ಮೈಸೂರು: ಇಂಡಿಯಾ ಟುಡೆ ಸಮೀಕ್ಷೆ ಯಾರು, ಏಕೆ ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಪಾತ್ರ ಇದರಲ್ಲಿ ಎಷ್ಟಿದೆ ಎನ್ನುವ ಮಾಹಿತಿ ನನ್ನ ಬಳಿ ಇದೆ ಎಂದು ಜೆಎಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಮೀಕ್ಷೆ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್, ಬಿಜೆಪಿ ಟಿಕೆಟ್ ಘೋಷಣೆಯಾಗದೆ ಸಮೀಕ್ಷೆ ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಸಮೀಕ್ಷೆ ಉಲ್ಟಾ ಪಲ್ಟಾ ಆಗುವುದು ಖಚಿತ. ಜೆಡಿಎಸ್ ಕಿಂಗ್ ಮೇಕರ್ ಅಲ್ಲಾ, ಕಿಂಗ್ ಆಗುತ್ತದೆ. ಸರ್ವೆಯಲ್ಲಿ ಮೂರನೇ ಸ್ಥಾನದಲ್ಲಿರುವ ನಾವು, ಮೊದಲನೇ ಸ್ಥಾನಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಸಿಎಂ ಸಿದ್ದರಾಮಯ್ಯ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಒಂದು ತಿಂಗಳು ಕ್ಯಾಂಪ್ ಮಾಡಲಿ. ಆ ಎರಡು ಕ್ಷೇತ್ರಗಳಿಗೆ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಅವರೇನು ಮಾಡುತ್ತಾರೆ ಮಾಡಿಕೊಳ್ಳಲಿ. ಅಲ್ಲಿ ನಾನೇ ಗೆಲ್ಲುವುದು ಎಂದು ಸಿದ್ದರಾಮಯ್ಯ ಅವರಿಗೆ ಎಚ್‍ಡಿಕೆ ಸವಾಲು ಹಾಕಿದರು. ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರ -ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ?
Advertisement
ರಾಮನಗರದಲ್ಲಿ ನನ್ನ ನಡವಳಿಕೆಗೂ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರ ನಡವಳಿಕೆಗೂ ಹೋಲಿಕೆ ಮಾಡಬೇಡಿ. ಸಿದ್ದರಾಮಯ್ಯ ಅವರಿಗೂ ರಾಮನಗರಕ್ಕೂ ಏನು ಸಂಬಂಧ?. ಅವರು ರಾಮನಗರಕ್ಕೆ ಬಂದರೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ನಾನು ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ವಿಶೇಷ ಅರ್ಥ ಬೇಡ. ಇತರೆ ಮತಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿರುವಂತೆ ಇಲ್ಲಿಯೂ ಪ್ರಚಾರ ಮಾಡುತ್ತಿರುವೆ. 100 ಹಳ್ಳಿಗೆ ಭೇಟಿ ನೀಡಲು ನನ್ನ ಸಮಯ ನಿಗದಿ ಮಾಡಿಕೊಂಡಿದ್ದೇನೆ. ಚಾಮುಂಡೇಶ್ವರಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರಿಗಿಂತ ನನ್ನ ಕೊಡುಗೆ ಹೆಚ್ಚು. ಇದಕ್ಕೆ ಜಿ.ಟಿ.ದೇವೆಗೌಡರು ಕಾರಣ ಎಂದರು. ಇದನ್ನೂ ಓದಿ: ಖಾಸಗಿ ವಾಹಿನಿ ಸರ್ವೆಗೆ ಕೈ-ಕಮಲ ಫುಲ್ ಟೆನ್ಷನ್ – ಸೀಟು ಹೆಚ್ಚಳಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್
Advertisement
ತೆಲಗು ಭಾಷಾ ಕನ್ನಡಿಗರ ಮತ ಕ್ರೂಢೀಕರಣಕ್ಕೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಜೆಡಿಎಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅಲ್ಲದೇ, ಬಿಎಸ್‍ಪಿ ನಾಯಕಿ ಮಾಯಾವತಿ ಕೂಡ ಮೈಸೂರು ಸೇರಿದಂತೆ ನಾಲ್ಕು ಕಡೆ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದ್ರು.
https://www.youtube.com/watch?v=ErQsGS7ogzA