್ಗೆ ಅರಿವಿದೆ. ಹೀಗಾಗಿ ನಿಯಂತ್ರಣ ಮಾಡೋಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
Advertisement
Advertisement
ಬೂಸ್ಟರ್ ಡೋಸ್‍ಗೆ ವಿಶೇಷ ಅಭಿಯಾನ ಮಾಡ್ತೀವಿ. ಸಂಘ ಸಂಸ್ಥೆಗಳನ್ನು ಬಳಸಿಕೊಳ್ತೀವಿ. ಲಸಿಕೆ ಯಶಸ್ವಿ ಮಾಡೋದು ನಮ್ಮ ಗುರಿ. ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸುತ್ತೇವೆ. ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡ್ತೀವಿ. ನಾಳೆ ಡಿಟೇಲ್ ಆಗಿ ಮಾರ್ಗಸೂಚಿ ಪ್ರಕಟ ಮಾಡ್ತೀವಿ ಎಂದು ತಿಳಿಸಿದರು.
Advertisement
ಬೂಸ್ಟರ್ ಡೋಸ್ ಉಚಿತವಾಗಿ ನೀಡುವ ವಿಚಾರವಾಗಿ ಮಾತನಾಡಿದ ಅವರು, ಇದನ್ನ ಕೇಂದ್ರ ಮಟ್ಟದಲ್ಲಿ ತೀರ್ಮಾನ ಮಾಡಬೇಕು. ಈಗಾಗಲೇ ಮಕ್ಕಳಿಗೆ ಉಚಿತ ಲಸಿಕೆ ಕೊಡಲಾಗುತ್ತಿದೆ. ಮೊದಲ, ಎರಡನೇ ಡೋಸ್ ಉಚಿತವಾಗಿ ನೀಡಲಾಗಿದೆ ಎಂದು ವಿವರಿಸಿದರು.
Advertisement
ಸಿಎಂ ನೇತೃತ್ವದಲ್ಲಿ ಡಿಜಿ ಸಭೆ ಆಗಿತ್ತು. ಈ ವೇಳೆ ಎಲ್ಲಾ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸೂಕ್ಷ್ಮ ಜಿಲ್ಲೆಗಳಲ್ಲಿ KSRP ನಿಯೋಜನೆ ಮಾಡಲಾಗಿದೆ. ಶಾಂತಿ ಭಂಗ ಆಗದಂತೆ ಎಚ್ಚರಿಕೆವಹಿಸಲಾಗಿದೆ ಎಂದು ಸಭೆಯಲ್ಲಿ ಡಿಜಿ ಹೇಳಿದ್ದಾರೆ.