ನವದೆಹಲಿ: ಬಿಸಿಸಿಐ ಕೆಲ ದಿನಗಳ ಹಿಂದೆಯಷ್ಟೇ 2019ರ ವಿಶ್ವಕಪ್‍ಗೆ 15 ಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ವಿಶ್ವಕಪ್‍ಗೆ ತೆರಳುವ ಕುರಿತು ಅನುಮಾನಗಳು ಮೂಡಿದೆ.
ಕಾಫಿ ವಿಥ್ ಕರಣ್ ಶೋನಲ್ಲಿ ಮಹಿಳೆಯರಿಗೆ ಅಗೌರವ ತೋರಿ ಮಾತನಾಡಿದ್ದರ ಕುರಿತು ತನಿಖೆ ಮುಂದುವರಿದಿದೆ. ಏಪ್ರಿಲ್ 09 ಮತ್ತು 10 ರಂದು ರಾಹುಲ್, ಪಾಂಡ್ಯ ಸುಪ್ರೀಂ ಕೋರ್ಟ್ ನೇಮಕ ಮಾಡಿದ ನ್ಯಾ. ಡಿಕೆ ಜೈನ್ ಅವರ ಎದುರು ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಆದರೆ ಈ ವರದಿಯನ್ನು ನ್ಯಾಯಮೂರ್ತಿಗಳು ಬಿಸಿಸಿಐಗೆ ಸಲ್ಲಿಸಬೇಕಿದೆ.
ಒಂದೊಮ್ಮೆ ಕಾರ್ಯಕ್ರಮದಲ್ಲಿ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿದ್ದಾರೆ ಎಂಬುವುದು ತೀರ್ಮಾನವಾದರೆ ಅವರ ಮೇಲೆ ಮತ್ತೆ ನಿಷೇಧ ವಿಧಿಸುವ ಸಾಧ್ಯತೆ ಇದೆ. ವಿಶ್ವಕಪ್ ಆಟಗಾರರ ಪಟ್ಟಿಯನ್ನು ಬದಲಾವಣೆ ಮಾಡಲು ಐಸಿಸಿ 23ರ ವರೆಗೂ ಅವಕಾಶ ನೀಡಿದ ಪರಿಣಾಮ ಬಿಸಿಸಿಐ ಆಟಗಾರರ ಬದಲಿಯಾಗಿ ಆಯ್ಕೆ ಮಾಡಲು ಅವಕಾಶ ಪಡೆದಿದೆ. ಈ ಇಬ್ಬರು ಆಟಗಾರರ ನಿಷೇಧವಾದರೆ ಬಿಸಿಸಿಐ ಘೋಷಿಸಿರುವ ಸ್ಟ್ಯಾಂಡ್ ಬೈ ಪ್ಲೇಯರ್ ಗೆ ಅವಕಾಶವನ್ನು ಪಡೆಯುತ್ತಾರೆ.
ಇಬ್ಬರು ಕ್ರಿಕೆಟಿಗರೊಂದಿಗೆ ಮಾತನಾಡಿದ ಬಳಿಕ ಹೇಳಿಕೆ ನೀಡಿದ್ದ ನ್ಯಾ. ಜೈನ್ ಅವರು, ಘಟನೆ ಬಗ್ಗೆ ಅಗತ್ಯ ವಿವರಗಳನ್ನು ನೀಡಿದ್ದಾರೆ. ಈ ಬಗ್ಗೆ ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದ್ದರು.