CrimeDistrictsKarnatakaLatestLeading NewsMain PostTumakuru

ಅಪಘಾತದಲ್ಲಿ ಪ್ರಿಯಕರ ಸಾವು- ಆಘಾತಗೊಂಡ ಪ್ರಿಯತಮೆ ಆತ್ಮಹತ್ಯೆ

ತುಮಕೂರು: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.

ಧನುಷ್(23), ಸುಷ್ಮಾ(22) ಮದುವೆಯಾಗ ಬೇಕಾಗಿದ್ದ ಮೃತ ದುರ್ದೈವಿಗಳು. ಧನುಷ್ ಮತ್ತು ಸುಷ್ಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರು ಸೇರಿ ಮದುವೆಗೆ ಮನೆಯವರನ್ನು ಒಪ್ಪಿಸಿದ್ದರು. ಆದರೆ ಮೇ 11 ರಂದು ಧನುಷ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮೇ 14 ರಂದು ರಾತ್ರಿ ಸುಷ್ಮಾ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ:  ಕಾಳೇನ ಅಗ್ರಹಾರ ಕೆರೆಗೆ ಭೇಟಿ ನೀಡಿ ಸಸಿನೆಟ್ಟ ನಿರ್ಮಲಾ ಸೀತಾರಾಮನ್ 

ನಡೆದಿದ್ದೇನು?
ತುಮಕೂರುನ ಮಸ್ಕಲ್ ಗ್ರಾಮದ ಧನುಷ್, ಮೇ 11 ರಂದು ನೆಲಮಂಗಲ ಕುಲಾನಹಳ್ಳಿ ಬಳಿ ಊರಿನ ಜಾತ್ರೆಗೆ ಬರುವ ವೇಳೆ ಅಪಘಾತ ನಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅರೆಹಳ್ಳಿ ಗ್ರಾಮದ ಸುಷ್ಮಾ ಈ ಸುದ್ದಿ ಕೇಳಿ ಆಘಾತಗೊಂಡಿದ್ದು, ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಳು. ಅಂದಿನಿಂದ ಸುಷ್ಮಾ, ಧನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದಳು. ಈ ಹಿನ್ನೆಲೆ ಸುಷ್ಮಾ ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

ತಕ್ಷಣ ಕುಟುಂಬಸ್ಥರು ಸುಷ್ಮಾಳನ್ನು ನಾಲ್ಕೈದು ಆಸ್ಪತ್ರೆಗೆ ಕರೆದುಕೊಂಡು ಸುತ್ತಿದ್ರೂ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದಾಳೆ. ಸುಷ್ಮಾ ಎಂ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಧನುಷ್ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದರು. ಇವರಿಬ್ಬರ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿದ ನಂತರ ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಆದರೆ ಈಗ ಇವರಿಬ್ಬರು ಸಾವಿನಲ್ಲಿ ಒಂದಾಗಿದ್ದಾರೆ.  ಇದನ್ನೂ ಓದಿ:  ಆ್ಯಸಿಡ್ ಹಾಕಿ ನಾಪತ್ತೆಯಾಗಿದ್ದ ನಾಗೇಶ್ ವಿದ್ಯಾರ್ಥಿಯಿಂದ ಅರೆಸ್ಟ್!

ಪ್ರಸ್ತುತ ಪ್ರಕರಣ ಹೆಬ್ಬೂರು ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published.

Back to top button