ಚಿಕ್ಕಮಗಳೂರು: ಉತ್ತರ ಕನ್ನಡದ ಶಿರೂರು (Shiruru Landslide), ಕೇರಳದ ವಯನಾಡು (Wayanad Landslide) ಪ್ರಕರಣ ಬೆನ್ನಲ್ಲೇ ಕಾಫಿನಾಡಿನ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಚಾರ್ಮಾಡಿ ಘಾಟ್ (Charmadi Ghat) ಆರಂಭದ ಸ್ಥಳವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ (Kottigehara Check Post) ಬಳಿ ಡಿಆರ್ ತುಡಿಯನ್ನು ನಿಯೋಜಿಸಿದೆ.
ನಿರಂತರ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು-ಮಂಗಳೂರಿಗೆ (Chikkamagaluru-Mangaluru) ಸಂಪರ್ಕ ಕಲ್ಪಿಸುವ ಬೆಟ್ಟಗುಡ್ಡಗಳ ಮಾರ್ಗ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾವುದೇ ರೀತಿಯ ಅನಾಹುತ ಸಂಭವಿಸುವ ಸಾಧ್ಯತೆ ಇರುವುರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ವಯನಾಡು ಭೂಕುಸಿತ; ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬೆಟ್ಟದಲ್ಲಿ ಕಾವಲಾಗಿ ನಿಂತ ಗಜರಾಜ
Advertisement
Advertisement
ಡಿಆರ್ ವ್ಯಾನ್‌ನಲ್ಲಿ ಯಾವಾಗಲೂ ಓರ್ವ ಅಧಿಕಾರಿ ಸೇರಿ 7-8 ಸಿಬ್ಬಂದಿ ಇರುತ್ತಾರೆ. ಒಂದು ವೇಳೆ ಭಾರೀ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಏನಾದರೂ ಅನಾಹುತ ಸಂಭವಿಸದರೆ ತಕ್ಷಣ ಅಲ್ಲಿನವರ ಸಹಾಯಕ್ಕೆ ಪೊಲೀಸರು ಅಲರ್ಟ್ ಅಗಲಿದ್ದಾರೆ. ಈ ಕಾರಣಕ್ಕೆ ಕೊಟ್ಟಿಗೆಹಾರದಲ್ಲೇ ಒಂದು ವ್ಯಾನ್ ನಿಯೋಜಿಸಿದ್ದಾರೆ.
Advertisement
ಈ ಮಾರ್ಗ ಬೆಟ್ಟ-ಗುಡ್ಡಗಳ ನಡುವೆ 22 ಕಿ.ಮೀ. ಸಾಗಬೇಕಾಗಿದ್ದು, ಅತ್ಯಂತ ಅಪಾಯಕಾರಿಯಾಗಿದೆ. 2019 ರಿಂದಲೂ ಪ್ರತಿ ವರ್ಷ ಚಾರ್ಮಾಡಿ ಘಾಟಿ ಕುಸಿತಕ್ಕೊಳಗಾಗುತ್ತಲೇ ಇದೆ. ಚಾರ್ಮಾಡಿ ಘಾಟಿಯ ಒಂದು ಬದಿ ಬೆಟ್ಟ-ಗುಡ್ಡಗಳಿಂದ ಕೂಡಿದ್ರೆ ಮತ್ತೊಂದು ಬದಿ ಸಾವಿರಾರು ಅಡಿ ಪ್ರಪಾತ. ಹೀಗಾಗಿ ಇಲ್ಲಿ ಪೊಲೀಸರು ಯಾವಾಗಲೂ ಸರ್ವ ಸನ್ನದ್ಧರಾಗಿದ್ದಾರೆ.
Advertisement
ಕೇರಳದ ವಯನಾಡು ದುರಂತದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಆತಂಕ ಮನೆಮಾಡಿದೆ. ಶಿರಾಡಿಘಾಟ್ ರಸ್ತೆಯ ಸಂಚಾರ ಕೂಡ ಡೋಲಾಯಮಾನವಾಗಿರುವ ಹಿನ್ನಲೆ ಚಾರ್ಮಾಟಿ ಘಾಟಿಯಲ್ಲಿ ಚಾಲಕರು ಭಯದಿಂದಲೇ ವಾಹನ ಚಲಾಯಿಸುವಂತಾಗಿದೆ. ಇದನ್ನೂ ಓದಿ: ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ
ಚಾರ್ಮಾಡಿ ಘಾಟಿಯಲ್ಲಿ 2019ರಲ್ಲಿ ಭಾರೀ ಭೂ ಕುಸಿತದಿಂದ 6 ತಿಂಗಳು ಬಂದ್ ಆಗಿತ್ತು. ಈ ವರ್ಷ ಸುರಿಯುತ್ತಿರುವ ಭಾರೀ ಮಳೆಗೆ ಮರಗಳು, ಗುಡ್ಡಗಳಲ್ಲಿ ಭೂ ಕುಸಿತ ಕೂಡ ಉಂಟಾಗುತ್ತಿದೆ. 2019ರಲ್ಲಿ ಭೂಕುಸಿತದ ಜಾಗದಲ್ಲಿ ಆಗಿದ್ದ ದುರಸ್ಥಿ ಕಾಮಗಾರಿ ಕೂಡ ಬಿರುಕು ಬಿಟ್ಟಿದೆ.