ಬೆಳಗಾವಿ/ಪಣಜಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು ಎಂದು ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಗೋವಾ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಬರುವ ಗೋವಾದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದಣ್ಣ ಮೇಟಿ, ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು. ಗೋವಾಗೆ ಹರಿಯುವ ಮಹದಾಯಿ ನೀರನ್ನು ಕರ್ನಾಟಕ ಸರ್ಕಾರ ನಿಲ್ಲಿಸಬಾರದು. ನಮ್ಮ ಕರ್ಮಭೂಮಿ ಗೋವಾ, ಜನ್ಮಭೂಮಿ ಕರ್ನಾಟಕ. ಗೋವಾ ನಮಗೆ ಅನ್ನ ನೀಡುತ್ತೆ, ಅದಕ್ಕೆ ಗೋವಾದ ಹೆಸರು ಹೇಳಬೇಕು ಎಂದು ಹೇಳಿಕೆ ಕೊಟ್ಟಿದ್ದರು.
Advertisement
Advertisement
ಸಿದ್ದಣ್ಣ ಮೇಟಿ ಹೇಳಿಕೆಗೆ ಗೋವಾ ಕನ್ನಡಿಗರಿಂದಲೇ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಸಿದ್ದಣ್ಣ ಮೇಟಿ ಹೇಳಿಕೆಗೆ ಪ್ರತಿಕ್ರಿಯಿಸಲು ಗೋವಾ ಕನ್ನಡಿಗರು ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ
Advertisement
ಸ್ಥಳೀಯರು ವರ್ಸಸ್ ವಲಸಿಗರ ವಾರ್
ಜೂನ್ ವೇಳೆಗೆ ಗೋವಾದ 196 ಗ್ರಾಮ ಪಂಚಾಯತಿ ಸ್ಥಾನಗಳಿಗೆ ಚುನಾವಣೆ ಹಿನ್ನೆಲೆ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಬಲಿಸುತ್ತೇವೆ ಎಂಬ ಸಿದ್ದಣ್ಣ ಮೇಟಿ ಹೇಳಿಕೆ ಸ್ಥಳೀಯ ಪಕ್ಷಗಳಿಗೆ ನಡುಕ ಶುರುವಾಗಿದೆ. ಇದಾದ ಬಳಿಕ ಗೋವಾದಲ್ಲಿ ರೆವ್ಯೂಲೇಷನ್ ಗೋವನ್ ಪಕ್ಷ ಹಾಗೂ ಗೋವಾ ಕನ್ನಡಿಗರ ಮಧ್ಯೆ ವಾರ್ ಪ್ರಾರಂಭವಾಗಿದೆ.
Advertisement
ರೆವಲ್ಯೂಷನರಿ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ವಿವಾದಿತ ಹೇಳಿಕೆ ನೀಡಿದ್ದು, ಗೋವಾ ಕನ್ನಡಿಗರು ನಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಏಕೆ ಮಧ್ಯಪ್ರವೇಶಿಸುತ್ತೀರಿ? ನೀವು ದುರ್ಗಾ ಪೂಜೆ, ಗಣೇಶ ಉತ್ಸವದಲ್ಲಿ ಭಾಗವಹಿಸುತ್ತೀರಿ. ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು ನಮ್ಮ ಹಬ್ಬಗಳಲ್ಲಿ ಭಾಗಿಯಾಗ್ತಿದ್ದಾರೆ. ಕನ್ನಡಿಗರು ಗೋವಾವನ್ನು ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ ಎಂದು ಹೇಳಿದ್ದರು.
ಗೋವಾದ ಎಲ್ಲೆಡೆ ಕನ್ನಡಿಗರು ದಾದಾಗಿರಿ ಪ್ರದರ್ಶಿಸುತ್ತಿದ್ದಾರೆ. ಇದು ನಿಮ್ಮ ತಂದೆಯ ಆಸ್ತಿ ಅಲ್ಲ, ನಮ್ಮ ತಂದೆಯ ಆಸ್ತಿ. ನೀವು ನಮ್ಮ ಹಬ್ಬಗಳ ಆಚರಣೆಯಲ್ಲೂ ಮಧ್ಯಪ್ರವೇಶ ಮಾಡುತ್ತೀರಿ. ರಾಜಕೀಯ ಲಾಭಕ್ಕಾಗಿ ದುರ್ಗಾಪೂಜೆ, ಗಣೇಶ ಉತ್ಸವದಲ್ಲಿ ಭಾಗಿಯಾಗುವಿರಿ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದನ್ನೂ ಓದಿ: ಕಾಳೇನ ಅಗ್ರಹಾರ ಕೆರೆಗೆ ಭೇಟಿ ನೀಡಿ ಸಸಿನೆಟ್ಟ ನಿರ್ಮಲಾ ಸೀತಾರಾಮನ್
ಹಿಂದೂ ಸಮಾರಂಭಗಳಲ್ಲಿ ಕನ್ನಡಿಗರು ಭಾಗವಹಿಸುವುದಕ್ಕೂ ರೆವಲ್ಯೂಷನರಿ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ಆಕ್ಷೇಪಿಸಿದ್ದಾರೆ. ಇದಲ್ಲದೇ ನಾವು ನಿಮಗೆ ‘ಅಕ್ರಮ ವಲಸಿಗರು’ ಅಂತಾ ಹೇಳಲು ಪ್ರಚೋದಸುತ್ತೀರಿ ಎಂದು ಹೇಳಿದ್ದರು.