ಮಂಡ್ಯ: ಜಿಲ್ಲೆಯ ಲೋಕ ರಾಜಕೀಯಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಯಾವುದೇ ಕಾರಣಕ್ಕೂ ವೋಟ್ ಹಾಕಲ್ಲ ಎಂದು ಮಂಡ್ಯ ಮುಸ್ಲಿಮರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮುಸ್ಲಿಂ ಮಹಿಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಪ್ರಧಾನಿಯಾಗಿರುವ ನರೇಂದ್ರ ಮೋದಿಯವರೇ ಅಧಿಕೃತವಾಗಿ ಹೇಳಿದ್ದಾರೆ. ಸುಮಲತಾ ಅವರಿಗೆ ಆಶೀರ್ವಾದ ಮಾಡಿ. ಅಲ್ಲಿಗೆ ಅವರು ಬಿಜೆಪಿ ಅಭ್ಯರ್ಥಿ ಎಂದು ಅವರೇ ಒಪ್ಪಿಕೊಂಡಂತೆ ಆಯಿತು. ಹೀಗಾಗಿ ಪಕ್ಷೇತರ ಅಭ್ಯರ್ಥಿಗೆ ನಾವು ವೋಟ್ ಹಾಕಲ್ಲ ಎಂದು ಹೇಳಿದ್ದಾರೆ.
Advertisement
Advertisement
ಅಂಬರೀಶ್ ಅಭಿಮಾನಿಗಳಾಗಿರುವ ನಮಗೆ ಮೊದಲೇ ಗೊಂದಲ ಇತ್ತು. ಅಣ್ಣ ಚಿರಸ್ಮರಣೆ ಆಗಿದ್ದರೂ ಕೂಡ ಅವರು ನಮ್ಮ ಮನದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಅವರ ಮುಖಾಂತರ ನಾವು ಸುಮಲತಾ ಅವರಿಗೆ ಬೆಂಬಲ ಕೊಡಬೇಕು ಅಂದುಕೊಂಡಿದ್ದೆವು. ಆದ್ರೆ ಇದೀಗ ಮೋದಿ ಕೊಟ್ಟಿರುವ ಹೇಳಿಕೆ ಗಮನಿಸಿದ್ರೆ ಅವರು ಬಿಜೆಪಿ ಕ್ಯಾಂಡಿಡೇಟ್ ಎಂದು ಖಚಿತವಾಗಿದೆ ಅಂದ್ರು. ಇದನ್ನೂ ಓದಿ: ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?
Advertisement
ಮುಸ್ಲಿಂ ಸಮುದಾಯವನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಾರೆ. ಜಾತಿ ರಾಜಕೀಯ ಮಾಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಸ್ಲಿಂ ಜನಾಂಗ ಬಿಜೆಪಿಗೆ ವೋಟ್ ಹಾಕಲ್ಲ. ಇಲ್ಲಿ ನಾವು ವ್ಯಕ್ತಿ ನೋಡಲ್ಲ ನಾವು ಪಕ್ಷ ನೋಡುತ್ತೇವೆ. ನಮಗೆ ಮೊದಲು ಬೇಕಾಗಿರೋದು ದೇಶ, ನಂತರ ಪಕ್ಷ, ಆ ಬಳಿಕ ವ್ಯಕ್ತಿ ವಿನಃ ವ್ಯಕ್ತಿಯಿಂದ ಪಕ್ಷ ನೋಡಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸುಮಲತಾಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ: ಪ್ರಧಾನಿ ಮೋದಿ
Advertisement
ಸುಮಲತಾ ಪಕ್ಷೇತರ ಆದ್ರೂ ನರೇಂದ್ರ ಮೋದಿಯವರೇ ಆಶೀರ್ವಾದ ಮಾಡಿದ್ದಾರೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸುಮಲತಾ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ನಾವೇನು ದಡ್ಡರಲ್ಲ. ಯಾರು ಯಾವ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳುವಷ್ಟು ನಮಗೆ ಸಾಮಥ್ರ್ಯ ಇದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ಸುಮಲತಾಗೆ ಬೆಂಬಲ ನೀಡಲ್ಲ ಎಂದು ಖಡಕ್ ಆಗಿ ನುಡಿದಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿಯವರ ಸುಮಲತಾರನ್ನು ಬೆಂಬಲಿಸಿ ನನಗೆ ಶಕ್ತಿ ನೀಡಿ ಎಂಬ ಹೇಳಿಕೆಯಿಂದ ಸುಮಲತಾಗೆ ವೋಟ್ ಹಾಕಬೇಕು ಅಂದುಕೊಂಡವರು ಉಲ್ಟಾ ಹೊಡೆದ್ರಾ ಉಲ್ಟಾ ಅನ್ನೊ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ನನಗೆ ಹೇಳೋಕೆ ಪದಗಳೇ ಬರುತ್ತಿಲ್ಲ, ಪ್ರಧಾನಿಯವರಿಗೆ ಹೃದಯಪೂರ್ವಕ ಥ್ಯಾಂಕ್ಸ್: ಸುಮಲತಾ